ಚಿತ್ರದುರ್ಗ: ಜಿಲ್ಲೆಯ ವಿವಿಧ ಕ್ಲಬ್‌ಗಳ ಮೇಲೆ ಪೊಲೀಸರು ಬುಧವಾರ ಏಕ ಕಾಲದಲ್ಲಿ ದಾಳಿ ನಡೆಸಿ ಹಲವು ಜೂಜುಕೋರರ ವಿರುದ್ಧ ಪ್ರಕರಣ ದಾಖಲಿಸಿ, ಒಟ್ಟು 96,780 ರೂ. ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ 22 ಕ್ಲಬ್‌ಗಳ ಮೇಲೆ ಚಿತ್ರದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ಡಿವೈಎಸ್ಪಿಗಳ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿ, ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ದಾಳಿ ವೇಳೆ ನಗರದ ಬಡಾವಣೆ ಠಾಣಾ ವ್ಯಾಪ್ತಿಯ ಪವರ್ ರಿಕ್ರಿಯೇಷನ್ ಹಾಗೂ ನಗರ ಕ್ಲಬ್‌ನಲ್ಲಿ ಜೂಜಾಡುತ್ತಿದ್ದ 6 ಜನರ ವಿರುದ್ಧ ಪ್ರಕರಣ ದಾಖಲಿಸಿ, ಅಲ್ಲಿದ್ದ 2,590 ರೂ. ನಗದು, ಹೊಳಲ್ಕೆರೆ ಠಾಣಾ ವ್ಯಾಪ್ತಿಯ ಫ್ರೆಂಡ್ಸ್ ಕ್ರೀಡಾ ಮತ್ತು ಮನೋರಂಜನ ಕೇಂದ್ರ ಹಾಗೂ ಅಲ್ಲಿಯ ಟೌನ್ ಕ್ಲಬ್‌ನಲ್ಲಿ ಜೂಜಾಡುತ್ತಿದ್ದ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, 1,190 ರೂ. ನಗದು, 57ಟೋಕನ್‌ಗಳು ಹಾಗೂ ನಾಯಕನಹಟ್ಟಿ ಅಸೋಸಿಯೇಷನ್ ಕ್ಲಬ್‌ನಲ್ಲಿ ಜೂಜಾಡುತ್ತಿದ್ದ 15 ಜನರ ವಿರುದ್ಧ ಪ್ರಕರಣ ದಾಖಲಿಸಿ, ಅಲ್ಲಿದ್ದ 93 ಸಾವಿರ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಉಳಿದಂತೆ ಇತರೆ ಕ್ಲಬ್‌ಗಳಲ್ಲಿ ಹೈಕೋರ್ಟ್ ಸೂಚನೆ ಪಾಲಿಸದೆ ಇರುವುದು ಕಂಡು ಬಂದಿದ್ದು, ನ್ಯಾಯಾಲಯದ ಸೂಚನೆಗಳನ್ನು ಕಡ್ಡಾಯ ಪಾಲಿಸುವಂತೆ ತಾಕೀತು ಮಾಡಿ, ಸಂಬಂಧಿಸಿದ ಇಲಾಖೆಗಳಿಗೆ ವರದಿ ಮಾಡಲಾಗಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.
