ಬಾಗಲಕೋಟೆ: ರಾಜ್ಯದ ಪ್ರತಿಷ್ಠಿತ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ತಾಲೂಕಿನ ತುಳಸಿಗೇರಿಯ ಶ್ರೀಮಾರುತೇಶ್ವರ ಜಾತ್ರಾ ಮಹೋತ್ಸವ ಡಿ.೧೪ ರಂದು ನಡೆಯಲಿದ್ದು, ಸುವ್ಯವಸ್ಥಿತ ಜಾತ್ರಾ ಮಹೋತ್ಸವಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲವಾಗಬಾರದು ಅಂತ ಜಿ¯್ಲÁಡಳಿತ ಹಾಗೂ ಸಿಬ್ಬಂದಿ ವರ್ಗ, ದೇವಾಲಯದ ಪೂಜಾರರು, ಗ್ರಾಪಂನವರು ಸಕಲ ಸಿದ್ದತೆ ಮಾಡಿಕೋಳ್ಳುತ್ತಿz್ದÁರೆ. ಈ ವರ್ಷದ ಜಾತ್ರೆಯ ಮೋದಲ ಕಾರ್ತಿಕೋತ್ಸವ ಡಿ. ೧೪ ರಂದು ನಡೆಯಲಿದೆ. ಮರಿಕಾರ್ತಿಕೋತ್ಸವ ಡಿ.೨೧, ೨೨ ರಂದು ನಡೆಯಲಿದ್ದು, ದೇವಾಲಯದ ಸುತ್ತಮುತ್ತಲಿನ ಆವರಣ ಸ್ವಚ್ಚಗೊಳಿಸಲಾಗಿದೆ.
ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ಸುಸಜ್ಜಿತ ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಾಲಯದ ಮುಂದಿನ ಭಾಗದಲ್ಲಿ ಕಾರ್ಯಲಯದ ಹಿಂದೆ ಮಹಿಳೆಯರಿಗೆ ತಾತಕ್ಕಾಲಿಕ ಸ್ನಾನ ಗೃಹಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಎಡ ಬಾಗದಲ್ಲಿ ಪುರುಷರಿಗೆ ತಾತ್ಕಾಲಿಕ ಸ್ನಾನದ ಗೃಹಗಳನ್ನು ನಿರ್ಮಿಸಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಮಾಡಲಾಗಿದೆ.ಆಗಮಿಸುವ ಸಹಸ್ರಾರು ಭಕ್ತರಿಗೆ ಯಾವುದೇ ತೋದರೆಯಾಗದಂತೆ ಎ¯್ಲÁ ಅಗತ್ಯ ಕ್ರಮಗಳನ್ನು ತೆಗೆದುಕೋಳ್ಳಲಾಗಿದೆ ಎಂದು ಬಾಗಲಕೋಟ ತಹಸೀಲ್ದಾರ ಅಮರೇಶ ಪಮ್ಮಾರ ತಿಳಿಸಿz್ದÁರೆ.
ವ್ಯವಸ್ಥೆಗೆ ಅಽಕ ಸಿಬ್ಬಂದಿ: ಡಿ ೧೪, ೧೫ ಮತ್ತು ೨೧, ೨೨ ರಂದು ಜಿ¯್ಲೆಯ ನಾನಾ ಭಾಗದಿಂದ ಅಽಕ ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಎಲ್ಲವೂ ವ್ಯವಸ್ಥಿತವಾಗಿ ನಡೆಯಲು ಈ ದಿನದಲ್ಲಿ ೧೯ ಕಂದಾಯ ಅಽಕಾರಿಗಳು ಮತ್ತು ೩೮ ಗ್ರಾಮ ಸಹಾಯಕರು ಕಾರ್ಯ ನಿರ್ವಹಿಸಲಿz್ದÁರೆ. ಜಾತ್ರೆಯಲ್ಲಿ ದೇವಾಲಯದ ಒಳಗಡೆ ಮತ್ತು ಹೊರಗಡೆ ೧೬ ಸಿ.ಸಿ.ಟಿ.ವಿ ಕಣ್ಗಾವಲು ಇರಲಿದೆ, ತುರ್ತು ವೈದ್ಯಕೀಯಯ ಚಿಕಿತ್ಸೆಯೂ ಲಭ್ಯತೆ ಇರಲಿದೆ.