ಟೊಮ್ಯಾಟೊ ಬಾಕ್ಸ್​ಗೆ ಬೆಂಕಿ ಬಿದ್ದು ಅಪಾರ ನಷ್ಟ

ಕೋಲಾರ: ನಗರ ಹೊರವಲಯದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಎಂಆರ್ ಮಂಡಿಯ ಟೊಮ್ಯಾಟೊ ಬಾಕ್ಸ್​ಗಳಿಗೆ ಭಾನುವಾರ ಬೆಳಗ್ಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಎಪಿಎಂಸಿಯಲ್ಲಿ ಟೊಮ್ಯಾಟೊ ಹರಾಜು ಪ್ರಕ್ರಿಯೆ ಮುಗಿದ ಮೇಲೆ ವ್ಯಾಪಾರಸ್ಥರು ಖರೀದಿಸಿರುವ ಟೊಮ್ಯಾಟೊ ಲೋಡ್ ಮಾಡಲು ಸಿದ್ಧತೆಗಾಗಿ ಬಾಕ್ಸ್​ಗಳನ್ನು ದಾಸ್ತಾನು ಮಾಡಿದ್ದರು. ಮಾರುಕಟ್ಟೆಗೆ ಆವಕ ಹೆಚ್ಚಾಗಿ ಬಂದಿದ್ದರಿಂದ ಬಾಕ್ಸ್​ಗಳನ್ನು ಇಟ್ಟುಕೊಳ್ಳಲು ಜಾಗವಿಲ್ಲದೆ ಪ್ರಾಂಗಣದಿಂದ ಹೊರಗಿರುವ ರಸ್ತೆ ಬದಿಯ ಖಾಲಿ ಜಾಗದಲ್ಲಿ ಜೋಡಿಸಲಾಗಿತ್ತು.

ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಸಾವಿರಾರು ಪ್ಲಾಸ್ಟಿಕ್ ಕ್ರೇಟ್ಸ್​ಗಳು ಸುಟ್ಟು ಕರಕಲಾಗಿದ್ದು, ಇದರೊಂದಿಗೆ ಲಕ್ಷಾಂತರ ರೂ. ಮೌಲ್ಯದ ಟೊಮ್ಯಾಟೊ ಕೂಡ ಹಾಳಾಗಿವೆ.

ಅಗ್ನಿ ಆಕಸ್ಮಿಕ ಸಂಬಂಧ ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಲಾಯಿತಾದರೂ ಅವರು ಬರುವಷ್ಟರಲ್ಲಿ ನೆರೆದಿದ್ದವರು ಸೇರಿ ಮಾರ್ಗ ಮಧ್ಯೆ ಬಂದ ನೀರಿನ ಟ್ರಾ್ಯಕರ್​ನಿಂದ ನೀರು ಸುರಿದು ಬಹುತೇಕ ಬೆಂಕಿ ಆರಿಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *