ಡಿಸಿ ಕಚೇರಿ ಮುಂದೆ ಸಿಎನ್‌ಸಿ ಪ್ರತಿಭಟನೆವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡವ ಬುಡಕಟ್ಟು ಜನಾಂಗದವರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೊಡವ ನ್ಯಾಷನಲ್ ಕೌನ್ಸಿಲ್‌ನಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ.ಯು.ನಾಚಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಕೊಡವ ಲ್ಯಾಂಡ್, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340/342 ವಿಧಿ ಪ್ರಕಾರ ಶೆಡ್ಯೂಲ್ ಲಿಸ್ಟ್‌ಗೆ ಸೇರ್ಪಡೆ ಗೊಳಿಸಬೇಕು. ಇಂಡಿಯನ್ ಆರ್ಮ್ಸ್ ಆಕ್ಟ್ 3 ಮತ್ತು 4ರನ್ವಯ ಬಂದೂಕನ್ನು ಪರವಾನಗಿ ಇಲ್ಲದೇ ಹೊಂದಲು ಕೊಡವರಿಗೆ ವಿಶೇಷ ರಿಯಾಯಿತಿ ಹಕ್ಕನ್ನು ಅಬಾಧಿತವಾಗಿ ಮುಂದುವರಿಸಲು ಇಂಡಿಯನ್ ಆರ್ಮ್ಸ್ ಆಕ್ಟ್‌ಗೆ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಸಿಎನ್‌ಸಿಯ ಪ್ರಮುಖರು ಭಾಗಹಿಸಿದ್ದರು.

Leave a Reply

Your email address will not be published. Required fields are marked *