ಹೊಸಪೇಟೆ: ಎಲಿಮೆಂಟ್ ಬಂದಿದ್ದು, ಅಳವಡಿಕೆ ಕಾರ್ಯ ನಡೆಯಲಿದೆ. ನಮ್ಮನ್ನು ಸ್ವಾತಂತ್ರವಾಗಿ ಬಿಟ್ಟರೆ, ಯಶಸ್ಸು ಮಾಡುತ್ತೇವೆ ಡ್ಯಾಮ್ ಗೇಟ್ ಗಳ ಎಕ್ಸ್ಪರ್ಟ್ ಕನ್ನಯ್ಯ ನಾಯ್ಡು ಹೇಳಿದರು.
ಟಿಬಿಡ್ಯಾಂ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಿಂದಾಲ್ ನಿಂದ ಒಂದು ಎಲಿಮೆಂಟ್ ಬಂದಿದೆ. ಇಂದು ಅಳವಡಿಸುವ ಕಾರ್ಯ ನಡೆಯುತ್ತದೆ. ಶುಕ್ರವಾರ ಶುಭ ಸುದ್ದಿ ಕೊಡ್ತೇನೆ. ಮೊದಲ ಎಲಿಮೆಂಟ್ ಅಳವಡಿಸೊದು ನನ್ನ ಜೀವನದಲ್ಲಿ ಇದೊಂದು ದೊಡ್ಡ ಚಾಲೇಂಜ್ ಆಗಿದೆ. ಇದೇ ಮೊದಲ ಬಾರಿಗೆ ಈ ರೀತಿ ಪ್ರಯತ್ನ ಮಾಡ್ತಿದ್ದೇವೆ. ಅದನ್ನು ಅಳವಡಿಸುವ ಕಾರ್ಯ ಯಶಸ್ಸು ಆದನಂತರದ ಎಲಿಮೆಂಟ್ ಅಳವಡಿಕೆಯಲ್ಲಿ ಅಷ್ಟೊಂದು ಕಷ್ಟ ಆಗಲ್ಲ. ಎಲ್ಲಾ ಒಳ್ಳೆಯದಾಗುತ್ತೆ. ಅಳವಡಿಕೆ ನಂತರ ಎಲ್ಲರೂ ಸೆಲೆಬ್ರೇಷನ್ ಮಾಡೋಣ. ಅಲ್ಲಿ ವರೆಗೆ, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತೊಂದರೆ ನೀಡಬೇಡಿ ಎಂದರು.