ಡಿ.ಕೆ. ಸಹೋದರರ ವಿರುದ್ಧ ಬಿಜೆಪಿ ದೂರು: ಅಭ್ಯರ್ಥಿಯ ಪ್ರಚಾರಕ್ಕೆ ಅಡ್ಡಿ ಹಿನ್ನೆಲೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಕನಕಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ಅಡ್ಡಿಪಡಿಸುವ ಮತ್ತು ಭಯದ ವಾತಾವರಣವನ್ನು ಡಿ.ಕೆ. ಶಿವಕುಮಾರ್ ಸಹೋದರರು ನಿರ್ಮಾಣ ಮಾಡುತ್ತಿದ್ದು, ಕೇಂದ್ರ ಪಡೆಗಳನ್ನು ನಿಯೋಜಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಬಿಜೆಪಿ ಕೋರಿದೆ.

ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಎಸ್. ಪ್ರಕಾಶ್, ಬಿಜೆಪಿ ಅಭ್ಯರ್ಥಿ ಪ್ರಚಾರ ಮಾಡುವ ವೇಳೆ ಕಲ್ಲೆಸೆತ, ವಿರೋಧಿ ಘೋಷಣೆ ಕೂಗಿಸುವ ಪ್ರಯತ್ನ ಎರಡು ದಿನಗಳಿಂದ ನಡೆಯುತ್ತಿದೆ.

ಎಲ್ಲ ಮತಗಟ್ಟೆಗಳನ್ನೂ ಸೂಕ್ಷ್ಮ ಎಂದು ಪರಿಗಣಿಸಿ ಕೇಂದ್ರ ಪಡೆಗಳನ್ನು ನಿಯೋಜಿಸಿದರೆ ಮಾತ್ರ ಅಲ್ಲಿನ ಮತದಾರರು ಧೈರ್ಯ ತೋರಿ ಮತ ಚಲಾಯಿಸಲು ಆಗಮಿಸುತ್ತಾರೆ ಎಂದರು.