ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಎರಡನೇ ವಾರ್ಡ್‌ನ ಸುಂದರನಗರದಲ್ಲಿ ನಡೆಯುತ್ತಿರುವ 5 ಲಕ್ಷ ರೂ.ವೆಚ್ಚದ ಡಾಂಬರ್ ರಸ್ತೆ ಕಾಮಗಾರಿಯನ್ನು ಗ್ರಾಪಂ ಸದಸ್ಯ ಕೆ.ಬಿ.ಶಂಶುದ್ದೀನ್ ಗುರುವಾರ ಪರಿಶೀಲನೆ ನಡೆಸಿದರು.
ಸುಂದರನಗರ ಗ್ರಾಮದ ಜಾನ್ ಮಾರ್ಟಿನ್ ಹಾಗೂ ವಿಲ್ಮಾ ಅವರ ಮನೆಯಿಂದ ಕೋರೆ ರಸ್ತೆ ಬಳಿಯಿರುವ ಸವಿತಾ ಜೀವನ್ ಅವರ ಮನೆವರೆಗೆ ಡಾಂಬರು ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಮೂರು ಮೀಟರ್ ಅಗಲದ ಹಾಗೂ 220 ಮೀಟರ್ ಉದ್ಧದ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ದೀನ್, ಗುತ್ತಿಗೆದಾರರ ಬಳಿ ಕಾಮಗಾರಿಯ ಗುಣಮಟ್ಟ ಕಾಪಾಡುವಂತೆ ಸೂಚಿಸಿದರು.