More

  ಟೋಲ್ ವಸೂಲಿಗೆ ವಿರೋಧ

  ಅಂಕೋಲಾ: ಹಟ್ಟಿಕೇರಿ ಟೋಲ್​ನಾಕಾ ಸ್ಥಳೀಯ ವಾಹನಗಳಿಂದ ಶುಲ್ಕ ಪಡೆಯದಂತೆ ಒತ್ತಾಯಿಸಿ ಸೋಮವಾರ ಟಿಪ್ಪರ್ ಮಾಲೀಕರ ಹಾಗೂ ಚಾಲಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

  9 ತಾಸುಗಳವರೆಗೆ ನಡೆದ ಪ್ರತಿಭಟನೆಯ ಬಳಿಕ ಸ್ಥಳೀಯ ಖಾಸಗಿ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡಿರುವ ಐಆರ್​ಬಿ ಕಂಪನಿಯವರು ವಾಣಿಜ್ಯ ಬಳಕೆಯ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡಲು ನಿರಾಕರಿಸಿದರು.

  ಪ್ರತಿಭಟನೆಯಲ್ಲಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಸಚಿವ ಆನಂದ ಅಸ್ನೋಟಿಕರ, ಮಾಜಿ ಶಾಸಕ ಸತೀಶ ಸೈಲ್, ಕೆಪಿಸಿಸಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ಪ್ರಮುಖರಾದ ಡಿ.ಎನ್. ನಾಯಕ, ಟೆಂಪೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಬಾಳಾ ನಾಯ್ಕ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ರವಿಕುಮಾರ ಪಿ. ನಾಯ್ಕ, ಪ್ರಮುಖರಾದ ಮಂಗಲದಾಸ ಕಾಮತ, ಉದಯ ಡಿ. ನಾಯ್ಕ, ವಿಶ್ವಜಿತ ಕೆ. ನಾಯಕ, ಸುನೀಲ ನಾಯ್ಕ ಹೊನ್ನೆಕೇರಿ ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts