ಚಿಕ್ಕಮಗಳೂರು: ಅಂದರ್ ಬಾಹರ್ ಜೂಜಾಟದ ಮೇಲೆ ದಾಳಿ ನಡೆಸಿರುವ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಜೂಜಾಡುತ್ತಿದ್ದ ೯ ಜನರನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಬಳಸಿದ್ದ ೧,೧೪,೮೭೦ ರೂ. ವಶಪಡಿಸಿಕೊಂಡಿದ್ದಾರೆ.
ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್‌ಪಿ ಡಾ.ವಿಕ್ರಮ ಅಮಟೆ, ಡಿವೈಎಸ್‌ಪಿ ಶೈಲೆಂದ್ರ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಸಿಪಿಐ ಸಚಿನ್ ನೇತೃತ್ವದ ತಂಡ ದಾಳಿ ನಡೆಸಿದೆ.
ಕದ್ರಿಮಿದ್ರಿ ವ್ಯಾಪ್ತಿಯ ಅರಣ್ಯಕಡೆಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ಡಿ.ರಾಜು, ಕೆ.ಜಿ.ಮಧು, ನವೀನ್ ಕುಮಾರ್, ಕೆ.ಆರ್.ಪ್ರದೀಪ್, ಬಸವರಾಜು, ಕಿರಣ್, ಪರಮೇಶ, ಸಿ.ಆರ್.ಪುನೀತ್, ಡಿ.ಕೆ.ಜ್ಞಾನೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕ ಸಚಿನ್‌ಕುಮಾರ ನೇತೃತ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಪ ನಿರೀಕ್ಷಕ ಕೆ.ವಿ. ರಾಜೇಶ್, ಸಂಚಾರ ಉಪನಿರೀಕ್ಷಕ ಎಸ್.ವಿ. ರಘುನಾಥ, ಸಿಬ್ಬಂದಿಗಳಾದ ವಿನಾಯಕ, ಲಕ್ಷö್ಮಣ, ಕಿರಣ, ಜೆ.ಸಿ.ಶಶಿಧರ, ಲೋಹಿತ್ ಅವರುಗಳನ್ನೊಳಗೊಂಡ ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು. ಕಾನೂನುಕ್ರಮ ಜರುಗಿಸುವಲ್ಲಿ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗಳ ಕಾರ್ಯವನ್ನು ಎಸ್‌ಪಿ ಪ್ರಶಂಸಿಸಿದ್ದಾರೆ.