ಶಾಸಕ ಸಮೃದ್ಧಿ ಮಂಜುನಾಥ್ ಸಲಹೆ, ಜೆ.ಅಗ್ರಹಾರ ಡೇರಿ ಕಟ್ಟಡ ನಿಮಾರ್ಣಕ್ಕೆ 2 ಲಕ್ಷ ರೂ. ಅನುದಾನ
ಮುಳಬಾಗಿಲು:ತಾಲೂಕಿನ ಎಲ್ಲ್ಲ ಗ್ರಾಮಗಳಲ್ಲಿ ಸಹಕಾರಿ ಹಾಲಿನ ಡೇರಿಗಳು ಆರಂಭಗೊಳ್ಳಬೇಕು. ಈಗ ಇರುವ ಗ್ರಾಮಗಳಲ್ಲಿ ಡೇರಿಗಳು ರಾಜಕೀಯರಹಿತ ಚಟುವಟಿಕೆ ಆರಂಭಿಸಿ ಸಹಕಾರಿ ತತ್ವಗಳನ್ನು ಬಲಪಡಿಸಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಹೇಳಿದರು.
ತಾಲೂಕಿನ ಜೆ.ಅಗ್ರಹಾರ ಗ್ರಾಮದ ಹಾಲಿನ ಡೇರಿ ಮೇಲಂತಸ್ತಿನ ಕಟ್ಟಡ ನಿಮಾರ್ಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕಟ್ಟಡ ನಿಮಾರ್ಣಕ್ಕೆ ಶಾಸಕರ ಅನುದಾನದಲ್ಲಿ 2 ಲಕ್ಷ ರೂ. ಅನುದಾನ ನೀಡುತ್ತಿದ್ದು, ಹಾಲು ಒಕ್ಕೂಟ ಮತ್ತು ಕೆಎಂಎ್ನಿಮದ ಸಿಗುವ ಅನುದಾನದ ಜತೆಗೆ ಸ್ಥಳಿಯವಾಗಿಯೂ ಸಂಪನ್ಮೂಲ ಸಂಗ್ರಹದ ಮೂಲಕ ಕಟ್ಟಡ ನಿರ್ಮಾಣ ಕಾರ್ಯ ಶ್ರೀ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.
ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಮಾತನಾಡಿ, ಕೋಚಿಮುಲ್ ಈಗ ವಿಭಜನೆಗೊಂಡು ಕಾರ್ಯಾರಂಭ ಮಾಡಿದೆ. ಈ ಹಿಂದೆ ಇದ್ದ 11.55 ಲಕ್ಷ ಲೀಟರ್ ಹಾಲು ಈಗ ಕೋಲಾರ ಒಕ್ಕೂಟಕ್ಕೆ 7ಲಕ್ಷಕ್ಕೆ ಸೀಮಿತಗೊಳ್ಳಲಿದೆ. ಈ ಪ್ರಮಾಣವನ್ನು ಹೆಚ್ಚಿಸಲು ಎಲ್ಲ ಗ್ರಾಮಗಳಲ್ಲಿ ಹಾಲಿನ ಡೇರಿಗಳು ಆರಂಭಗೊಳ್ಳಬೇಕು. ಜತೆಗೆ ಹಾಲು ಉತ್ಪಾದನೆ ಹೆಚ್ಚಿಸಿಕೊಳ್ಳುವ ಮೂಲಕ ಒಕ್ಕೂಟಕ್ಕೆ ಬಲ ತುಂಬಬೇಕು ಎಂದು ಸಲಹೆ ನೀಡಿದರು.
ಖಾಸಗಿ ಡೇರಿಗಳು ಎಂದಿಗೂ ರೈತನ ನೆರವಿಗೆ ಇರುವುದಿಲ್ಲ. ಹಾಗಾಗಿ ಸಹಕಾರಿ ಹಾಲು ಡೇರಿಗಳು ಸಮಾಜ ಕಟ್ಟುವ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇರಬೇಕಾಗುತ್ತದೆ. ಗೋವಿನಿಂದ ಗ್ರಾಹಕನವರೆಗೂ ಹಾಲಿನ ಶ್ರೇಷ್ಠತೆ ಕಾಪಾಡಿಕೊಳ್ಳಲು ಆದ್ಯತೆ ನೀಡುವ ಮೂಲಕ ನಂದಿನಿ ಉತ್ಪನ್ನಗಳ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದರು.
ಮಾವು ಮಂಡಳಿ ಮಾಜಿ ಅಧ್ಯಕ್ಷ ಎಂ.ಕೆ.ವಾಸುದೇವ್, ತಾಲೂಕು ಆರಾಧನಾ ಸಮಿತಿ ಮಾಜಿ ಅಧ್ಯಕ್ಷ ಅನಂತಪದ್ಮನಾಭರಾವ್, ಜಿಪಂ ಮಾಜಿ ಸದಸ್ಯ ಬಿ.ವಿ.ಚಾಮೇಗೌಡ, ರೋಟರಿ ಮುಳಬಾಗಿಲು ಸೆಂಟ್ರಲ್ ಅಧ್ಯಕ್ಷ ನಗವಾರ ಎನ್.ಆರ್.ಸತ್ಯಣ್ಣ, ಜೆಡಿಎಸ್ ಮುಖಂಡರಾದ ಎಂ.ಗೊಲ್ಲಹಳ್ಳಿ ಪ್ರಭಾಕರ್, ದೊಮ್ಮಸಂದ್ರ ಡಿ.ವಿ.ಆರ್. ರಘುಪತಿ ಗೌಡ, ಕೋಮುಲ್ ಉಪ ವ್ಯವಸ್ಥಾಪಕ ಡಾ.ಕಿರಣ್ ಇತರರಿದ್ದರು.