ಜ್ಞಾನವೃದ್ಧಿಗೆ ಗ್ರಂಥಾಲಯ ಸಹಕಾರಿ

blank

ಹಾಸನ: ಜನಸಾಮಾನ್ಯರ ಮತ್ತು ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು.

ಆಲೂರು ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಾರ್ವಜನಿಕರು, ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚು ಮಾಡುವ ಕೆಲಸ ಮಾಡುತ್ತದೆ. ರಾಜ್ಯದಲ್ಲಿ ಪ್ರಸ್ತುತ 6890ಕ್ಕ್ಕೂ ಹೆಚ್ಚು ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. 1968 ರಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವು ಪ್ರಥಮವಾಗಿ ಆಚರಣೆಗೆ ಬಂದಿದ್ದು, ಭಾರತದ ಗ್ರಂಥಾಲಯ ಚಳವಳಿ ಜನಕರಾದ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮದಿನ ನಿಮಿತ್ತ ದೇಶಾದ್ಯಂತ ಇಂದು ಗ್ರಂಥಪಾಲಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಅಂತಾರಾಷ್ಟ್ರೀಯ ಚಿತ್ರಕಲಾವಿದರಾದ ಬಿ.ಎಸ್.ದೇಸಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧ ಬಸವ ಅಂಬೇಡ್ಕರ್ ಅವರು ನಮ್ಮೆದುರಿಗೆ ದಾರ್ಶನಿಕತೆಯನ್ನು ಅರುಹಲು ಕಾರಣ. ಅವರಲ್ಲಿನ ಅಗಾಧ ಜ್ಞಾನ, ಮನುಷ್ಯನಲ್ಲಿ ಏಕಾಗ್ರತೆ, ತನ್ಮಯತೆ, ಆನಂದತೆಯ ಉತ್ತುಂಗವನ್ನು ಅನುಭವಿಸಲು ಪುಸ್ತಕಗಳು ಸಹಕಾರಿ ಆಗುತ್ತವೆ. ಗ್ರಂಥಾಲಯಗಳು ಜಾತಿ, ಧರ್ಮ ಮತ್ತು ಲಿಂಗವನ್ನು ಮೀರಿದ ನಿಜವಾದ ಜ್ಞಾನ ದೇಗುಲಗಳು. ಕುವೆಂಪು ಹೇಳುವಂತೆ ಮಗು ಹುಟ್ಟಿದಾಗ ವಿಶ್ವ ಮಾನವ, ಬೆಳೆ ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ… ಮತ್ತೆ ಅವನನ್ನು ವಿಶ್ವ ಮಾನವನನ್ನಾಗಿ ಮಾಡುವುದೇ ಪುಸ್ತಕಗಳು ಎಂದರು.


ಗ್ರಂಥಾಲಯ ಸಹಾಯಕರಾದ ಟಿ.ಕೆ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಆಲೂರು ತಾಲೂಕಿಗೆ ಬಂದು ಹನ್ನೊಂದು ವರ್ಷಗಳಾದವು. ಇಲಾಖೆ ಹಾಗೂ ಇಲ್ಲಿನ ಸಾರ್ವಜನಿಕರ ಸಹಕಾರದಿಂದ ನಿರಂತರವಾಗಿ ಗುಣಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ, ಓದುಗರಿಗೆ ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾದ್ದರಿಂದ 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ದೇಶದ ವಿವಿಧ ಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿ.ಸುಜಾತಾ, ಕಸಾಪ ಮಾಜಿ ಅಧ್ಯಕ್ಷ ಫಾ.ಹೈ.ಗುಲಾಂ ಸತ್ತಾರ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಅಧ್ಯಕ್ಷ ಎಚ್.ಇ.ದ್ಯಾವಪ್ಪ, ಸಾಹಿತಿ ಎಚ್.ವೇದಾವತಿ ಶಿವಣ್ಣ, ಪಟ್ಟಣ ಪಂಚಾಯಿತಿ ಸದಸ್ಯ ತೌಫಿಕ್, ಫಾದರ್ ಬಸವರಾಜ್, ಹಿರಿಯರಾದ ಕೆ.ವೈ.ಲಕ್ಷ್ಮೇಗೌಡ, ಎ.ಟಿ. ಮಂಜುನಾಥ್, ಎ.ಟಿ. ಮಲ್ಲೇಶ್, ಆಕಾಶವಾಣಿ ಮಂಜುನಾಥ್, ತಿಮ್ಮಯ್ಯ, ತಿರುಮಲಯ್ಯ, ಆಕಾಶವಾಣಿ ನಿಸರ್ಗ, ಶಿಕ್ಷಕರಾದ ಅಣ್ಣಪ್ಪ, ರವಿ, ವೆಂಕಟರಂಗಯ್ಯ ಇತರರಿದ್ದರು.

Share This Article

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…