ಟೋಲ್ ಸಂಗ್ರಹಕ್ಕೆ ವಿರೋಧ

ಆನೇಕಲ್: ಅತ್ತಿಬೆಲೆ ಟೋಲ್ ಸಿಬ್ಬಂದಿ ಮತ್ತು ಸ್ಥಳೀಯ ಲಾರಿ ಮಾಲೀಕರ ನಡುವಿನ ಜಗಳದಿಂದ ಸಾವಿರಾರು ವಾಹನ ಸವಾರರು ಸೋಮವಾರ ಪರದಾಡಬೇಕಾಯಿತು.

ಟೋಲ್ ಪಾವತಿಸುವಂತೆ ಸ್ಥಳೀಯ ಲಾರಿಗಳಿಗೆ ದಿಗ್ಭಂದನ ಹಾಕಿದ ಟೋಲ್ ಸಿಬ್ಬಂದಿ ವಿರುದ್ಧ ತಿರುಗಿ ಬಿದ್ದ ಲಾರಿ ಚಾಲಕರು ನಾವು ಟೋಲ್ ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿದರು. ಟೋಲ್ ಸಿಬ್ಬಂದಿ ಹಣ ಪಾವತಿಸುವಂತೆ ಒತ್ತಾಯಿಸಿದರು. ಇವರಿಬ್ಬರ ಹಠದಿಂದ ಸಾವಿರಾರು ವಾಹನಗಳು ಮೂರ್ನಾಲ್ಕು ಗಂಟೆ ನಿಂತಲ್ಲೇ ನಿಲ್ಲಬೇಕಾಯಿತು.

ಸ್ಥಳಕ್ಕಾಮಿಸಿದ ಬಿಇಟಿಎಲ್ ವ್ಯವಸ್ಥಾಪಕ ಬಲದೇವ್ ಸಿಂಗ್, ಲಾರಿ ಮಾಲೀಕರೊಂದಿಗೆ ಮಾತುಕತೆ ನಡೆಸಿದರಾರರೂ ಪ್ರಯೋಜನವಾಗಲಿಲ್ಲ.

ಸುಮಾರು 8 ವರ್ಷದ ಹಿಂದೆ ಅತ್ತಿಬೆಲೆ ಪಟ್ಟಣದಲ್ಲಿ ಟೋಲ್ ಸ್ಥಾಪಿಸಲಾಗಿದ್ದು, ಪ್ರಾರಂಭದಲ್ಲಿ ಸ್ಥಳೀಯರು ಟೋಲ್ ಪಾವತಿಸುವುದಿಲ್ಲ ಎಂದು ಧ್ವನಿ ಎತ್ತಿದರು. ಆಗ ಸ್ಥಳೀಯ ವಾಹನಗಳಿಗೆ ವಿಳಾಸ ನೀಡಿ ಉಚಿತವಾಗಿ ಬಿಡಲಾಗುತ್ತಿತ್ತು. ಒಂದೆರಡು ವರ್ಷದ ನಂತರ ಹಳದಿ ಬೋರ್ಡ್ ವಾಹನಗಳು ಟೋಲ್ ಪಾವತಿಸಿ ಹೋಗಬೇಕೆಂದು ಸಂಸ್ಥೆ ಪಟ್ಟು ಹಿಡಿಯಿತು. ಈ ಕುರಿತು ಟಿಪ್ಪರ್ ಲಾರಿ ಅಸೋಶಿಯೇಷನ್ ಸಂಘಟನೆ ಜಿಲ್ಲಾಧಿಕಾರಿಗೆ ದೂರು ನೀಡಿತು. ಸರ್ವೀಸ್ ರಸ್ತೆಯಲ್ಲಿ ಅಕ್ರಮವಾಗಿ ನಿರ್ವಣವಾಗಿದ್ದ ಟೋಲ್ ಕೇಂದ್ರ ತೆರವುಗೊಳಿಸಿ, ಸ್ಥಳೀಯ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿ ಪ್ರಕಾಶ್ ಅನುವು ಮಾಡಿಕೊಟ್ಟಿದ್ದರು.

ಈಗ ಮತ್ತೆ ಟೋಲ್ ನಿರ್ವಿುಸಿ ಸ್ಥಳೀಯರಿಂದಲೂ ವಾಣಿಜ್ಯ ವಾಹನಗಳಿಗೆ ಟೋಲ್ ಕಟ್ಟುವಂತೆ ಪಟ್ಟು ಹಿಡಿಯುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಟೋಲ್ ಸಿಬ್ಬಂದಿ ಹಾಗೂ ಲಾರಿ ಮಾಲೀಕರ ನಡುವೆ ಗಲಾಟೆಯಾಗಿದೆ.

ಇಷ್ಟೆಲ್ಲ ಸಮಸ್ಯೆಯಾಗಿದ್ದರೂ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಮೌನವಾಗಿದ್ದರು. ಪಟ್ಟು ಬಿಡದ ಲಾರಿ ಮಾಲೀಕರು ಕೊನೆಗೂ ಹಣ ಪಾವತಿ ಮಾಡಲಿಲ್ಲ. ಟ್ರಾಫಿಕ್ ಸಮಸ್ಯೆ ಹಿನ್ನೆಲೆ ಟೋಲ್ ಸಿಬ್ಬಂದಿ ಅನಿವಾರ್ಯವಾಗಿ ಲಾರಿ ಬಿಡಬೇಕಾಯಿತು.

 

ಪಟ್ಟಣದಿಂದ 5 ಕಿಮೀ ದೂರವಿರಬೇಕಾಗಿದ್ದ ಟೋಲನ್ನು ಅತ್ತಿಬೆಲೆಯಲ್ಲಿಯೇ ನಿರ್ವಿುಸಿ ಸ್ಥಳೀಯರಿಂದ ಸುಲಿಗೆ ಮಾಡಲಾಗುತ್ತಿದೆ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ಟೋಲ್ ವಸೂಲಿ ಮಾಡಲಾಗುತ್ತದೆ.

| ಶೇಖರ್ ರೆಡ್ಡಿ, ಲಾರಿ ಮಾಲೀಕ

ಅತ್ತಿಬೆಲೆ, ಆನೇಕಲ್, ಸರ್ಜಾಪುರ ಕಡೆಯಿಂದ ಬರುವ ಬಹುತೇಕ ರೈತರು ನೆರೆಯ ಹಳ್ಳಿಗಳಲ್ಲಿನ ಜಮೀನಿಗೆ ಹಾಗೂ ಬಂಧುಗಳ ಮನೆಗೆ ತೆರಳಲು ಟೋಲ್ ಮೂಲಕ ಹಾದು ಹೋಗಬೇಕಿದೆ. 50 ರಿಂದ 100 ಮೀಟರ್ ಕ್ರಮಿಸಬೇಕಿದರೂ, ಶುಲ್ಕ ಏಕೆ ನೀಡಬೇಕು. ಕಾನೂನಿನಂತೆ ಒಂದೇ ಹೆದ್ದಾರಿಯಲ್ಲಿ 2 ಕಡೆ ಟೋಲ್ ಸಂಗ್ರಹಿಸುವಂತಿಲ್ಲ. ಅತ್ತಿಬೆಲೆ ಪಂಚಾಯಿತಿಯಿಂದ ನೆರಳೂರು ಬಳಿ ಟೋಲ್ ಸ್ಥಾಪಿಸಲು ಪರವಾನಗಿ ಪಡೆದು ಅತ್ತಿಬೆಲೆ ಗಡಿಯಲ್ಲಿ ಟೋಲ್ ಸ್ಥಾಪಿಸಿ ಸ್ಥಳೀಯರಿಂದ ಬಿಇಟಿಎಲ್ ಸಂಸ್ಥೆ ಹಣ ಸುಲಿಗೆ ಮಾಡುತ್ತಿದೆ.

| ವೇಣುಗೋಪಾಲ್, ಸ್ಥಳೀಯ ನಿವಾಸಿ, ಅತ್ತಿಬೆಲೆ

ಬಿಇಟಿಎಲ್ ಟೋಲ್ ಮೂಲಕ ಹಾದು ಹೋಗುವ ಸರಕು ವಾಹನಗಳು ಶುಲ್ಕ ಪಾವತಿಸಿ ಗಡಿ ದಾಟಬೇಕೆಂದು ಸಂಸ್ಥೆ ಈಗಾಗಲೇ ತಿಳಿಸಿದೆ. ಈ ಬಗ್ಗೆ ಕರಪತ್ರ ಹೊರಡಿಸಿ, ಟೋಲ್ ಬಳಿ ಮಾಹಿತಿ ಫಲಕವನ್ನು ಹಾಕಿ, ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲದೆ ಜೂ.11ರಿಂದ ಕಡ್ಡಾಯವಾಗಿ ಟೋಲ್ ಶುಲ್ಕ ಪಾವತಿಸಬೇಕೆಂದೂ ತಿಳಿಸಲಾಗಿದೆ.

| ತಿಮ್ಮಯ್ಯ, ಆಪರೇಷನಲ್ ಮ್ಯಾನೇಜರ್, ಬಿಇಟಿಎಲ್

 

Leave a Reply

Your email address will not be published. Required fields are marked *