ಠಾಣಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗ: ಎಚ್ಚರಿಕೆ ಸಂಜೆ ಪತ್ರಿಕೆ ಸಂಪಾದಕ ವೈ.ಕೆ.ಸೂರ್ಯನಾರಾಯಣ ವಿರುದ್ಧ ಜಯನಗರ ಠಾಣೆಯಲ್ಲಿ ಕೇಸ್ ದಾಖಲಿಸಿರುವುದನ್ನು ಖಂಡಿಸಿ ಹಾಗೂ ಠಾಣಾಧಿಕಾರಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರೆಸ್​ಟ್ರಸ್ಟ್​ನಿಂದ ಶುಕ್ರವಾರ ಡಿಸಿಗೆ ಮನವಿ ಸಲ್ಲಿಸಿತು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನೆಪದಲ್ಲಿ ಸೂರ್ಯನಾರಾಯಣ ವಿರುದ್ಧ ಸಿಆರ್​ಪಿಸಿ 107ರ ಅನ್ವಯ ಕೇಸ್ ದಾಖಲಿಸಿ ಕಾನೂನು ಕ್ರಮಕ್ಕೆ ಆದೇಶಿಸಿದ ಪ್ರಕರಣವನ್ನು ಪ್ರೆಸ್​ಟ್ರಸ್ಟ್ ಖಂಡಿಸಿತು.

ಗೂಂಡಾಗಳ ಮೇಲೆ ಹಾಕುವ ಸಾರ್ವಜನಿಕ ಶಾಂತಿ ಹಾಗೂ ನೆಮ್ಮದಿ ಕದಡುವ ಕೇಸನ್ನು ಪತ್ರಕರ್ತನ ವಿರುದ್ಧ ದಾಖಲಿಸಿರುವುದು ಸುಳ್ಳಿನಿಂದ ಕೂಡಿದೆ. ಈ ಕೇಸ್ ದಾಖಲಿಸಿರುವ ಜಯನಗರ ಠಾಣಾಧಿಕಾರಿ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಮಾನತಿನಲ್ಲಿರಿಸಬೇಕು ಹಾಗೂ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಲಾಯಿತು.

ಪ್ರೆಸ್​ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಪತ್ರಕರ್ತರಾದ ಚಂದ್ರಕಾಂತ್, ಶೃಂಗೇಶ್, ಜೇಸá-ದಾಸ್, ಗೋಪಾಲ ಯಡಗೆರೆ, ಶೃಂಗೇರಿ ಚಂದ್ರಶೇಖರ್, ಹುಲಿಮನೆ ತಿಮ್ಮಪ್ಪ, ಚಂದ್ರಹಾಸ್ ಹಿರೇಮಳಲಿ, ರಂಜಿತ್, ರೋಹಿತ್, ಸಂತೋಷ್ ಕಾಚಿನಕಟ್ಟೆ, ರಾಜೇಶ್ ಕಾಮತ್, ಬಸವರಾಜ್, ಯೋಗೀಶ್, ನಾಗರಾಜ್, ಆರ್.ಎಸ್.ಹಾಲಸ್ವಾಮಿ, ಸಾವಂತ್, ರಾಕೇಶ್ ಡಿಸೋಜ, ಅಶೋಕ್, ಭರತ್, ಇಸ್ಮಾಯಿಲ್ ಕುಟ್ಟಿ, ಅರವಿಂದ್ ಅಕ್ಲಾಪುರ, ಮಂಜá-ನಾಥ್, ಕಿರಣ್, ಶರತ್ ಭದ್ರಾವತಿ ಮತ್ತಿತರರಿದ್ದರು.