ಟೈರ್ ಸಿಡಿದು ಕಾರು ಪಲ್ಟಿಯಾಗಿ ಒಬ್ಬ ಸಾವು

ಪಾವಗಡ: ಪಳವಳ್ಳಿ ಕೆರೆಕಟ್ಟೆಯ ಬಳಿ ಭಾನುವಾರ ಸಂಜೆ ಟೈರ್ ಸಿಡಿದು ಕಾರು ಪಲ್ಟಿಯಾಗಿ ಯುವಕ ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ.

ತಾಲೂಕಿನ ಗಂಗಸಾಗರ ಗ್ರಾಮದ ಕೃಷ್ಣಮೂರ್ತಿ ಎಂಬುವವರ ಪುತ್ರ ವಿದ್ಯಾಸಾಗರ್ (22) ಮೃತ. ತಾಲೂಕಿನ ಸಿಂಗರೆಡ್ಡಿಹಳ್ಳಿ ಗ್ರಾಮದ ಮಂಜುನಾಥ್ (22), ಓಬಳೇಶ್ (50), ದೀಕ್ಷಾ ( 8) ಬಾಂಧವ್ಯ (3), ಹರೀಶ್, ಲಕ್ಷ್ಮೀ (30) ಗಾಯಗೊಂಡಿದ್ದು, ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಏ.18ಕ್ಕೆ ಮತದಾನಕ್ಕೆ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದರು. ಪಾವಗಡ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *