ಜೈನರ ಸೇವೆಗೆ ಶ್ಲಾಘನೆ

ಹುಬ್ಬಳ್ಳಿ:ಆಲ್ ಇಂಡಿಯಾ ಜೈನ್ ಯೂಥ್ ಫೆಡರೇಷನ್ ವತಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಕುರಿತ ಮಾರ್ಗದರ್ಶಿ, ಶ್ವೇತಾಂಬರ ಜೈನ ಸಮಾಜದವರಿಗೆ ಅಲ್ಪಸಂಖ್ಯಾತ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಗರದ ಕಂಚಗಾರ ಗಲ್ಲಿಯ ಮಹಾವೀರ ಭವನದಲ್ಲಿ ನಡೆಯಿತು.

ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಯುಪಿಎಸ್​ಸಿ ಪರೀಕ್ಷೆ ಬರೆಯಲು ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿನಿ ದಿವ್ಯಾನಿ ದೀಪಕ ಬಂಸಾಳಿ ಅವರಿಗೆ ಪ್ರಮಾಣ ಪತ್ರ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜೈನ ಸಮಾಜದವರು ಬರ ಪೀಡಿತರು, ನೆರೆ ಸಂತ್ರಸ್ತರಿಗೆ ನೀಡುವ ದೇಣಿಗೆ, ಸಮಾಜ ಕಲ್ಯಾಣ, ವಿಕಲಚೇತನರು, ಗೋಶಾಲೆಗಳಿಗೆ ಮಾಡುವ ಸಾಮಾಜಿಕ ಸೇವೆ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿಗಳ ನೂತನ 15 ಅಂಶಗಳ ಅಲ್ಪಸಂಖ್ಯಾತರ ಕಾರ್ಯಕ್ರಮ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಮಾತನಾಡಿ, ತಹಸೀಲ್ದಾರರು ಶ್ವೇತಾಂಬರ ಜೈನ ಪಂಗಡದವರಿಗೆ ಅಲ್ಪಸಂಖ್ಯಾತರ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದರು. ಇದರಿಂದ ಸಮಾಜದವರು ಅನೇಕ ಸೌಲಭ್ಯಗಳಿಂದ ವಂಚಿತರಾದರು. ಶೀಘ್ರವೇ ಜಿಲ್ಲಾಧಿಕಾರಿ, ತಹಸೀಲ್ದಾರ್​ಗಳಿಗೆ ಸೂಚನೆ ನೀಡುವಂತೆ ದೇಶಪಾಂಡೆ ಅವರಿಗೆ ಕೋರಿದರು.

ಜೈನ ಮರುಧರ ಸಂಘದ ಟ್ರಸ್ಟಿ ದಿನೇಶ ಸಂಘವಿ, ಶ್ರೀ ವರ್ಧಮಾನ ಜೈನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಕಾರ್ಯಾಧ್ಯಕ್ಷ ಅಶೋಕ ಕೊಠಾರಿ, ತೇರಾಪಂಥ ಸಭೆ ಅಧ್ಯಕ್ಷ ಮಹೇಂದ್ರ ಪಾಲಗೋತಾ, ಮಹಾವೀರ ಯೂಥ್ ಫೆಡರೇಷನ್​ನ ಸುರೇಶ ಚಾಜ್ಜೇಡ, ಭಾರತೀಯ ಜೈನ ಸಂಘಟನೆ ಅಧ್ಯಕ್ಷ ವಿನೋದ ತಾತೇಡ, ಸಂತೋಷ ಡುಮಾವತ, ಕಾಂತಿಲಾಲ್ ಬೊಹರಾ, ಗೌತಮ ಭಾಪನಾ, ಉಕಚಂದ ಭಾಪನಾ, ರಾಜೇಶ ಬೊಹರಾ, ಸುನೀಲ ಬುರಟ, ಗೌತಮ ಮೆಹತಾ, ನಿರ್ಮಲ ಜೈನ, ಹೇಮಂತ ಮುನೋಯತ, ಪ್ರಕಾಶ ಚೊರಡಿಯಾ, ಕಾಂತಿಲಾಲ ಪಾಲಗೋತಾ, ಆನಂದ ಪಟವಾ, ಮಗರಾಜ ಭಲಘಟ, ಸುಧೀರ ವೋರಾ ಇತರರು ಉಪಸ್ಥಿತರಿದ್ದರು.

ಗೌತಮ ಗುಲೇಚ್ಛಾ ಅತಿಥಿಗಳನ್ನು ಪರಿಚಯಿಸಿದರು. ಪ್ರಕಾಶ ಕಟಾರಿಯಾ ನಿರೂಪಿಸಿದರು. ಸುಭಾಷ ಡಂಕ ಅಲ್ಪಸಂಖ್ಯಾತರ ಸೌಲಭ್ಯಗಳ ಬಗ್ಗೆ ವಿವರಿಸಿದರು. ಅಶೋಕ ಕೋಠಾರಿ ವಂದಿಸಿದರು.