ಡಾ.ಪ್ರಭಾಕರ ಕೋರೆಗೆ ಜನ್ಮದಿನದ ಸಂಭ್ರಮ

blank

ಬೆಳಗಾವಿ: ರಾಜ್ಯಸಭಾ ಮಾಜಿ ಸದಸ್ಯ, ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಬೆಳಗಾವಿ ನಗರದ ಕ್ಯಾಂಪ್​ ಪ್ರದೇಶದ ತಮ್ಮ ನಿವಾಸದಲ್ಲಿ ಸೋಮವಾರ 75ನೇ ಜನ್ಮದಿನ ಆಚರಿಸಿಕೊಂಡರು. ಜಿಲ್ಲೆಯ ಜನಪ್ರತಿನಿಧಿಗಳು, ನಗರದ ಗಣ್ಯ ವ್ಯಕ್ತಿಗಳು ಹಾಗೂ ಕೆಎಲ್​ಇ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಸಿಬ್ಬಂದಿ ಬೆಳಗ್ಗೆ ಅವರ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡಿ ಶುಭಕೋರಿದರು.

ಡಾ.ಪ್ರಭಾಕರ ಕೋರೆ ಅವರು ತಮ್ಮ ನಿವಾಸಕ್ಕೆ ಆಗಮಿಸಿದ್ದ ಗಣ್ಯರೊಂದಿಗೆ ಉಪಾಹಾರ ಸವಿದರು. ಕೋರೆ ಅವರು ಪ್ರತಿವರ್ಷ ತಮ್ಮ ಜನ್ಮದಿನದಂದು ಸಾಮಾನ್ಯವಾಗಿ ತೀರ್ಥಕ್ಷೇತ್ರಗಳಿಗೆ ತೆರಳುತ್ತಿದ್ದರು. ಆದರೆ, ಈ ವರ್ಷ ಜನ್ಮದಿನವನ್ನು ಮನೆಯಲ್ಲಿದ್ದುಕೊಂಡು ಆಚರಿಸಿದರು. ಹೀಗಾಗಿ ಅಪಾರ ಸಂಖ್ಯೆಯಲ್ಲಿ ಅವರ ಹಿತೈಷಿಗಳು, ಒಡನಾಡಿಗಳು, ಸ್ನೇಹಿತರು ಹಾಗೂ ಸಂಸ್ಥೆಯ ಸಿಬ್ಬಂದಿ ಆಗಮಿಸಿ ಹರಸಿದರು. ಕೆಎಲ್​ಇ ಸಂಸ್ಥೆಯ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್​ ವಿತರಿಸಿದರು.

ಸಾವಿರಕ್ಕೂ ಅಧಿಕ ರೋಗಿಗಳ ತಪಾಸಣೆ: ಡಾ. ಪ್ರಭಾಕರ ಕೋರೆ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆಎಲ್​ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕಿಯ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಕರೊನಾ ಹಾಗೂ ಹೆಪಟೈಟಿಸ್​ ಬಿ ಮತ್ತು ಸಿ ವ್ಯಾಕ್ಸಿನ್​, ಪೈಬ್ರೋ ಸ್ಕಾನ್​ ಬೋನ್​ ಡೆನ್ಸಿಟಿ ಸೇರಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು. ಬಳಿಕ ರೋಗಿಗಳಿಗೆ ಅಗತ್ಯ ಔಷಧೋಪಚಾರದ ಕುರಿತು ಸಲಹೆ ನೀಡಲಾಯಿತು.

ಔಷಧ, ಶಸಚಿಕಿತ್ಸೆ, ಎಲುಬು&ಕೀಲು, ಹೆರಿಗೆ ಮತ್ತು ಸಿರೋಗ, ಕಣ್ಣು, ಕವಿ, ಮೂಗು, ಗಂಟಲು, ಚರ್ಮ ವಿಭಾಗದಲ್ಲಿ ಉಚಿತ ತಪಾಸಣೆ ನಡೆಸಲಾಯಿತು. ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ.ಎಂ.ವಿ.ಜಾಲಿ ಅವರ ನೇತೃತ್ವದಲ್ಲಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಡಾ.ಪ್ರಭಾಕರ ಕೋರೆ ಅವರ ಸಾಧನೆಯನ್ನು ಬೃಹತ್​ ಪರದೆ ಮೂಲಕ ಪ್ರದರ್ಶಿಸಲಾಯಿತು. ಡಾ.ರಾ.ಜಶೇಖರ ಸೋಮನಟ್ಟಿ, ಡಾ.ಬಸವರಾಜ ಬಿಜ್ಜರಗಿ, ಶಕುಂತಲಾ ಕೋರೆ, ರೇಣುಕಾ ಜವಳಿ, ವೀರಾ ಭವಾಣೆ, ಶಂಕರ ಪರಸಣ್ಣವರ, ವಿನೋದ ದೇಶನೂರ ಇದ್ದರು.

ಪ್ರಭಾಕರ ಕೋರೆ ಕೊಡುಗೆ ಅನನ್ಯ: ಬೆಳಗಾವಿ: ಡಾ.ಪ್ರಭಾಕರ ಕೋರೆ ಅವರು ನಾಡಿಗೆ ಹಾಗೂ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಶಿಕ್ಷಣ ಆರೋಗ್ಯ ೇತ್ರಗಳಲ್ಲಿನ ಸೇವೆಯನ್ನು ಅಗಾಧವಾಗಿ ವಿಸ್ತರಿಸುವ ಮೂಲಕ ಜಾಗತಿಕ ಮನ್ನಣೆಗೆ ಪಾತ್ರರಾಗಿದ್ದಾರೆ ಎಂದು ಡಾ.ರಾಮಣ್ಣವರ ಚಾರಿಟೇಬಲ್​ ಟ್ರಸ್ಟ್​ ಕಾರ್ಯದರ್ಶಿ ಡಾ.ಮಹಾಂತೇಶ ರಾಮಣ್ಣವರ ಹೇಳಿದ್ದಾರೆ. ಬೈಲಹೊಂಗಲದ ಚಾರಿಟೇಬಲ್​ ಟ್ರಸ್ಟ್​ ಹಾಗೂ ಲಿಂಗರಾಜ ಕಾಲೇಜಿನ ಎನ್​ಸಿಸಿ ಟಕದ ವತಿಯಿಂದ ಡಾ.ಪ್ರಭಾಕರ ಕೋರೆ ಅವರ 75ನೇ ಜನ್ಮದಿನ ನಿಮಿತ್ತ ಬಸವನ ಕುಡಚಿಯ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮದಲ್ಲಿ ಹಣ್ಣು ವಿತರಿಸಿ ಮಾತನಾಡಿದ ಅವರು, ಕೃಷಿ, ಸಹಕಾರ ಹಾಗೂ ಔದ್ಯಮಿಕ ೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ ಎಂದರು. ಆಶ್ರಮದ ಅಧಿಕಾರಿ ಶ್ರೀ ಚೌಗಲೆ, ಸೌಮ್ಯ, ಎನ್​ಸಿಸಿ ಅಧಿಕಾರಿ ಡಾ.ಮಹೇಶ ಗುರನಗೌಡರ ಇದ್ದರು.

ಶುಭಾಶಯಗಳ ಮಹಾಪೂರ: ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ 75 ವಸಂತ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ವಿವಿಧ ಗಣ್ಯರು ಜನ್ಮದಿನ ಶುಭಾಶಯಗಳನ್ನು ಕೋರಿದರು. ಮಾಜಿ ಸಿಎಂ ಜಗದೀಶ ಶೆಟ್ಟರ್​, ವಿಆರ್​ಎಲ್​ ಸಮೂಹದ ಚೇರ್ಮನ್​ ಡಾ.ವಿಜಯ ಸಂಕೇಶ್ವರ, ಸಚಿವರಾದ ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಶಾಸಕ ರಮೇಶ ಜಾರಕಿಹೊಳಿ ಸೇರಿ ಅನೇಕ ಗಣ್ಯರು ಡಾ.ಕೋರೆ ಅವರಿಗೆ ಶುಭಾಷಯ ಕೋರಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ ಕೋರೆ ಅವರ ಕುಟುಂಬದ ಸದಸ್ಯರು ಹಾಗೂ ಕೆಎಲ್​ಇ ಸಂಸ್ಥೆಯ ಮಂಡಳಿ ಅಧ್ಯಕ್ಷ ಮಹಾಂತೇಶ ಕವಟಗಿಮಠ, ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಅಮಿತ ಕೋರೆ, ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಇತರರು ಇದ್ದರು.

Share This Article

ಬ್ರೆಡ್​​ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್​; ಇಲ್ಲಿದೆ ಸಿಂಪಲ್​ ವಿಧಾನ | Recipe

ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…