More

  ಜೋಳಿಗೆಯಲ್ಲಿ ಪ್ಲಾಸ್ಟಿಕ್ ಭಿಕ್ಷೆ ಹಾಕಲು ಮನವಿ

  ನರಗುಂದ: ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪುರಸಭೆಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಪತ್ರಿವನಮಠದ ಗುರುಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಬುಧವಾರ ಚಾಲನೆ ನೀಡಿದರು.

  ಪಟ್ಟಣದ ದಂಡಾಪೂರ ಬಡಾವಣೆಯ 1ನೇ ಗಲ್ಲಿಯಿಂದ 7ನೇ ಗಲ್ಲಿಯವರೆಗೆ ಏರ್ಪಡಿಸಿದ್ದ ಈ ಜಾಗೃತಿ ರ್ಯಾಲಿಯಲ್ಲಿ ಶ್ರೀಗಳು ಮತ್ತು ಈಶ್ವರಿ ವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ತಮ್ಮ ಜೋಳಿಗೆಯಲ್ಲಿ ಪ್ಲಾಸ್ಟಿಕ್ ಭಿಕ್ಷೆ ಹಾಕುವಂತೆ ಮನವಿ ಮಾಡಿದರು.

  ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಪುರಸಭೆಯ ಕಿರಿಯ ಆರೋಗ್ಯ ಅಧಿಕಾರಿ ಪ್ರೀತಿ ಗವಿಮಠ, ರಾಜು ಈಟಿ, ಶ್ರೀಕಾಂತ ನರಗುಂದ, ರೆಹಮಾನ್ ನದಾಫ್, ಎಂ.ಆರ್. ಜೋರಂ, ಶಿವಾಜಿ ಡುರೇನವರ, ಮಹೇಶ ಹಡಪದ ಹಾಗೂ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಸಿಬಿಎಸ್​ಸಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts