ಟ್ರೋಫಿಗೆ ಮುತ್ತಿಕ್ಕಿದ ರೌಜಾ ಸ್ಟಾರ್ಸ್

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಎಂಡಿ ಮುನೀರ್(5 ವಿಕೆಟ್) ಮಾರಕ ಬೌಲಿಂಗ್ನಿಂದ ರೌಜಾ ಸ್ಟಾರ್ಸ್ ಕೆಬಿಎನ್ ಪ್ರೀಮಿಯರ್ ಲೀಗ್ ಟಿ-20 ಸೀಸನ್-2 ಪಂದ್ಯಾವಳಿಯ ವಿನ್ನರ್ ಆಗಿದ್ದು, ಪ್ರಸಕ್ತ ಸಾಲಿನ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸ್ಟೇಶನ್ ಈಗಲ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ಕೆಬಿಎನ್​ ಕ್ರಿಕೆಟ್​, ಟಿ-20, ಟೂರ್ನಾಮೆಂಟ್​, ಸೀಸನ್​-2, ಕಲಬುರಗಿ, Kalaburagi, KBN, Cricket, T-20,

ಇಲ್ಲಿನ ಕೆಬಿಎನ್ ಟಫರ್್ ಮೈದಾನದಲ್ಲಿ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ರೌಜಾ ಸ್ಟಾರ್ಸ್ 18.5 ಓವರ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 83 ರನ್ಗಳಿಸಿತು. ಮಹೇಶ ಜಾಧವ್ (22 ರನ್) ಹೊರತು ಪಡಿಸಿ ಎಲ್ಲ ಬ್ಯಾಟ್ಸ್ಮನ್ಗಳು ಒಂದಂಕಿ ಮೊತ್ತಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ಸ್ಟೇಶನ್ ಈಗಲ್ಸ್ ಪರ ಬೌಲಿಂಗ್ನಲ್ಲಿ ಕಾರ್ತಿಕ್, ಲಖನ್ ಗಾವಡೆ, ಅವಿನಾಶ ದೇಶಮುಖ ತಲಾ 2 ವಿಕೆಟ್ ಪಡೆದು ಮಿಂಚಿದರು.

ಕೇವಲ 84 ರನ್ಗಳ ಗುರಿ ಬೆನ್ನಟ್ಟಿದ ಸ್ಟೇಶನ್ ಈಗಲ್ಸ್ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನದಿಂದ 15.2 ಓವರ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 52 ರನ್ಗಳಿಸಿ ಸೋಲನುಭವಿಸಿತು. ಈ ಮೂಲಕ ಟ್ರೋಫಿ ಗೆಲ್ಲುವ ಚಾನ್ಸ್ ಕಳೆದುಕೊಂಡು, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತಂಡದ ಪರ ಚಂದ್ರಶೇಖರ ಪಾಟೀಲ್ (21 ರನ್), ನೋಮಾನ್ (15 ರನ್) ಕೆಲಕಾಲ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ಆದರೆ ರೌಜಾ ಸ್ಟಾರ್ಸ್ ಬೌಲರ್ಸ್ಗಳ ದಾಳಿಗೆ ತತ್ತರಿಸಿದರು. ಎಂಡಿ ಮುನೀರ್ (5 ವಿಕೆಟ್) ಭರ್ಜರಿ ಬೌಲಿಂಗ್ ಮಾಡಿದರೆ, ಯೂನುಸ್ (2 ವಿಕೆಟ್) ಸಾಥ್ ನೀಡಿದರು.

ಎಂಡಿ ಮುನೀರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಬಾಜನರಾದರು. ಮಾಕರ್ೆಟ್ ಸೂಪರ್ ಕಿಂಗ್ಸ್ನ ಅನಿಲಕುಮಾರ್ ಮ್ಯಾನ್ ಆಪ್ ದಿ ಸಿರೀಸ್ ಅವಾರ್ಡ ಪಡೆದರು.

ಮಂಗೇಶ ನಾರ್ವೇಕರ್, ನಾವೀನ್ ಮಾನೆ ಅಂಪೈರ್ಗಳಾಗಿ ಹಾಗೂ ನಾಗೇಶ ಸುರಗಿಹಳ್ಳಿ, ಸಂಜೀವ ರಾಠೋಡ್ ಸ್ಕೋರರ್ ಕಾರ್ಯ ನಿರ್ವಹಿಸಿದರು. ಮಲ್ಲಿಕಾಜರ್ುನ ಮದ್ರಿ ಕಾಮೆಂಟರ್ ಆಗಿ ಮಿಂಚಿದರು.

ಟೂರ್ನಿಯಲ್ಲಿ ಇಲ್ಲಿವರೆಗೂ ಬರೋಬ್ಬರಿ 615 ಬೌಂಡರಿ ಸಿಡಿದಿದ್ದರೆ, 148 ಸಿಕ್ಸ್ಗಳು ಹರಿದು ಬಂದಿವೆ. ಸೈಯ್ಯದ್ ತಮೀಮ್ (27 ಪೋರ್ ಹಾಗೂ 11 ಸಿಕ್ಸ್ ಬಾರಿಸುವ ಮೂಲಕ ಗಮನಸೆಳೆದಿದ್ದಾರೆ.