Thursday, 13th December 2018  

Vijayavani

Breaking News

ಜೇಡದ ಸೇಡು!

Thursday, 11.01.2018, 3:02 AM       No Comments

ಗ್ರಾಮೀಣ ಪ್ರದೇಶದ ಮನೆಗಳಲ್ಲಿ ತಿಂಗಳಿಗೊಮ್ಮೆಯಾದರೂ ಜೇಡರ ಬಲೆಯನ್ನು ಗುಡಿಸಲೇಬೇಕಾಗುತ್ತದೆ. ಒಂದು ತಿಂಗಳು ಮನೆಯನ್ನು ಸ್ವಚ್ಛಗೊಳಿಸಿಲ್ಲ ಎಂದರೆ ಮನೆಯ ಮೂಲೆಯಲ್ಲೆಲ್ಲಾ ಜೇಡಗಳು ಮನೆ ಮಾಡಿರುತ್ತವೆ. ಆದರೆ ಈ ಪರಿಸ್ಥಿತಿ ನಗರಗಳಲ್ಲಿ ಇಲ್ಲ. ನಗರವಾಸಿಗಳು ಹಬ್ಬ ಹರಿದಿನ ಬಂದಾಗ ಅಥವಾ ಮನೆ ಪೇಂಟಿಂಗ್ ಎಂದಾಗ ಮನೆಯ ಮೂಲೆಗಳನ್ನು ಸ್ವಚ್ಛಗೊಳಿಸುತ್ತಾರೆ. ಇನ್ನು ವಿದೇಶದಲ್ಲಿ ಜೇಡದ ಸಮಸ್ಯೆಯೇ ಇಲ್ಲ ಎಂದು ಸುಮ್ಮನಾಗುವಂತಿಲ್ಲ. ಏಕೆಂದರೆ ಕ್ಯಾಲಿಫೋರ್ನಿಯಾದಲ್ಲಿ ಜೇಡದ ಸಮಸ್ಯೆಯಿಂದಾಗಿ ಫ್ಲಾಟ್ ಸುಟ್ಟು ಹೋಗಿದೆ.

ಕ್ಯಾಲಿಫೋರ್ನಿಯಾದಲ್ಲಿ ಜೇಡರ ಬಲೆಯನ್ನು ಸ್ವಚ್ಛಮಾಡಿ ಸುಸ್ತಾಗಿದ್ದ ವ್ಯಕ್ತಿಯೊಬ್ಬರು ದೊಡ್ಡದಾದ ವೂಲ್ಪ ಜೇಡವನ್ನು ಹಿಡಿದು ಬೆಂಕಿ ಹಚ್ಚಿದ್ದಾರೆ. ಅದು ಅವರ ಇಡೀ ಫ್ಲಾಟ್​ಗೆ ಆವರಿಸಿಕೊಂಡಿದೆ. ಸ್ಥಳೀಯರ ಪ್ರಕಾರ, ಜೇಡಕ್ಕೆ ತಗುಲಿದ್ದ ಬೆಂಕಿ ಮ್ಯಾಟ್​ಗೂ ತಗುಲಿ ಎಲ್ಲೆಡೆ ಹಬ್ಬಿಕೊಂಡಿರಬಹುದು ಎನ್ನಲಾಗಿದೆ.

ಅಗ್ನಿ ಅವಘಡ ವಿಷಯ ತಿಳಿಯುತ್ತಿದ್ದಂತೆ, ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಬೆಂಕಿ ಮಾತ್ರ ಬೇಗ ನಂದಲೇ ಇಲ್ಲವಂತೆ. ಈ ಅವಘಡದಲ್ಲಿ ಸುಮಾರು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಯಾಗಿದ್ದು, ಅಪಾರ್ಟ್​ವೆುಂಟ್​ನ ಕೆಲ ಫ್ಲಾಟ್​ಗಳು ವಾಸಯೋಗ್ಯವಾಗಿ ಉಳಿದಿಲ್ಲ ಎನ್ನಲಾಗಿದೆ. ಈ ಕಥೆ ಕೇಳಿದ ಮೇಲೆ ರಾಜಮೌಳಿಯ ‘ಈಗ’ ಸಿನಿಮಾ ನೆನಪಾಗೇಆಗುತ್ತದೆ. ಅದೇ ರೀತಿ ‘ಜೇಡ’ ಎಂಬ ಹೊಸ ಸಿನಿಕಥೆ ಹೊಳೆದರೂ ಹೊಳೆಯಬಹುದೆನೊ….!

Leave a Reply

Your email address will not be published. Required fields are marked *

Back To Top