ಡಾಂಬರ್​ನಲ್ಲಿ ಸಿಲುಕಿದ್ದ ಶ್ವಾನ ರಕ್ಷಣೆ

ಧಾರವಾಡ: ಡಾಂಬರ್​ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಶ್ವಾನವೊಂದನ್ನು ಹುಬ್ಬಳ್ಳಿಯ ಹ್ಯುಮನ್ ಸೊಸೈಟಿ ಇಂಟರ್​ನ್ಯಾಷನಲ್ (ಎಚ್​ಎಸ್​ಐ) ಎನ್​ಜಿಒ ತಂಡ ರಕ್ಷಿಸಿ ಮರುಜೀವ ನೀಡಿದೆ.

ನಗರದ ಮುರುಘಾ ಮಠದ ಬಳಿ ಬೀದಿನಾಯಿಯೊಂದು ಮೈ ತುಂಬ ಡಾಂಬರ್​ನಿಂದ ಆವೃತಗೊಂಡಿತ್ತು. ಈ ಕುರಿತು ಸಾರ್ವಜನಿಕರೊಬ್ಬರು ಎಚ್​ಎಸ್​ಐ ಕಾರ್ಯಕರ್ತ ಓಂಕಾರ್ ಎಂಬುವರಿಗೆ ಮಾಹಿತಿ ನೀಡಿದ್ದರು. ತಂಡದ ಸದಸ್ಯರು ಸ್ಥಳಕ್ಕೆ ಹೋಗಿ ನೋಡಿದಾಗ ಮುಖ ಹೊರತುಪಡಿಸಿ ಮೈಯೆಲ್ಲ ಸಂಪೂರ್ಣ ಡಾಂಬರ್​ನಿಂದ ತುಂಬಿತ್ತು. 3 ದಿನಗಳಿಂದ ಅದೇ ಸ್ಥಿತಿಯಲ್ಲಿ ಶ್ವಾನ ಒದ್ದಾಡುತ್ತಿತ್ತು. 4 ಗಂಟೆ ಕಾರ್ಯಾಚರಣೆ ನಡೆಸಿದ ತಂಡದವರು ಸಂಪೂರ್ಣ ಅಡುಗೆ ಎಣ್ಣೆ ಬಳಸಿ ಶ್ವಾನದ ಮೈಗೆ ಅಂಟಿದ್ದ ಡಾಂಬರ್​ಅನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಿ ಈಗ ಗುಣಮುಖವಾಗುತ್ತಿದೆ. ಓಂಕಾರ್, ಪೂಜಾ, ಜೆಸಿಂತಾ, ಜಾಹ್ನವಿ, ಅಪರಂಜಿ, ಪ್ರೇರಣಾ, ವಿಜೇತಾ, ಅಪೂರ್ವಾ, ಪ್ರಿಯಾಂಕಾ ಶ್ವಾನ ರಕ್ಷಣೆಯಲ್ಲಿ ಶ್ರಮ ವಹಿಸಿದ್ದಾರೆ. ಪ್ರಾಣಿಗಳ ಮೇಲಿನ ಹಿಂಸೆ ತಡೆಗೆ ದೇಶಪಾಂಡೆ ಫೌಂಡೇಶನ್ ಸಹಯೋಗದೊಂದಿಗೆ ಎಚ್​ಎಸ್​ಐ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *