ಬಾಗಲಕೋಟೆ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತೀಯ ಸೇನೆ ಪಾಕ್ ವಿರುದ್ಧ ಆರಂಭವಾಗಿದ್ದ ಪ್ರತಿಕಾರದ ಯುದ್ಧ ಪ್ರಾರಂಭವಾಗಿತ್ತು. ಇದೇ ವೇಳೆ ಪಾಕ್‌ಗೆ ಚನ್ನಾಗಿ ಬುದ್ಧಿ ಕಲಿಸಬೇಕಿತ್ತು. ಇನ್ನೊಂದು ಸಲ ನಮ್ಮ ತಂಟೆಗೆ ಬಾರದಂತೆ ಪಾಕ್ ಬಗ್ಗು ಬಡಿಯುವ ಕೆಲಸ ಆಗಬೇಕಿತ್ತು. ಆದರೆ, ಟ್ರಂಪ್ ಅನಾವಶ್ಯಕವಾಗಿ ಮಧ್ಯ ಪ್ರವೇಶ ಮಾಡಿದ್ದು ಭಾರತಕ್ಕೆ ಮುಜುಗರ ಆಯಿತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಪಾಕ್‌ಗೆ ತಕ್ಕ ಪಾಠ ಕಲಿಸಬೇಕು ಎನ್ನುವ ವಿಚಾರದಲ್ಲಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದರು. ಈ ವೇಳೆ ಕದನ ವಿರಾಮ ಘೋಷಿಸಿದರು ಎಂದು ತಿಳಿಸಿದರು.
ನೆಹರು, ಇಂದಿರಾಗಾ0ಽ, ಲಾಲಬಹದ್ದೂರ ಶಾಸö ಪ್ರಧಾನಿ ಆಗಿದ್ದಾಗಲೂ ಭಾರತ-ಪಾಕ್ ಯುದ್ಧ ನಡೆದಿದೆ. ಆ ಬಳಿಕ ಕಾರ್ಗಿಲ್ ಯುದ್ಧವೂ ನಡೆದಿದೆ. ಕಳೆದ ಸಲ ಸರ್ಜಿಕಲ್ ಸ್ಟೆçÊಕ್ ಆಯಿತು. ನನ್ನ ಅಭಿಪ್ರಾಯದಲ್ಲಿ ಪಾಕ್ ಪದೆ ಪದೆ ಚೇಷ್ಠೆ ಮಾಡುತ್ತಲೇ ಇರುತ್ತದೆ. ಬಹುತೇಕ ಎಲ್ಲ ಭಯೋತ್ಪಾದಕರಿಗೆ ಪುಲ್ವಾಮಾ, ಪಹಲ್ಗಾಮ್, ಅಕ್ಷರಧಾಮ, ತಾಜ್ ಹೋಟೆಲ್ ದಾಳಿ ಸೇರಿದಂತೆ ಹತ್ತು ಇನ್ಸಿಡೆಂಟ್ ಗಳಿವೆ. ಎಲ್ಲದ್ದಕ್ಕೂ ಪಾಕಿಸ್ತಾನ ಕುಮ್ಮಕ್ಕು ಕೊಟ್ಟಿದೆ. ಪಾಕಿಸ್ತಾನದ ರಾಜಕಾರಣಿಗಳು, ಅಲ್ಲಿನ ಸೇನೆ ಕೂಡ ಕೊಟ್ಟಿದೆ ಎಂದು ಹೇಳಿದರು.
ಪದೆ ಪದೆ ನಮ್ಮ ಕೈಗೆ ವೈರಿಗಳು ಸಿಗುವುದಿಲ್ಲ. ಕೈಗೆ ಸಿಕ್ಕಾಗ ಅವರನ್ನು ಬಡಿಯಬೇಕು. ಮೊನ್ನ ಕೈಗೆ ಸಿಕ್ಕಿಹಾಕಿಕೊಂಡಿದ್ದರು. ಇನ್ನೊಂದು ಸಾರಿ ನಮ್ಮ ತಂಟೆಗೆ ಬರದಂತೆ ಮಾಡಬೇಕಿತ್ತು. ಈ ವಿಚಾರದಲ್ಲಿ ಇಡೀ ದೇಶದ ಜೊತೆಗೆ ವಿಶ್ವದ ಮುಸ್ಲಿಂ ರಾಷ್ಟçಗಳು ಭಾರತಕ್ಕೆ ಬೆಂಬಲವಾಗಿದ್ದರು. ಟ್ರಂಪ್ ಮಧ್ಯಸ್ಥಿಕೆ ಅನವಶ್ಯಕವಾಗಿತ್ತು. ಸಿಮ್ಲಾ ಪ್ರಕರಣದ ವೇಳೆ ಯಾರ ಮಧ್ಯಸ್ಥಿಕೆ ಬೇಡ ಎಂದು ತೀರ್ಮಾನ ಆಗಿತ್ತು. ಅನಗತ್ಯವಾಗಿ ಟ್ರಂಪ್ ಮಾತಿಗೆ ಬೆಲೆ ಕೊಟ್ಟಿದ್ದು ತಪ್ಪು. ಮತ್ತೆ ಇಂತಹ ಅವಕಾಶ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ಉಗ್ರಗಾಮಿಗಳನ್ನು ಮಟ್ಟ ಹಾಕಬೇಕು, ಹೊಡೆದು ಸಾಯಿಸಬೇಕು. ನಾವು ಬುದ್ಧಿ ಕಲಿಸದಿದ್ದರೆ ಹೊಸ ಉಗ್ರರನ್ನು ಹುಟ್ಟುಹಾಕಿ ಗಲಾಟೆ ಮಾಡಿಸುತ್ತಾರೆ. ಹೀಗಾಗಿ ಅವರ ಬೆನ್ನುಮೂಳೆ ಮುರಿದು ಹಾಕಬೇಕಿತ್ತು ಎಂದು ಹೇಳಿದರು.
ಆಪರೇಷನ್ ಸಿಂಧೂರ ವಿಚಾರವಾಗಿ ನಮ್ಮ ಸೈನ್ಯ ಬಹಳ ಚನ್ನಾಗಿ ಕೆಲಸ ಮಾಡಿದೆ. ಆದರೆ, ಟ್ರಂಪ್ ಬಂದಿರುವುದರಿAದ ನಮಗೆ ಹಿನ್ನೆಡೆಯಾಯಿತು. ನಾನು ಸಹ ಮುಜರಾಯಿ ಇಲಾಖೆಯಿಂದ ನಮ್ಮ ಸೈನಿಕರಿಗೆ ಒಳ್ಳೆಯದಾಗಲಿ ಎಂದು ವಿಶೇಷ ಪೂಜೆ ಮಾಡಿಸಿದ್ದೇವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.