ಡಿಎಆರ್ ತಂಡ ಚಾಂಪಿಯನ್

ಗದಗ: ನಗರದ ಕೆ.ಎಚ್. ಪಾಟೀಲ ಜಿಲ್ಲಾ ಮೈದಾನದಲ್ಲಿ ಕಳೆದ ಮೂರು ದಿನಗಳ ಕಾಲ ಜರುಗಿದ ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ ಡಿಎಆರ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಪುರುಷರ ವಿಭಾಗದಲ್ಲಿ ಪ್ರಶಾಂತ ಕಂಚೇರ ಹಾಗೂ ಮಹಿಳಾ ವಿಭಾಗದಲ್ಲಿ ಪಿ.ಎಂ. ಮಣ್ಣೂರ ವೀರಾಗ್ರಣಿ ಪ್ರಶಸ್ತಿ ಪಡೆದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಮಂಜುನಾಥ ಚವ್ಹಾಣ, ಕೊಪ್ಪಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ವಿಜೇತರಿಗೆ ಪ್ರಶಸ್ತಿ ಹಾಗೂ ಟ್ರೋಫಿ ವಿತರಿಸಿದರು.

ಸಿಪಿಐ, ಡಿಎಸ್​ಪಿ, ಎಸ್​ಪಿಗಳಿಗಾಗಿ ಜರುಗಿದ ಶಾಟ್​ಪುಟ್​ನಲ್ಲಿ ಎಸ್​ಪಿ ಕೆ. ಸಂತೋಷಬಾಬು ಪ್ರಥಮ, ಸಿಪಿಐ ಸುಧೀರ ಬೆಂಕಿ ದ್ವಿತೀಯ, ಸಿಪಿಐ ಬಾಲಚಂದ್ರ ಲಕ್ಕಮ್ ತೃತೀಯ. ಡಿಸ್ಕಸ್​ಥ್ರೋನಲ್ಲಿ ಎಸ್ಪಿ ಕೆ. ಸಂತೋಷಬಾಬು, ಸಿಪಿಐ ಸುಧೀರ ಬೆಂಕಿ ದ್ವಿತೀಯ, ಸಿಪಿಐ ವಿ.ವಿ. ನಾಯಕ ತೃತೀಯ. ಜಾವಲಿನ್ ಥ್ರೋನಲ್ಲಿ ಎಸ್ಪಿ ಕೆ. ಸಂತೋಷಬಾಬು ಪ್ರಥಮ, ಸಿಪಿಐ ಸುಧೀರ ಬೆಂಕಿ ದ್ವಿತೀಯ, ವಿ.ಕೆ. ಯಡಹಳ್ಳಿ ತೃತೀಯ.

ಪಿಎಸ್​ಐಗಳಿಗೆ ಜರುಗಿದ ಡಿಸ್ಕಸ್ ಥ್ರೋನಲ್ಲಿ ಕೃಷ್ಣ ಛೋಪಡೆ, ಎಸ್.ಬಿ. ಹಾಲಬಾವಿ, ಬಟಕುರ್ಕಿ, ಶಾಟ್​ಪುಟ್​ನಲ್ಲಿ ಕೃಷ್ಣ ಛೋಪಡೆ ಪ್ರಥಮ, ಎಲ್.ಕೆ. ಜೂಲಕಟ್ಟಿ ದ್ವಿತೀಯ, ಪಿ.ಪಿ. ಕನಕವಾಡಿ ತೃತೀಯ, ಜಾವಲಿನ್​ನಲ್ಲಿ ಕೃಷ್ಣ ಛೋಪಡೆ ಪ್ರಥಮ, ಪಿ.ಪಿ. ಕನಕನವಾಡಿ ದ್ವಿತೀಯ ಹಾಗೂ ಬಟಕುರ್ಕಿ ತೃತೀಯ ಸ್ಥಾನ ಪಡೆದರು.

ಪುರುಷ ಸಿಬ್ಬಂದಿಗಾಗಿ ನಡೆದ 100 ಮೀ. ಓಟದಲ್ಲಿ ಎಸ್.ಡಿ. ನಾಯಕ, ಮಂಜುನಾಥ ಕರ್ಜಗಿ, ಸಂಜೀವ ಕೊರಡೂರ, 200 ಮೀ. ಓಟದಲ್ಲಿ ಪ್ರಶಾಂತಿ ಸಿ.ಕೆ., ಶಿವಯ್ಯ ಮಠಪತಿ, ವೀರೇಶ ಬಿಸನಳ್ಳಿ, 400 ಮೀ. ಓಟದಲ್ಲಿ ಪ್ರಶಾಂತ ಕಂಚೇರ, ಎಂ.ಎಚ್. ಹೈಗರ, ಎ.ಆರ್. ಪಾಟೀಲ, 800 ಮೀ. ಓಟದಲ್ಲಿ ಎ.ಆರ್. ಪಾಟೀಲ, ಪಿ.ಎಲ್. ಮ್ಯಾಟಣ್ಣವರ, ಎಸ್.ಆರ್. ಮುನವಳ್ಳಿಮಠ, 1500 ಮೀ. ಓಟದಲ್ಲಿ ಎಂ.ಎಚ್. ಹೈಗರ, ಪಿ.ಎಲ್. ಮ್ಯಾಟಣ್ಣವರ, ಎ.ಡಿ. ನಾಯಕ, ಹೈಜಂಪ್​ನಲ್ಲಿ ಜಿ.ಎಸ್. ಕರಲಿಂಗಣ್ಣವರ, ಎಚ್.ಕೆ. ಹುಲ್ಲೂರ, ಬಿ.ವಿ. ಇನಾಮತಿ, ಲಾಂಗ್​ಜಂಪ್​ನಲ್ಲಿ ಎಸ್.ಬಿ. ವಾಲ್ಮೀಕಿ, ಪ್ರಶಾಂತ ಕಂಚೇರ, ಎಚ್.ಎಫ್. ಡಂಬಳ, ಶಾಟ್​ಪುಟ್​ನಲ್ಲಿ ಎಸ್.ಡಿ. ನಾಯಕ, ಪಿ.ಎಸ್. ಕಳ್ಳಿಮನಿ, ಖಾಜಾ ಮುಲ್ಲಾನವರ, ಡಿಸ್ಕಸ್ ಥ್ರೋನಲ್ಲಿ ಎನ್.ಎಫ್. ಹುಬ್ಬಳ್ಳಿ, ಬಿ.ಯು. ಇನಾಮತಿ, ಖಾಜಾ ಮುಲ್ಲಾನವರ, ಜಾವಲಿನ್ ಥ್ರೋನಲ್ಲಿ ಆರ್.ಪಿ. ಕಿಡಿಯಪ್ಪನವರ, ಪಿ.ಎಸ್. ಕಳ್ಳಿಮನಿ, ಎನ್.ಬಿ. ಪಾಸ್ತೆ ಹಾಗೂ ರೈಫಲ್​ನಲ್ಲಿ ಐ.ಎಸ್. ಸೈಪಣ್ಣವರ, ಎಂ.ಆರ್. ಬಾರಕೇರ, ಎಸ್.ಆರ್. ಮುನವಳ್ಳಿಮಠ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.