ಜೋಡಿ ಹಕ್ಕಿ ಪೊಲೀಸ್ ಬಲೆಗೆ

ಕಲಬುರಗಿ:ಪತಿಯನ್ನು ಕೊಲೆಯನ್ನು ಮಾಡಿ, ಅದು ರಸ್ತೆ ಅಪಘಾತ ಎಂಬಂತೆ ಬಿಂಬಿಸುವ ಮೂಲಕ ಕೃತ್ಯದ ಅಪರಾಧದಿಂದ ಪಾರಾಗಲು ಸ್ಕೇಚ್ ಹಾಕಿದ್ದ ಜೋಡಿ ಹಕ್ಕಿ ಕೊನೆಗೂ ಪೊಲೀಸ್ ಬಲೆಗೆ ಸಿಕ್ಕು ಬಿದ್ದಿದೆ. ಈ ಮೂಲಕ ಆಳಂದ ತಾಲೂಕಿನ ಕೊಡಲಹಂಗರಗಾ ಗ್ರಾಮದ ಬಳಿಯಲ್ಲಿ ಮೇ 25 ರಂದು ನಡೆದಿದ್ದು ಅಪಘಾತವಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂಬುದು ಬಯಲಿಗೆ ಬಂದಿದೆ.
ಕೂಡಲಹಂಗರಗಾ ಗ್ರಾಮದ ಹೀರಾಸಿಂಗ್ (38) ಹಾಗೂ ಶಾಂತಾಬಾಯಿ (35) ಬಂಧಿತರು. ಇಬ್ಬರು ನಡುವೆ ಅನೈತಿಕ ಸಂಬಂಧವಿತ್ತು. ಈ ಕಾರಣಕ್ಕಾಗಿಯೇ ಶಾಂತಾಬಾಯಿ ಪತಿ ವಿನೋದ ಕೊಲೆ ಮಾಡಿ ಬೈಕ್ ಜತೆಗೆ ರಸ್ತೆಯಲ್ಲಿ ತಂದು ಹಾಕುವ ಮೂಲಕ ಅದೊಂದು ರಸ್ತೆ ಅಪಘಾತ ಎಂಬಂತೆ ಬಿಂಬಿಸಿದ್ದರು.
ಆಳಂದ ಠಾಣೆಯಲ್ಲಿ ರಸ್ತೆ ಅಪಘಾತ ಎಂದು ಕೇಸು ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಹಲವು ಅನುಮಾನ ಮೂಡಿದವು. ಅಲ್ಲದೆ ಮೃತಪಟ್ಟಿರುವ ವಿನೋಧನ ಪತ್ನಿಗೆ ಹೀರಾಸಿಂಗ್ ಜತೆಗೆ ಅನೈತಿಕ ಸಂಬಂಧವಿತ್ತು ಎಂಬುದು ಗೊತ್ತಾಗಿ ತನಿಖೆ ಚುರುಕುಗೊಳಿಸಿದರು. ಜಾಡು ಅರಸಿ ಬೆನ್ನಟ್ಟಿದಾಗ ಅದು ಅಪಘಾತವಲ್ಲ, ಅನೈತಿಕ ಸಂಬಂಧ ಹಿನ್ನೆಯಲ್ಲಿ ವಿನೋಧನ ಪತ್ನಿ ಶಾಂತಾಬಾಯಿ ಹಾಗೂ ಆಕೆಯ ಪ್ರಿಯಕರ ಹೀರಾಸಿಂಗ್ ಸೇರಿಕೊಂಡು ಮಾಡಿರುವ ವ್ಯವಸ್ಥಿತ ಕೊಲೆ ಎಂಬುದು ಬೆಳಕಿಗೆ ಬಂದಿತು.
ರಾತ್ರಿ ಕಳೆಯಲು ಗುಂಡಿನ ಗಮ್ಮತ್ತು: ಕೊಲೆಯಾಗಿರುವ ವಿನೋದ ಹಾಗೂ ಹೀರಾಸಿಂಗ್ ಹತ್ತಿರದ ಸಂಬಂಧಿಗಳು. ನಾಲ್ಕೈದು ವರ್ಷಗಳಿಂದ ಶಾಂತಾಬಾಯಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದರು. ಸಂಬಂಧಿಕರು ಅಗಿದ್ದರಿಂದ ಸಂಶಯ ಬಂದಿರಲಿಲ್ಲ. ಕೊಡಲಹಂಗರಗಾ ತಾಂಡಾದಲ್ಲಿರುವ ವಿನೋದ ಮನೆಯಲ್ಲಿ ಮೂವರು ಪ್ರತಿನಿತ್ಯ ಗುಂಡಿ ಪಾಟರ್ಿ ಮಾಡಲು ಸೇರುತ್ತಿದ್ದರು. ಶಾಂತಾಬಾಯಿ ಗಂಡನಿಗೆ ಕಂಠಪೂತರ್ಿ ಕುಡಿಸಿ ಮಲಗಿಸಿದ ಬಳಿಕ ಶಾಂತಾಬಾಯಿ ಹಾಗೂ ಹೀರಾಸಿಂಗ್ ತಮ್ಮ ಅನೈತಿಕ ಕಾಮದಾಟದಲ್ಲಿ ತೊಡಗಿಕೊಳ್ಳುತ್ತಿದ್ದರು ಎಂಬ ಅಂಶ ವಿಚಾರಣೆ ವೇಳೆಯಲ್ಲಿ ಬಂಧಿತರು ಬಾಯಿಬಿಟ್ಟಿದ್ದಾರೆ.
ಹೀರಾಸಿಂಗ ಕೊಲೆಗೆ ವಿನೋದ ಸ್ಕೆಚ್: ಪತ್ನಿಗೆ ಅಕ್ರಮ ಸಂಬಂಧವಿರುವುದು ವಿನೋದಗೆ ಗೊತ್ತಾಗಿತ್ತು. ಹೀಗಾಗಿ ಪತಿ ವಿನೋದ ಕೊಲೆಗೆ ಪತ್ನಿ ಶಾಂತಾಬಾಯಿ ಹಾಗೂ ಆಕೆಯ ಪ್ರಿಯಕರ ಹೀರಾಸಿಂಗ್ ಸೇರಿಕೊಂಡು ಸ್ಕೇಚ್ ಹಾಕಿದ್ದರು. ಮೇ 25 ರಂದು ಹೀರಾಸಿಂಗ್ ಮತ್ತು ವಿನೋದ ಇಬ್ಬರು ಕೂಡಿಕೊಂಡು ಎರಡು ಬೈಕ್ಗಳಲ್ಲಿ ಮಾಮೂಲಿನಂತೆ ಮದ್ಯ ಸೇವನೆಗೆ ತೆರಳಿದ್ದರು. ಕಂಠಪೂತರ್ಿ ಕುಡಿದ ಮೇಲೆ ಅನೈತಿಕ ಸಂಬಂಧದ ವಿಚಾರ ಇಬ್ಬರಲ್ಲಿ ಗಲಾಟೆಯಾಗಿದೆ. ಆಗ ಹೀರಾಸಿಂಗ್, ವಿನೋದನನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ರಸ್ತೆಗೆ ತಂದು ಹಾಕಿ ಬೈಕ್ ಮೇಲೆ ಬಿದ್ದಂತೆ ಸೀನ್ ಸೃಷ್ಟಿಸಿದ್ದಾನೆ. ಬೈಕ್ ಸಹ ಕೊಂಚ ನುಗ್ಗಾಗುವಂತೆ ಮಾಡಿದ್ದಾನೆ. ಥಟಂತ್ ನೋಡಿದಾಗ ಅದೊಂದು ಅಪಘಾತ ಎಂಬಂತೆ ಕಾಣುವಂತೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಕೊಲೆ ಮಾಡಿದ ಬಳಿಕ ವಿನೋದನ ಮನೆಗೆ ತೆರಳಿ ಶಾಂತಾಬಾಯಿಗೆ ಗಂಡನ ಕೊಲೆ ಮಾಡಿರುವ ಕುರಿತು ಮಾಹಿತಿ ನೀಡಿದ್ದಾನೆ. ಗಂಡನ ಶವ ರಸ್ತೆಯಲ್ಲಿ ಬಿದ್ದಿದ್ದರೂ ಪ್ರಿಯಕರ ಹಾಗೂ ಆತನ ಪತ್ನಿ ರಾತ್ರಿ ಏಕಾಂತದಲ್ಲಿ ಕಾಲ ಕಳೆದಿದ್ದಾರೆ ಎಂಬುದು ಗೊತ್ತಾಗಿದೆ.
ಅಪಘಾತವಾಗಿದೆ ಎಂಬ ಸುದ್ದಿ ಮಾರನೇ ದಿನ ಬೆಳಗ್ಗೆ ಗೊತ್ತಾದಂತೆ, ಘಟನಾ ಸ್ಥಳಕ್ಕೆ ತೆರಳಿ ಗಂಡನ ಶವದ ಮುಂದೆ ಕುಳಿತುಕೊಂಡು ಕಣ್ಣೀರು ಹಾಕಿ ರೋಧಿಸಿದ್ದಳು. ತನಿಖೆಯ ವೇಳೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆ ಮಾಡಿರೋದು ಶಾಂತಾಬಾಯಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಸ್ಪಿ ಶಶಿಕುಮಾರ, ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಡಿಎಸ್ಪಿ ವಿಜಯಕುಮಾರ ಮಾರ್ಗದರ್ಶನದಲ್ಲಿ ಸಿಪಿಐ ಹಣಮಂತ ಸಣ್ಣಮನಿ ತನಿಖೆ ನಡೆಸಿ, ಆರೋಪಿತರನ್ನು ಬಂಧಿಸಿದ್ದಾರೆ. ಆಳಂದ ಠಾಣೆಯಲ್ಲಿ ಕೇಸು ದಾಖಲಾಗಿದೆ. ಬಂಧಿತರಿಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *