ಅಜ್ಜಂಪುರ: ಅಜ್ಜಂಪುರ ಸಮೀಪದ ಜಾವೂರು ಗೇಟ್ ಸಮೀಪ ನಿರ್ವಿುಸುತ್ತಿರುವ ಟೋಲ್ ಸ್ಥಳಾಂತರಕ್ಕೆ ಒತ್ತಾಯಿಸಿ ಜಾವೂರು, ಹಿರೆಕಾನವಂಗಲ, ತಿಮ್ಮಾಪುರ, ಸಿದ್ದಾಪುರ ಚಿಕ್ಕಾನವಂಗಲ ಗ್ರಾಮಸ್ಥರು ಪೋಲಿಸ್ ಠಾಣೆ, ತಹಸೀಲ್ದಾರ್ ಹಾಗೂ ಉಪವಿಭಾಗಧಿಕಾರಿಗೆ ಮನವಿ ಸಲ್ಲಿಸಿದರು.

ಟೋಲ್ ಪ್ಲಾಜಾ ನಿರ್ವಣವಾಗುತ್ತಿರುವ ಜಾಗ ಚಿಕ್ಕಾದಾಗಿದೆ. ಈ ಜಾಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಇಲ್ಲಿಂದ 10ಮೀಟರ್ ಅಂತರದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಆಟದ ಮೈದಾನ ಇದೆ. ಇದರಿಂದ ಶಾಲೆಗೆ ಬರುವ ಮಕ್ಕಳಿಗೆ, ಈ ಈ ಭಾಗದ ರೈತರ ಜಮೀನಿಗೆ ಹೋಗಲು, ಜಾನುವಾರುಗಳು ರಸ್ತೆ ದಾಟಲು ತೊಂದರೆಯಾಗಲಿದೆ. ಟೋಲ್ ಸಮೀಪ 3 ಕೀಮಿ ವ್ಯಾಪ್ತಿಯಲ್ಲಿ 6 ಗ್ರಾಮಗಳು ಪಕ್ಕಪಕ್ಕದಲ್ಲಿಯೇ ಇರುವುದರಿಂದ ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆಯಾಗಲಿದೆ ಎಂದರು.
ಈ ಹಿಂದೆ ಟೋಲ್ ಪ್ಲಾಜಾವನ್ನು ಹಣ್ಣೆ ಗ್ರಾಮದ ಸಮೀಪ ನಿರ್ವಿುಸಲು ಅನುಮತಿ ನೀಡಲಾಗಿತ್ತು. ಆದರೆ ಗುತ್ತಿಗೆದಾರ ತನ್ನ ವೈಯಕ್ತಿಕ ಅನುಕೂಲಕ್ಕಾಗಿ ಸ್ಥಳ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ಕೂಡಲೇ ಸಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದರು.
ಗ್ರಾಮಸ್ಥರಾದ ಚಂದ್ರಪ್ಪ ,ಪ್ರಸನ್ನ, ಜಯಣ್ಣ, ಸಂತೋಷ್, ಶಿವಣ್ಣ, ಹಾಲಪ್ಪ, ಸೋಮಣ್ಣ ಲೋಕೇಶಪ್ಪ, ರವಿಕುಮಾರ್ ಉಪಸ್ಥಿತರಿದ್ದರು.