ಕೊಳ್ಳೇಗಾಲ: ಜೆಡಿಎಸ್ ರಾಜ್ಯಾಧ್ಯಕ್ಷಗಾದಿಯಿಂದಎಚ್.ಕೆ. ಕುಮಾರಸ್ವಾಮಿ ಬದಲಾವಣೆ ಇಲ್ಲ ಎಂದು ಮಾಜಿ ಸಚಿವ ರೇವಣ್ಣ ಹೇಳಿದರು.
ತಾಲೂಕಿನ ಶಿವಸಮುದ್ರ ಗ್ರಾಮದಲ್ಲಿರುವ ಮಧ್ಯರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರಾದ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸಂಘಟನೆ ನಡೆಯಲಿದೆ. ಯಾವುದೇ ಕಾರಣಕ್ಕೂ ರಾಜ್ಯಾಧ್ಯಕ್ಷರ ಬದಲಾವಣೆಯಾಗಲ್ಲ ಎಂದರು.
ರಾಮನಗರಕ್ಕೆ ನವ ಬೆಂಗಳೂರು ಎಂದು ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾನೇನು ಮಾತನಾಡಲ್ಲ.ಮುಂದೆ ಈ ಕುರಿತು ಮಾತನಾಡ್ತೀನಿ.
ದೇವೇಗೌಡರಿಗೆ ವಯಸ್ಸು 87 ಆಯ್ತು, ಆರೋಗ್ಯ ಸಮಸ್ಯೆಯಿಂದ ಅವರು ದರ್ಶನಕ್ಕೆ ಬಂದಿಲ್ಲ ಎಂದು ತಿಳಿಸಿದರು.