ಠಾಣೆಯಿಂದ ಪೇದೆಗೆ ಸೀಮಂತ

ಪಟ್ಟನಾಯಕನಹಳ್ಳಿ: ಪ್ರೀತಿ, ವಾತ್ಸಲ್ಯ, ಕರುಣೆ ಪೊಲೀಸರಲ್ಲಿ ಮರೆಯಾಗುತ್ತಿದೆ ಎಂಬ ಅಪವಾದಕ್ಕೆ ತದ್ವಿರುದ್ಧ ಎಂಬಂತೆ ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ಶೀಲಾರಿಗೆ ಪಿಎಸ್​ಐ ವಿ.ನಿರ್ಮಲಾ ನೇತೃತ್ವದಲ್ಲಿ ಠಾಣೆ ಸಿಬ್ಬಂದಿ ಕುಟುಂಬದೊಂದಿಗೆ ಸ್ವಂತ ಖರ್ಚಿನಲ್ಲಿ ಸೀಮಂತ ನೆರವೇರಿಸುವ ಮೂಲಕ ಖಾಕಿಯೊಳಗೂ ಮರುಗುವ ಮನಸ್ಸಿದೆ ಎಂಬುದನ್ನು ಸಾರಿದ್ದಾರೆ.

ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶೀಲಾ ಕಳೆದ ವರ್ಷ ದೀಪಕ್ ಎಂಬುವವರೊಂದಿಗೆ ವಿವಾಹವಾಗಿದ್ದರು. ಬಾಲ್ಯದಲ್ಲಿಯೇ ತಾಯಿ ಕಳೆದುಕೊಂಡ ಶೀಲಾ, ತಂದೆ ಒತ್ತಾಸೆಯಂತೆ ಛಲ ಬಿಡದೆ ವ್ಯಾಸಂಗ ಮಾಡಿ ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದರು.

ತಾಯಿ ಇಲ್ಲದ ಮಾತ್ರಕ್ಕೆ ಶೀಲಾ ಒಬ್ಬಂಟಿಯಲ್ಲ. ತಾಯಿ ಸ್ಥಾನದಲ್ಲಿ ನಿಂತು ಸೀಮಂತ ಮಾಡಿಸುವುದು ಸಂತೋಷ ನೀಡಿದೆ. ನಾವೆಲ್ಲ ಒಂದೇ ಕುಟುಂಬ ಎಂಬ ಭಾವನೆಯೊಂದಿಗೆ ಸೀಮಂತ ಮಾಡಿರುವುದು ತೃಪ್ತಿ ನೀಡಿದೆ.

| ವಿ.ನಿರ್ಮಲಾ, ಪಿಎಸ್​ಐ ಪಟ್ಟನಾಯಕನಹಳ್ಳಿ ಠಾಣೆ

Leave a Reply

Your email address will not be published. Required fields are marked *