23.2 C
Bangalore
Saturday, December 14, 2019

ಜೆಸಿಬಿ ಬಳಸಿ ಅತಿಕ್ರಮಣ ತೆರವುಗೊಳಿಸಿ

Latest News

ದಾವಣಗೆರೆ ಲೋಕ ಅದಾಲತ್‌ನಲ್ಲಿ 21 ನ್ಯಾಯಾಧೀಶರು ಭಾಗಿ, 678 ಕೇಸ್ ವಿಲೆ, 7.34 ಕೋಟಿ ಪರಿಹಾರ ಇತ್ಯರ್ಥ

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲಾದ್ಯಂತ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲೆಯ...

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡಣೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡಣೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

16 ಯುವಕರ ಮೇಲೆ ಪ್ರಕರಣ ದಾಖಲು

ಬಾದಾಮಿ: ದ್ವಿಚಕ್ರ ವಾಹನಕ್ಕೆ ಹಾದು ಹೋಗಲು ಅವಕಾಶ ನೀಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ಇಬ್ಬರು ಯುವಕರ ಮಧ್ಯೆ ಆರಂಭವಾದ ಜಗಳ ಶನಿವಾರ ವಿಕೋಪಕ್ಕೆ...

ಹುಬ್ಬಳ್ಳಿ: ಸಿಆರ್​ಎಫ್ ಅನುದಾನ ಅಡಿ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಅತಿಕ್ರಮಣ ಕಟ್ಟಡ ಸೇರಿದಂತೆ ಇತರೆ ಜಾಗ ಅಡ್ಡಿಯಾಗಿದ್ದು, ಜೆಸಿಬಿ ಮೂಲಕ ತೆರವುಗೊಳಿಸಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸಿಆರ್​ಎಫ್ ಅನುದಾನಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕರೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಹೆಸ್ಕಾಂ ಮತ್ತು ಮಹಾನಗರ ಪಾಲಿಕೆ ಮಧ್ಯೆ ಒಪ್ಪಂದವಾಗಿದೆ. ಏನೇ ಸಮಸ್ಯೆ ಇದ್ದರೂ ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಆದರೂ ವಿಳಂಬವಾಗುತ್ತಿರುವುದು ಏಕೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹೈಕೋರ್ಟ್ ಬಳಿ, ಉಣಕಲ್ ಕ್ರಾಸ್, ತತ್ವಾದರ್ಶ, ಇಂಡಿಪಂಪ್ ಸೇರಿ ಇತರೆಡೆ ಜಾಗ ಅತಿಕ್ರಮಣವಾಗಿವೆ. ಮಹಾನಗರ ಪಾಲಿಕೆ ಇದನ್ನು ತೆರವುಗೊಳಿಸಬೇಕು. ಕೆಎಂಸಿ ಕಾಯ್ದೆ ಸೆಕ್ಷನ್ 321 ಎ(ಸಿ) ಅನ್ವಯ ಮಾಲೀಕರಿಗೆ ತೆರವುಗೊಳಿಸಲು ಹೇಳಬೇಕು. ಇಲ್ಲವಾದರೆ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಬೇಕೆಂಬುದಿದೆ. ಅಧಿಕಾರಿಗಳು ಓದುತ್ತಿಲ್ಲವೇಕೆ? ಎರಡು ದಿನದಲ್ಲಿ ಇದೆಲ್ಲ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಪಾಲಿಕೆ ಪಿಆರ್​ಒ ಎಸ್.ಸಿ. ಬೇವೂರ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.

ಮಳೆ ಬಂದರೆ ಸಾಕು ವಾಹನ ಹಾಗೂ ಜನರು ಓಡಾಡದಂತಾಗುತ್ತದೆ. ಕಾಮಗಾರಿ ನಡೆದ ಕಡೆಯೆಲ್ಲ ಗುಣಮಟ್ಟ ಕಾಣುತ್ತಿಲ್ಲ. ಫೇವರ್ಸ್ ರಸ್ತೆಗಿಂತ ಮೇಲಿದೆ. ಆಗಿರುವ ಕಾಮಗಾರಿಯೂ ಗುಣಮಟ್ಟದಿಂದ ಕೂಡಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾದರರನ್ನೂ ಶೆಟ್ಟರ್ ತರಾಟೆಗೆ ತೆಗೆದುಕೊಂಡರು. ಬಿಆರ್​ಟಿಎಸ್ ವ್ಯಾಪ್ತಿಗೆ ಬರುವ ವಿದ್ಯುತ್ ಕಂಬ ಸ್ಥಳಾಂತರ ಹಾಗೂ ಗಿಡಗಳ ತೆರವು ಕಾರ್ಯ ಜೂ. 25ರೊಳಗೆ ಮುಗಿಸುವಂತೆ ಬಿಆರ್​ಟಿಎಸ್ ಎಂ.ಡಿ. ಬಸವರಾಜ ಅವರಿಗೆ ಸೂಚಿಸಿದರು.

ಎಂಎಲ್​ಎ, ಎಂಪಿ ಹಾಗೂ ಎಂಎಲ್​ಸಿ ಅನುದಾನಕ್ಕೆ ಸಂಬಂಧಿಸಿದ 54 ಫೈಲ್​ಗಳು ಪೆಂಡಿಂಗ್ ಉಳಿದಿವೆ ಏಕೆ? ಕ್ಲಿಯರ್ ಆಗಲು ಇನ್ನೆಷ್ಟು ದಿನ ಬೇಕು? ಎಂದು ಶೆಟ್ಟರ್ ಸಿಟ್ಟಿಗೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಅದ್ಯಾವ ಫೈಲ್​ಗಳು ಬಾಕಿ ಇವೆ ಎಂಬುದು ಸಂಜೆಯೊಳಗೆ ಮಾಹಿತಿ ನೀಡುವಂತೆ ಬೇವೂರ ಅವರಿಗೆ ಸೂಚಿಸಿದರು. ವಾಕರಾರಸಾ ಸಂಸ್ಥೆ ಎಂ.ಡಿ. ರಾಜೇಂದ್ರ ಚೋಳನ್, ತಹಸೀಲ್ದಾರ್ ಶಶಿಧರ ಮಾಡ್ಯಾಳ, ರಾಷ್ಟ್ರೀಯ ಹೆದ್ದಾರಿಯ ಇಇ ಎನ್.ಎಂ. ಕುಲಕರ್ಣಿ, ಹೆಸ್ಕಾಂ, ಬಿಆರ್​ಟಿಎಸ್, ಹುಡಾ, ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮಸೀದಿ ತೆರವುಗೊಳಿಸಲು ಹೆದರಿಕೆಯೇ?: ಕಮರಿಪೇಟೆ ಮುಂಭಾಗದಲ್ಲಿ ಎರಡು ಮಸೀದಿಗಳಿವೆ. ಸಿಆರ್​ಎಫ್ ಅನುದಾನ ಅಡಿ ಅಡ್ಡಿಯಾಗಿರುವ ಇವುಗಳ ತೆರವಿಗೆ ನಿಮಗೆ ಹೆದರಿಕೆಯೇ? ಎಂದು ಜಗದೀಶ ಶೆಟ್ಟರ್, ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸುಪ್ರೀಂಕೋರ್ಟ್ ನಿರ್ದೇಶನವಿದೆ. ಸರ್ವೆಯಲ್ಲೂ ಇದೆ. ಆದರೂ ತೆರವುಗೊಳಿಸಲು ಹಿಂಜರಿಯುವುದು ಏಕೆ? ಬಂಕಾಪುರ ಚೌಕ್ ಬಳಿಯ ಮಸೀದಿ ಕತೆಯೂ ಹೀಗೆ ಆಗಿದೆ. ಹೀಗೆ ಬಿಟ್ಟರೆ ಹುಬ್ಬಳ್ಳಿ ಸುಂದರವಾಗಿ ಕಾಣುವುದು ಯಾವಾಗ? ನಿಮಗೆ ಯಾರ ಭಯವಿದೆ ಹೇಳಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇನ್ನೆರಡು ದಿನದಲ್ಲಿ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಹಾಗಾದರೆ ಎರಡು ದಿನದಲ್ಲಿ ತಾವು ತೆಗೆದುಕೊಂಡ ನಿರ್ಧಾರವನ್ನು ನನಗೆ ತಿಳಿಸಿ ಎಂದರು.

ಸರ್ಕಾರ ಕೊಟ್ಟ ಹಣ ಬಡ್ಡಿಗಾಗುತ್ತೆ !: ಸಿಆರ್​ಎಫ್ ಅನುದಾನ ಅಡಿ ಮಾಡುತ್ತಿರುವ ಕೆಲಸದಿಂದ ಗುತ್ತಿಗೆದಾರರು ಬೇಸತ್ತ ಪ್ರಸಂಗ ನಡೆಯಿತು. ಪದೇ ಪದೆ ಗುತ್ತಿಗೆದಾರರು ಕೆಲಸ ಮಾಡಿ ಎಂದು ಶೆಟ್ಟರ್ ಹೇಳುತ್ತಿದ್ದಂತೆ, ಮಾಡುತ್ತೇವೆ ಸರ್. ನಾವು 20ರಿಂದ 25 ಕೋಟಿ ರೂ. ಖರ್ಚು ಮಾಡಿದ್ದೇವೆ. ಆದರೆ, ಸರ್ಕಾರದಿಂದ ಬರುವ 1ರಿಂದ 2 ಕೋಟಿ ರೂ. ಹಣ ನಾವು ಪಡೆದ ಸಾಲಕ್ಕೆ ಬಡ್ಡಿ ಕಟ್ಟಲು ಆಗುತ್ತದೆ. ರಾಜ್ಯ ಸರ್ಕಾರ ಸರಿಯಾಗಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಅಳಲು ತೋಡಿಕೊಂಡರು. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸುತ್ತೇವೆ. ಮೊದಲು ಗುಣಮಟ್ಟದ ಕಾಮಗಾರಿ ನಡೆಸಿ. ಇದರ ಬಗ್ಗೆ ಹೆದರಬೇಡಿ ಎಂದು ಶೆಟ್ಟರ್ ಅಭಯ ನೀಡಿದರು. ನೀವು ಟೆಂಡರ್ ಪಡೆದಿರುವುದರಿಂದ ಕೆಲಸ ಮಾಡಲೇಬೇಕು ಎಂದು ಡಿಸಿ ದೀಪಾ ಚೋಳನ್ ಗುತ್ತಿಗೆದಾರರಿಗೆ ಹೇಳಿದರು.

ರಸ್ತೆ ಕಾಮಗಾರಿ ಪರಿಶೀಲಿಸಿದ ಶೆಟ್ಟರ್: ಇಲ್ಲಿನ ಕಮಪರಿಪೇಟೆಯಿಂದ ಉಣಕಲ್ ಕ್ರಾಸ್ ಹಾಗೂ ಆದರ್ಶ ಕಾಲೇಜ್​ನಿಂದ ಇಂಡಿಪಂಪ್ ವರೆಗಿನ ಸಿಆರ್​ಎಫ್ ಅನುದಾನದ ರಸ್ತೆ ಕಾಮಗಾರಿಯನ್ನು ಶೆಟ್ಟರ್ ಪರಿಶೀಲಿಸಿದರು. ಅರೆಬರೆ ಕಾಮಗಾರಿ, ಗುಣಮಟ್ಟದ ಕೊರತೆ, ಫೇವರ್ಸ್ ಬಳಕೆಯಲ್ಲಿನ ನಿಯಮದ ಉಲ್ಲಂಘನೆಯಾಗಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬ ಸ್ಥಳಾಂತರ ಮಾಡಬೇಕು. ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಬೇಕು ಎಂದು ಸೂಚಿಸಿದರು.

ರಾಜ್ಯ ಸರ್ಕಾರ ಸಿಆರ್​ಎಫ್ ಅನುದಾನ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ತುಮಕೂರು, ಮಂಡ್ಯ, ಮೈಸೂರು, ಹಾಸನಕ್ಕೆ ಮಾತ್ರ ಹೆಚ್ಚು ಹೆಚ್ಚು ಅನುದಾನ ನೀಡುತ್ತಿದೆ. ಸಮ್ಮಿಶ್ರ ಸರ್ಕಾರ ಗಟ್ಟಿ ಇಲ್ಲದ ಕಾರಣ ಅಧಿಕಾರಿಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಲಾಗುತ್ತಿದೆ. ಸಮ್ಮಿಶ್ರ ಸರ್ಕಾರ ಸತ್ತು ಹೋಗಿದೆ. | ಜಗದೀಶ ಶೆಟ್ಟರ್ ಮಾಜಿ ಸಿಎಂ

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...