18.5 C
Bangalore
Monday, December 16, 2019

ಟಿಕೆಟ್​ಗಾಗಿ ಜೋರಾಗಿದೆ ಕಸರತ್ತು

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಹಾವೇರಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾವು ದಿನೇ ದಿನೆ ಏರುತ್ತಿದ್ದು, ಆಯಾ ಪಕ್ಷದ ವರಿಷ್ಠರಿಗೆ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಪರಿಣಮಿಸುತ್ತಿದೆ. ಲೋಕಸಭೆ ಚುನಾವಣೆಗೂ ಮುನ್ನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೊಷಣೆಯಾಗಿರುವುದರಿಂದ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆಗೆ ಕೈ, ಕಮಲ ನಾಯಕರು ಮುಂದಾಗಿದ್ದಾರೆ.

ಹಾವೇರಿ ನಗರಸಭೆಯಲ್ಲಿ ಜೆಡಿಎಸ್ ಅಷ್ಟಾಗಿ ಪ್ರಭಾವ ಹೊಂದಿಲ್ಲ. ಕೈ, ಕಮಲದ ಟಿಕೆಟ್​ಗಾಗಿ ಪ್ರತಿ ವಾರ್ಡ್​ನಲ್ಲಿ ಹತ್ತಾರು ಆಕಾಂಕ್ಷಿಗಳು ಸಜ್ಜಾಗಿದ್ದಾರೆ. ಎಲ್ಲರನ್ನೂ ಸಂತೈಸಿ ಟಿಕೆಟ್ ನೀಡುವುದು ಮುಖಂಡರಿಗೆ ತಲೆ ನೋವಾಗಿ ಪರಿಣಮಿಸಿದೆ. ಚುನಾವಣೆಗೆ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ವಾರ್ಡ್​ವಾರು ಟಿಕೆಟ್ ಆಕಾಂಕ್ಷಿಗಳ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಚುನಾವಣೆಯಲ್ಲಿ ವೈಯಕ್ತಿಕ ವರ್ಚಸ್ಸು ಕೆಲಸ ಮಾಡುತ್ತದೆಯಾದರೂ ಪಕ್ಷದಿಂದ ಸ್ಪರ್ಧಿಸಿದರೆ ಗೆಲುವು ಸುಲಭ ಎಂಬ ಲೆಕ್ಕಾಚಾರದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪಕ್ಷದ ಮುಖಂಡರ ಮನವೊಲಿಕೆಗೆ ನಾನಾ ಕಸರತ್ತು ನಡೆಸುತ್ತಿದ್ದಾರೆ. ಒಂದೊಮ್ಮೆ ಟಿಕೆಟ್ ಕೈ ತಪ್ಪಿದರೆ ಬಂಡಾಯವೇಳುವ ಭೀತಿಯೂ ಪಕ್ಷಗಳ ಮುಖಂಡರನ್ನು ಕಾಡುತ್ತಿದೆ.

ಹಾಲಿಗಳಿಗೆ ಮೀಸಲಾತಿ ಕಂಟಕ

ಹಾವೇರಿ ನಗರಸಭೆ ವ್ಯಾಪ್ತಿಯ 31 ವಾರ್ಡ್​ಗಳಿಗೆ ಮೀಸಲಾತಿ ನಿಗದಿಯಾಗಿದ್ದು, ಬಹುತೇಕ ಹಳಬರಿಗೆ ಅದೇ  ವಾರ್ಡ್​ನಲ್ಲಿ ಸ್ಪರ್ಧೆಗೆ ಅವಕಾಶ ಕೈತಪ್ಪಿದೆ. ಆದರೂ ಪಕ್ಷದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಕೆಲ ಸದಸ್ಯರು ತಮ್ಮ ಮೀಸಲಾತಿಯಿರುವ ವಾರ್ಡ್​ಗಳತ್ತ ಜಿಗಿಯಲು ಯತ್ನಿಸುತ್ತಿದ್ದಾರೆ. ಕೆಲ ಪ್ರಮುಖ ವಾರ್ಡ್​ಗಳಲ್ಲಿ 10ಕ್ಕೂ ಹೆಚ್ಚು ಆಕಾಂಕ್ಷಿಗಳು ಒಂದೇ ಪಕ್ಷದಲ್ಲಿ ಟಿಕೆಟ್​ಗಾಗಿ ಮುಖಂಡರ ದುಂಬಾಲು ಬಿದ್ದಿದ್ದಾರೆ. ಇದು ಈ ಬಾರಿಯ ಚುನಾವಣೆಯ ಕಣ ಮತ್ತಷ್ಟು ರಂಗೇರುವುದರ ಮುನ್ಸೂಚನೆಯಾಗಿದೆ. ಪಕ್ಷದಿಂದ ಟಿಕೆಟ್ ನೀಡದಿದ್ದರೆ ಪಕ್ಷೇತರರಾಗಿಯಾದರೂ ಸ್ಪರ್ಧಿಸುವ ನಿಟ್ಟಿನಲ್ಲಿ ಜನಾಭಿಪ್ರಾಯ ಪಡೆಯುತ್ತಿದ್ದಾರೆ.

ಕೈ, ಕಮಲಕ್ಕೆ ಅಗ್ನಿಪರೀಕ್ಷೆ

ನಗರಸಭೆ ಚುನಾವಣೆಯು ಬಿಜೆಪಿ, ಕಾಂಗ್ರೆಸ್ಸಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. 31 ಸದಸ್ಯ ಬಲದ ನಗರಸಭೆಗೆ ಕಳೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿರಲಿಲ್ಲ. ಬಿಜೆಪಿ, ಕೆಜೆಪಿ ಹೊಂದಾಣಿಕೆ ಕೊರತೆಯಿಂದ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ. ಇದರ ಲಾಭ ಪಡೆದ ಕಾಂಗ್ರೆಸ್ ಕೇವಲ 13 ಸದಸ್ಯರನ್ನು ಹೊಂದಿ 5 ವರ್ಷ ಅಧಿಕಾರ ಅನುಭವಿಸಿತ್ತು. ವಿಧಾನಸಭೆ ಚುನಾವಣೆಯಲ್ಲಿ ನೆಹರು ಓಲೇಕಾರ ಶಾಸಕರಾಗಿ ಆಯ್ಕೆಯಾದ ನಂತರ ಬಿಜೆಪಿ, ಕೆಜೆಪಿ ಎಂಬ ವೈಮನಸ್ಸನ್ನು ಸದಸ್ಯರಲ್ಲಿ ಹೋಗಲಾಡಿಸಿದ್ದರು. ನಗರಸಭೆಯ ಅಧಿಕಾರವಧಿ ಮುಗಿಯುವ ವೇಳೆಯಲ್ಲಾದರೂ ತಮ್ಮ ಪಕ್ಷಕ್ಕೆ ಅಧಿಕಾರ ದೊರಕಿಸಬೇಕು ಎಂದು ಅವಿಶ್ವಾಸಕ್ಕೆ ನಡೆಸಿದ ಯತ್ನ ಯಶಸ್ಸು ಕಾಣಲಿಲ್ಲ.

ಹಾಲಿ ಶಾಸಕರ ಪ್ರಭಾವ

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 9, ಕೆಜೆಪಿ 8 ಹಾಗೂ ಬಿಎಸ್​ಆರ್ ಕಾಂಗ್ರೆಸ್ 1 ಸ್ಥಾನ ಗಳಿಸಿದ್ದವು. ಬಳಿಕ ಬಿಜೆಪಿ- ಕೆಜೆಪಿ ಒಂದಾದರೂ ಅಧಿಕಾರ ಹಿಡಿಯಲು ಆಗಿರಲಿಲ್ಲ. ಕಳೆದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿದ್ದದ್ದು ಆ ಪಕ್ಷಕ್ಕೆ ಅನುಕೂಲವಾಗಿತ್ತು. ಈ ಸಲ ಬಿಜೆಪಿಯ ನೆಹರು ಓಲೇಕಾರ ಶಾಸಕರಾಗಿರುವುದರಿಂದ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗರು ನಾನಾ ಕಸರತ್ತು ನಡೆಸಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿಯೇ ಟಿಕೆಟ್​ನ ಪೈಪೋಟಿಯೂ ಹೆಚ್ಚು ಕಂಡುಬರುತ್ತಿದೆ.

ಬೇರೆ ವಾರ್ಡ್​ಗೆ ವಲಸೆಗೂ ಸಿದ್ಧತೆ

ಕಳೆದ ಚುನಾವಣೆಯಲ್ಲಿ ಗೆದ್ದು ಈ ಬಾರಿಯೂ ಸ್ಪರ್ಧಿಸಬೇಕು ಎಂದುಕೊಂಡವರಿಗೆ ಮೀಸಲಾತಿ ಬದಲಾಗಿರುವುದರಿಂದ ಕಂಗಾಲಾಗಿದ್ದಾರೆ. ತಿಂಗಳ ಹಿಂದೆ ಯಾವುದೋ ವಾರ್ಡ್ ಮೇಲೆ ಕಣ್ಣು ಹಾಕಿಕೊಂಡಿದ್ದವರಿಗೂ ಮೀಸಲಾತಿ ಪರಿಷ್ಕರಣೆಯಿಂದ ಮತ್ತೆ ಬೇರೆ ವಾರ್ಡ್ ಹುಡುಕಿಕೊಳ್ಳುವಂತೆ ಮಾಡಿದೆ. ಇದರಿಂದ ವಲಸೆಯೂ ಜೋರಾಗಿ ನಡೆದಿದೆ. ಜಾತಿ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯುವ ಚಿಂತನೆಯನ್ನು ಅಭ್ಯರ್ಥಿಗಳು ನಡೆಸಿದ್ದಾರೆ.

ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆಗೆ ಮುನ್ನ ಆಯಾ ವಾರ್ಡ್​ಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಮುಖರ ಸಭೆ ನಡೆಸಲಾಗುವುದು. ಅವರು ಸೂಚಿಸುವ ಅಭ್ಯರ್ಥಿಗಳಿಗೆ ಮನ್ನಣೆ ನೀಡಲಾಗುವುದು. ಬೇರೆ ವಾರ್ಡ್​ಗಳಿಂದ ವಲಸೆ ಬಂದಿದ್ದರೆ ಆಯಾ ವಾರ್ಡ್​ನ ಜನ ಒಪ್ಪಿಗೆ ಸೂಚಿಸಿದರೆ ಮಾತ್ರ ಟಿಕೆಟ್ ಕೊಡಲಾಗುವುದು. ಒಟ್ಟಾರೆ ವಾರ್ಡ್​ನ ಜನರ ಅಭಿಪ್ರಾಯವೇ ಅಂತಿಮ.

| ನೆಹರು ಓಲೇಕಾರ ಶಾಸಕರು ಹಾವೇರಿ

ನಗರಸಭೆ ಚುನಾವಣೆಯು ಕಾರ್ಯಕರ್ತರ ಚುನಾವಣೆಯಾಗಿದೆ. ಅಲ್ಲದೆ, ಪಕ್ಷಕ್ಕೆ ಬೇರು ಮಟ್ಟದಲ್ಲಿ ನೆಲೆಯೂ ಇಲ್ಲಿಂದಲೇ ಲಭಿಸಲಿದೆ. ಹೀಗಾಗಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗಾಗಿ ಜಿಲ್ಲಾ ಮಟ್ಟದ ಸಮಿತಿ ರಚಿಸಿ, ವಾರ್ಡ್ ಜನರ ಅಭಿಪ್ರಾಯ ಸಂಗ್ರಹಿಸಿ, ಮುಖಂಡರೆಲ್ಲಾ ರ್ಚಚಿಸಿ, ಪ್ರಾಮಾಣಿಕ ಹಾಗೂ ಕೆಲಸಗಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಪ್ರತಿ ವಾರ್ಡ್​ನಲ್ಲಿಯೂ ಬೂತ್ ಮಟ್ಟದ ಸಮಿತಿ ಸಂಚರಿಸಿ ಗೆಲ್ಲುವ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಲಿದೆ.

| ರುದ್ರಪ್ಪ ಲಮಾಣಿ  ಮಾಜಿ ಸಚಿವರು ಹಾವೇರಿ

 

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...