ಚಿತ್ರದುರ್ಗ: ಉಡುಪಿಯ ತುಳುನಾಡು ಟೆನ್ನಿಸ್ ಲೀಗ್‌ನಿಂದ ಭಾನುವಾರ ನಡೆದ ಟೆನ್ನಿಸ್ ಪಂದ್ಯಾವಳಿಯ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಚಿತ್ರದುರ್ಗದ ಎಸ್‌ಜೆಎಂ ಆಂಗ್ಲ ಮಾಧ್ಯಮ ಶಾಲೆಯ ತೇಜಸ್ವಿನಿ, ಎಸ್‌ಆರ್‌ಎಸ್ ಶಾಲೆಯ ದೈವಿಕ್ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಚಿತ್ರದುರ್ಗ ಸಿಟಿ ಕ್ಲಬ್‌ನ ಈ ಆಟಗಾರರ ಸಾಧನೆಗೆ ಕ್ಲಬ್‌ನ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.