ಡಾ. ಎಂ.ಎನ್.ಆರ್. ವಿರುದ್ಧ ಸ್ಪರ್ಧೆ ಖಚಿತ ಎಂದ ಜನಾರ್ದನ ಪೂಜಾರಿ

ಮಂಗಳೂರು: ಲೋಕಸಭಾ ಚುನಾವಣಾ ಕಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಎಸ್​ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಸಂಸದೀಯ ಕಾರ್ಯದರ್ಶಿ ಇವಾನ್​ ಡಿಸೋಜ ಸ್ಫರ್ಧಿಸಿದರೆ ವಿರುದ್ಧ ತಾವು ಸ್ಪರ್ಧಿಸುವುದು ಖಚಿತ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಎಂಎನ್.  ವಿರುದ್ಧ ಭ್ರಷ್ಟಾಚಾರದ ಆರೋಪವಿದೆ. ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡಬಾರದು. ಎರಡು ದಿನಗಳಲ್ಲಿ ಹೈಕಮಾಂಡ್ ಭೇಟಿ ಮಾಡಲಾಗುವುದು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೇರಿ ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗುವುದು ಎಂದರು.

ಮೋದಿ ಅವರು ಒಳ್ಳೆಯ ಆಡಳಿತಗಾರ. ಭ್ರಷ್ಟಾಚಾರ ವಿರೋಧಿ. ಅವರಿಗೆ ನನ್ನ ಬೆಂಬಲವಿದೆ. ದೇವೇಗೌಡರು ಕಣ್ಣೀರು ಹಾಕಿರುವುದನ್ನು ಬಿಜೆಪಿ ವ್ಯಂಗ್ಯ ಮಾಡಿರುವುದು ಖಂಡನೀಯ. ಗೌಡರು ಒಳ್ಳೆಯ ಮನುಷ್ಯ ಎಂದು ಪೂಜಾರಿ ಹೇಳಿದರು.