More

  ಡಿಆರ್‌ಆರ್ ಶಾಲೆಯಲ್ಲಿ ಸಾಂಸ್ಕೃತಿಕ ಮೇಳ  -ಅಮೃತ ವಿದ್ಯಾಲಯಕ್ಕೆ ಪಾರಿತೋಷಕ 

  ದಾವಣಗೆರೆ: ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ವಿದ್ಯಾಸಂಸ್ಥೆ ಸಂಸ್ಥಾಪಕ ಆರ್.ಆರ್.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ, ಮಂಗಳವಾರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಗರ ಮಟ್ಟದ ಸಾಹಿತ್ಯ – ಸಾಂಸ್ಕೃತಿಕ ಮೇಳದ ಸ್ಪರ್ಧೆಗಳಲ್ಲಿ ನಗರದ ಅಮೃತ ವಿದ್ಯಾಲಯವು ಸಮಗ್ರ ಪಾರಿತೋಷಕ ಪಡೆದಿದೆ.
  8ನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಭಾವಗೀತೆ, ಸಮೂಹ ಗೀತೆ, ಆಶುಭಾಷಣ, ಜ್ಞಾಪಕ ಶಕ್ತಿ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. 17ಕ್ಕೂ ಹೆಚ್ಚು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
  ಎಲ್ಲ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಲ್ಲ ವಿಭಾಗದಲ್ಲೂ ಅತಿ ಹೆಚ್ಚು ಅಂಕ ಪಡೆದ ಅಮೃತ ವಿದ್ಯಾಲಯ, ಪಾರಿತೋಷಕ ಪಡೆದುಕೊಂಡಿತು. ಸ್ಪರ್ಧೆಗಳಿಗೆ ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್ ಚಾಲನೆ ನೀಡಿದರು.
  ಸಂಜೆ ಆಯೋಜಿಸಿದ್ದ ಸಮಾರೋಪದಲ್ಲಿ ತ್ಯಾವಣಗಿ ಸರ್ಕಾರಿ ಪ.ಪೂ. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಮಹಾಂತೇಶ್ ಬಿ. ನಿಟ್ಟೂರು ಬಹುಮಾನ ವಿತರಿಸಿದರು. ಲೇಖಕ ಗಂಗಾಧರ ಬಿ.ಎಲ್. ನಿಟ್ಟೂರು ಮಾತನಾಡಿದರು.
  ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಆಡಳಿತಾಧಿಕಾರಿ ಎಂ.ಬಸವರಾಜಪ್ಪ, ರಜನಿ ಕುಲಕರ್ಣಿ, ಭೋಜರಾಜ್ ಯಾದವ್, ಎ.ಎಂ.ಬಸವನಗೌಡ, ಕೆ.ಎಲ್.ರಾಧಾ, ಟಿ ಮಹೇಶನ್, ಶಿವಾನಂದಯ್ಯ, ಮೂಗುಬಸಪ್ಪ ಸಮಾರಂಭದಲ್ಲಿ ಹಾಜರಿದ್ದರು . ಮುಖ್ಯಶಿಕ್ಷಕ ಎಚ್.ಎಸ್.ಹಾಲೇಶ್ ಹಂಚಿನಮನೆ ನಲ್ಕುದುರೆ ಸ್ಪರ್ಧೆಗಳ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts