ಜೆಡಿಎಸ್-ಕಾಂಗ್ರೆಸ್ ವಾರ್ಡ್​ವಾರು ಸಭೆ

ಶಿವಮೊಗ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಜೆಡಿಎಸ್-ಕಾಂಗ್ರೆಸ್ ಮುಖಂಡರ, ಚುನಾಯಿತ ಜನಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಜಂಟಿ ವಾರ್ಡ್​ವಾರು ಸಭೆಗಳು ಮಾ.26 ಮತ್ತು 27ರಂದು ನಗರದ ವಿವಿಧೆಡೆ ನಡೆಯಲಿವೆ.

26ರಂದು ಬೆಳಗ್ಗೆ 10ಕ್ಕೆ ಬಂಜಾರ ಸಮುದಾಯ ಭವನದಲ್ಲಿ ಬಸವನಗುಡಿ, ಟ್ಯಾಂಕ್​ವೊಹಲ್ಲಾ, ಬಾಪೂಜಿನಗರ, ಬೆಳಗ್ಗೆ 11.30ಕ್ಕೆ ಗುರುಪುರದ ನಂಜುಂಡೇಶ್ವರ ಸಮುದಾಯ ಭವನದಲ್ಲಿ ಅರಮನೆ ಪ್ರದೇಶ, ವಿದ್ಯಾನಗರ (ಉತ್ತರ ಮತ್ತು ದಕ್ಷಿಣ), ಪುರಲೆ, ಸಂಜೆ 4ಕ್ಕೆ ಟಿಪ್ಪುನಗರದ ಕೆಕೆ ಶೆಡ್ 4ನೇ ತಿರುವಿನಲ್ಲಿ ಗೋಪಾಲಗೌಡ ಬಡಾವಣೆ, ಗೋಪಾಳ ಕೆಎಚ್​ಬಿ ಕಾಲನಿ, ಜೆ.ಪಿ.ನಗರ, ಗೋಪಿಶೆಟ್ಟಿಕೊಪ್ಪ, ಸವಾಯಿಪಾಳ್ಯ, ಸಂಜೆ 6ಕ್ಕೆ ಗೋಪಾಳ ಕೊನೆ ಬಸ್ ನಿಲ್ದಾಣದ ಆಶ್ರಯ ಬಡಾವಣೆಯಲ್ಲಿ ಸಹ್ಯಾದ್ರಿ ನಗರ, ಅಶ್ವತ್ಥನಗರ, ರಾತ್ರಿ 7ಕ್ಕೆ ಕಾಶಿಪುರ ಮುಖ್ಯ ರಸ್ತೆಯ ಮೆಡಿಕಲ್ ಹಾಲ್​ನಲ್ಲಿ ಕಾಶಿಪುರ, ಹುಡ್ಕೋ ಕಾಲನಿ, ವಿನೋನಗರ ರಾತ್ರಿ 7.30ಕ್ಕೆ ಬಸವಕೇಂದ್ರದ ಪಕ್ಕದ ಖಾಲಿ ಮೈದಾನದಲ್ಲಿ ಜಟ್​ಪಟ್​ನಗರ, ವೆಂಕಟೇಶನಗರ, ಜಯನಗರ, ಶಾಂತಿನಗರ, ಮಲ್ಲೇಶ್ವರನಗರದ ವಾರ್ಡ್ ಕಾರ್ಯಕರ್ತರ ಸಭೆಗಳು ನಡೆಯಲಿವೆ.

ಮಾ.27ರಂದು ಬೆಳಗ್ಗೆ 10ಕ್ಕೆ ಪಾರ್ಕ್ ರಸ್ತೆಯ ಎಆರ್​ಬಿ ಕಾಲನಿಯಲ್ಲಿ ಅಶೋಕನಗರ, ಮಿಳ್ಳಘಟ್ಟ, ಆರ್​ಎಂಎಲ್ ನಗರ, ಸಂಜೆ 5ಕ್ಕೆ ಗಾಂಧಿಬಜಾರ್​ನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೀಗೆಹಟ್ಟಿ, ಆಜಾದ್​ನಗರ, ಗಾಂಧಿಬಜಾರ್(ಪೂರ್ವ ಮತ್ತು ಪಶ್ವಿಮ), ಸಂಜೆ 5.30ಕ್ಕೆ ದೊಡ್ಡ ಹನುಮಂತಪ ಛತ್ರದಲ್ಲಿ ಹೊಸಮನೆ, ಶರಾವತಿನಗರ ಹಾಗೂ ದುರ್ಗಿಗುಡಿ ವಾರ್ಡ್​ಗಳ ಪ್ರಮುಖರು ಮತ್ತು ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಭೂಪಾಲ್ ತಿಳಿಸಿದ್ದಾರೆ.