ಜ್ಞಾನದ ಆಗರ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ

ತ್ಯಾಮಗೊಂಡ್ಲು: ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ನಗಣ್ಯ ಬೆಲೆಗೆ ಅತ್ಯುತ್ತಮ ಮಾಹಿತಿ ನೀಡುತ್ತಿರುವ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ಹಾಗೂ ವಿಆರ್​ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಕಾರ್ಯ ಅಭಿನಂದಾರ್ಹ ಎಂದು ಮಣ್ಣೆ ಗ್ರಾಪಂ ಅಧ್ಯಕ್ಷ ಎಂ.ಗಂಗಣ್ಣ ಬಣ್ಣಿಸಿದರು.

ಮಣ್ಣೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗ್ರಾಪಂನಿಂದ ಸೋಮವಾರ ಉಚಿತವಾಗಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆಯಲ್ಲಿ ಎಲ್ಲ ರೀತಿಯ ಮಾಹಿತಿ ಇದ್ದು, ವಿದ್ಯಾರ್ಥಿಗಳಿಗೆ ಮಾಹಿತಿ ಕಣಜವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗ ಮಾಹಿತಿ ಎಲ್ಲ ಮಾಹಿತಿ ಇದ್ದು, ಪಾಲಕರ ಜೇಬಿಗೆ ಭಾರವಾಗದೆ ಹೆಚ್ಚಿನ ತರಬೇತಿ ಅಗತ್ಯವಿಲ್ಲದೆ ಪ್ರತಿದಿನ ಪತ್ರಿಕೆ ಓದುವುದರಿಂದ ಪರೀಕ್ಷೆ ಎದುರಿಸಬಹುದು ಎಂದು ಹೇಳಿದರು.

ಮೂರು ವರ್ಷದಿಂದ ಗ್ರಾಪಂನಿಂದ ಸಂಚಿಕೆ ವಿತರಿಸಲಾಗುತ್ತಿದೆ. ಇದರಿಂದ ಶಾಲೆಯ ಫಲಿತಾಂಶದಲ್ಲಿ ಗಣನೀಯ ಪ್ರಗತಿ ಕಂಡಿದೆ ಮತ್ತು ವಿದ್ಯಾರ್ಥಿಗಳ ಜ್ಞಾನಾರ್ಜನೆಮಟ್ಟ ಹೆಚ್ಚಿದೆ ಎಂದು ತಾಪಂ ಸದಸ್ಯ ನಾಗಭೂಷಣ್ ಹೇಳಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಮನಾದ ಪೈಪೋಟಿ ನೀಡುವಲ್ಲಿ ಸಂಚಿಕೆ ಸಹಕಾರಿಯಾಗಿದೆ ಎಂದು ಮುಖ್ಯ ಶಿಕ್ಷಕ ಶಿವಾನಂದ ಅಭಿನಂದನೆ ತಿಳಿಸಿದರು.

ಗ್ರಾಪಂ ಸದಸ್ಯ ಕರಿಗಿರಿಯಪ್ಪ, ಸೌಮ್ಯ, ಮುಖಂಡ ಪಣಮದಲಿ ರಾಮಣ್ಣ, ನಾಗರಾಜ್, ಶಿಕ್ಷಕರಾದ ಶಾಂತಮ್ಮ, ಲೀಲಾವತಿ, ಶ್ರೀಧರ್, ರಾಘವೇಂದ್ರ, ಜಯರಾಂ, ಸುಜಾತಾ ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *