ಜ್ಞಾನೋಪಾಸನೆ ಶಿಕ್ಷಕರ ಬದುಕಿನ ಗುರಿಯಾಗಲಿ

ಕಮಲನಗರ: ಹೊಸ ಜ್ಞಾನದ ಆಕರಗಳನ್ನು ಸಂಗ್ರಹಿಸುವ ಮೂಲಕ ವಿದ್ಯಾಥರ್ಿಗಳ ಅರಿವಿನ ದಾಹ ತಣಿಸುವವನೆ ಆದರ್ಶ ಶಿಕ್ಷಕನಾಗುತ್ತಾನೆ. ಜ್ಞಾನೋಪಾಸನೆ ಶಿಕ್ಷಕರ ಬದುಕಿನ ಗುರಿಯಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಎಸ್.ಎಸ್.ಮೈನಾಳೆ ಹೇಳಿದರು.

ಪಟ್ಟಣದ ಲತಾ ಮಂಗೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ವಿದ್ಯಾಥರ್ಿನಿಯರು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದಲಾದ ವ್ಯವಸ್ಥೆಯಲ್ಲಿ ಕಲಿಕೆಗೆ ಆದ್ಯತೆ ಕಲ್ಪಿಸುವ ನಿಟ್ಟಿನಲ್ಲಿ 2020ರಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗಿದ್ದು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಎತ್ತಿ ಹಿಡಿಯುವ ಮೂಲಕ ತಂತ್ರಜ್ಞಾನ ಶಿಕ್ಷಣಕ್ಕೆ ಪ್ರಾಶಸ್ತ್ಯಕಲ್ಪಿಸಲಾಗಿದೆ. ಡಾ.ಸವರ್ೆಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ, ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿಯಾಗಿ ಅಮೂಲ್ಯ ಸೇವೆ ಸಲ್ಲಿಸುವ ಮೂಲಕ ದೇಶದ ಶ್ರೇಷ್ಠ ಚಿಂತನಕಾರರಲಿ ್ಲಒಬ್ಬರು. ಮಕ್ಕಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಿಕ್ಷಕರು ದೇಶದ ಮಹಾನ್ ಶಿಲ್ಪಿಗಳು ಎಂದರು.

ಶಿಕ್ಷಕಿ ಮಂಗಲಾ ಖರಾಬೆ ಮಾತನಾಡಿದರು. ಮುಖ್ಯಗುರು ರಾಜಕುಮಾರ ವಡಗಾಂವೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಥರ್ಿಗಳಾದ ಭೂಮಿಕಾ ಸತೀಶ, ಹಷರ್ಿತಾ, ಸಂತೋಷ ಮಾತನಾಡಿದರು.

ಸಕರ್ಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸೂಯಕಾಂತ ಬಿರಾದಾರ, ಮಡಿವಾಳಪ್ಪ ಮಹಾಜನ, ಮಾಧವರಾವ ಲಾಂಚಕರ್, ಬಂಟಿ ರಾಂಪುರೆ, ಮಡಿವಾಳಪ್ಪ ನವಾಡೆ, ವೀರಭದ್ರಪ್ಪ ಸಾಂಗವೆ, ಅನೀಲಕುಮಾರ ಬಿರಾದಾರ, ನಿವೃತ್ತ ಮುಖ್ಯಗುರು ಶಿವಕುಮಾರ ಧರಣೆ, ಉಮಾದೇವಿ ಧರಣೆ, ಸಿಆರ್ಪಿ ನಾಗೇಶ ಸಂಗಮೆ ಇತರರಿದ್ದರು.
ಪ್ರಿಯಾಂಕಾ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಶಿಕ್ಷಕ ರಾಮ ಜಾಧವ್ ನಿರೂಪಣೆ ಮಾಡಿದರು.

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…