Friday, 16th November 2018  

Vijayavani

Breaking News

ಟಿಸಿಎಸ್ ವಿಶ್ವ 10ಕೆಯಿಂದ 5.29 ಕೋಟಿ ರೂ. ದೇಣಿಗೆ

Thursday, 12.07.2018, 3:03 AM       No Comments

ಬೆಂಗಳೂರು: 11ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಓಟದಿಂದ -ಠಿ;5.29 ಕೋಟಿ ನಿಧಿ ಸಂಗ್ರಹವಾಗಿದೆ. ಇದರೊಂದಿಗೆ ಭಾರತ ದಲ್ಲೇ ಇಷ್ಟು ಮೊತ್ತ ದತ್ತಿ ನಿಧಿ ಸಂಗ್ರಹಿಸಿದ ಅತಿದೊಡ್ಡ ಕೂಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಂಗ್ರಹವಾಗಿರುವ ಮೊತ್ತವನ್ನು ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ, ಅಂಗವಿಕಲರಿಗೆ ನೆರವು, ಅರಣ್ಯನಾಶ ತಡೆಗಟ್ಟುವಿಕೆ, ನೀರಿನ ಸಂರಕ್ಷಣೆ ಸೇರಿ ಇನ್ನಿತರ ಕಾರ್ಯಗಳಿಗೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಹಲವು ಸಂಘಟನೆಗಳು, ಕೆಲ ಕಾಪೋರೇಟ್ ಸಂಸ್ಥೆಗಳು ಈ ಕಾರ್ಯದಲ್ಲಿ ಕೈ ಜೋಡಿಸಿದ್ದವು.

ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ನಡೆದ ಟಿಸಿಎಸ್ 10ಕೆ ಓಟದಲ್ಲಿ 24 ಸಾವಿರ ಜನರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Back To Top