Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಡಬಲ್ ಟೋನ್ಡ್ ಮಿಲ್ಕ್ ಮಾರುಕಟ್ಟೆಗೆ

Thursday, 12.07.2018, 3:00 AM       No Comments

ತುಮಕೂರು : ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ತುಮುಲ್) ಕ್ಷೀರ ಕ್ರಾಂತಿ ಎದುರಿಸುವ ಜತೆಗೆ ಖಾಸಗಿ ಸಂಸ್ಥೆಗಳ ದರ ಸಮರ ಎದುರಿಸಲು ದಿಟ್ಟ ಹೆಜ್ಜೆ ಇಟ್ಟಿದೆ.

500 ಎಂಎಲ್ 14ರೂ. ಹಾಗೂ ಲೀಟರ್ ಹಾಲು 28 ರೂ.ಗೆ ಲಭ್ಯವಿರುವ ಡಬಲ್​ಟೋನ್ಡ್ ಹಾಲನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಬುಧವಾರ ತುಮಕೂರಿನಲ್ಲಿ ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ತುಮಕೂರಿನ ಹೊರವಲಯದಲ್ಲಿರುವ ತುಮುಲ್ ಕಚೇರಿ ಸಭಾಂಗಣದಲ್ಲಿ ಮಾಹಿತಿ ನೀಡಿದ ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ‘ನಂದಿನಿ’ ಬ್ರಾಂಡ್​ನಲ್ಲಿ ಹೊಸ ಮಾದರಿಯ ಡಬಲ್​ಟೋನ್ಡ್ ಹಾಲನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಹೇಳಿದರು.

ಹಾಲಿನ ಉತ್ಪಾದನೆ ಜಾಸ್ತಿಯಾದಂತೆ ಮಾರುಕಟ್ಟೆ ವಿಸ್ತರಣೆ ಆಗದ್ದರಿಂದ ಶೇಖರಣೆಯಾದ ಹಾಲನ್ನು ರಾಜ್ಯದ ಇತರೆ ಜಿಲ್ಲೆ, ಹೊರ ರಾಜ್ಯಗಳಿಗೆ ಡೇರಿ, ಒಕ್ಕೂಟಗಳಿಗೆ ಪರಿವರ್ತನೆಗಾಗಿ ರವಾನಿಸಲು ಸಾಕಷ್ಟು ವೆಚ್ಚವಾಗುತ್ತಿತ್ತು. ಮಾರುಕಟ್ಟೆ ವಿಸ್ತರಿಸಲು ಡಬಲ್​ಟೋನ್ಡ್ ಹಾಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದೇವೆ ಎಂದರು.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಾಲಿನಲ್ಲಿ ಶೇ.3.5 ಕೊಬ್ಬಿನಾಂಶ ಹಾಗೂ ಶೇ.8.5 ಜಿಡ್ಡೇತರ ಘನಾಂಶವಿದೆ. ಆದರೆ, ಈ ‘ಡಬಲ್​ಟೋನ್ಡ್’ ಹಾಲಿನಲ್ಲಿ ಶೇ.1.5ಕೊಬ್ಬಿನಾಂಶ ಹಾಗೂ 9.5 ಜಿಡ್ಡೇತರ ಘನಾಂಶವಿದೆ. ಕೊಬ್ಬಿನಾಂಶ ಕಡಿಮೆ ಮಾಡಿ ದರ ಕಡಿಮೆ ಮಾಡಲಾಗಿದೆ.

ತುಮುಲ್ ನಿರ್ದೇಶಕ ಸುರೇಶ್, ವ್ಯವಸ್ಥಾಪಕ ನಿರ್ದೇಶಕ ಮುನೇಗೌಡ ಇದ್ದರು.

ಆಂಧ್ರದ ಮಕ್ಕಳಿಗೆ ‘ತೃಪ್ತಿ’ : ತುಮಕೂರು ಘಟಕದಿಂದ ತಯಾರಾಗುವ 90 ದಿನ ಕೆಡದ ‘ತೃಪ್ತಿ’ ಹೆಸರಿನ ಟೋನ್ಡ್ ಹಾಲು ಆಂಧ್ರಪ್ರದೇಶದ ಸರ್ಕಾರಿ ಶಾಲೆ ಮಕ್ಕಳಿಗೆ ಪೂರೈಸಲಾಗುತ್ತಿದೆ. ಲೀಟರ್​ಗೆ 32.18 ರೂ. ಕೊಟ್ಟು ಆಂಧ್ರ ಸರ್ಕಾರ ಪ್ರತಿದಿನ ಕೊಳ್ಳಲಿದೆ. ತುಮುಲ್ ಪ್ಲೆಕ್ಸಿ ಪ್ಯಾಕ್ ಘಟಕ ಪ್ರತಿದಿನ 90 ಸಾವಿರ ಲೀ. ತಯಾರಾಗುತ್ತಿದೆ. ಸ್ಥಳೀಯ ಮಾರುಕಟ್ಟೆ ಜತೆಗೆ ಆಂಧ್ರ, ಜಮ್ಮುಕಾಶ್ಮೀರ, ಮುಂಬೈ ನಗರದಲ್ಲಿ ಮಾರುಕಟ್ಟೆ ಹೊಂದಿದೆ.

ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿ : ಜಿಲ್ಲೆಯಲ್ಲಿ ಮೇವಿನ ಅಭಾವ ದೂರವಾಗಿರುವುದರಿಂದ ಪ್ರತಿದಿನ 7.70ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದೆ. ನಿರ್ವಹಣೆ ಕಷ್ಟವಾಗಿದೆ. ಹೆಚ್ಚುವರಿ ಹಾಲು ಪರಿವರ್ತನೆಗಾಗಿ ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಹಾಗಾಗಿ, ಒಕ್ಕೂಟ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಒಕ್ಕೂಟ ಹಾಗೂ ರೈತರ ಹಿತದೃಷ್ಟಿಯಿಂದ ದರ ಇಳಿಕೆಗೆ ತುಮುಲ್ ಮುಂದಾಗಿದೆ. ಆರಂಭದಲ್ಲಿ 25000 ಲೀ. ಡಬಲ್ ಟೋನ್ಡ್ ಹಾಲು ಉತ್ಪಾದನೆಯಾಗಲಿದೆ.

ಖಾಸಗಿಯವರ ಪೈಪೋಟಿ ಎದುರಿಸಿ ನಂದಿನಿ ಹಾಲಿನ ಮಾರಾಟ ಹೆಚ್ಚಿಸುವ ಸವಾಲು ನಮ್ಮ ಮುಂದಿದೆ. ಶೇಖರಣೆಯಾಗುವ ಹಾಲನ್ನು ದ್ರವರೂಪದಲ್ಲಿಯೇ ಮಾರಾಟ ಮಾಡಲು ‘ಡಬಲ್ ಟೋನ್ಡ್’ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಿದ್ದೇವೆ.

| ಕೊಂಡವಾಡಿ ಚಂದ್ರಶೇಖರ್, ಅಧ್ಯಕ್ಷ, ತುಮುಲ್

Leave a Reply

Your email address will not be published. Required fields are marked *

Back To Top