Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಜೀವ ವಿಮಾ ಪಾಲಿಸಿಯ ಪರಭಾರೆ

Wednesday, 10.05.2017, 3:00 AM       No Comments

| ಜೆ.ಸಿ. ಜಾಧವ ಎಲ್​ಐಸಿ ಅಭಿವೃದ್ಧಿ ಅಧಿಕಾರಿ

ಜೀವ ವಿಮಾ ಪಾಲಿಸಿಯು ಕುಟುಂಬದ ಆರ್ಥಿಕ ರಕ್ಷಣೆಯ ಜೊತೆಗೆ ವಿವಿಧ ಸೌಲಭ್ಯವುಳ್ಳ ಉಳಿತಾಯದ ವಿಧಾನವೆಂದು ಈಗಾಗಲೇ ತಿಳಿದಿದ್ದೇವೆ. ಕಷ್ಟಕಾಲಕ್ಕೆ ಸಾಲ ಪಡೆಯುವ ಅವಕಾಶವನ್ನೂ ಅದು ನೀಡಿದೆ. ಜೀವ ವಿಮಾ ಪಾಲಿಸಿಯು ಒಂದು ಆಸ್ತಿ ಇದ್ದಂತೆ ಹಾಗೂ ಹಕ್ಕುಗಳನ್ನು ಪ್ರತಿನಿಧಿಸುತ್ತದೆ. ಆಸ್ತಿ ವರ್ಗಾವಣೆ ಕಾಯ್ದೆ 1882ರಲ್ಲಿ ಹೇಳಿದಂತೆ ಅದೊಂದು ಕ್ರಮಾರ್ಹ ದಾವೆ(ಅಠಿಜಿಟ್ಞಚಚ್ಝಿಛಿ ಇಚಜಿಞ). ಪಾಲಿಸಿ ಬಾಂಡ್, ಪಾಲಿಸಿದಾರನ ಆಸ್ತಿಯ ಒಂದು ಭಾಗವಾಗಿ, ಅದನ್ನು ಅಡ ಇಡುವ, ದಾನ ಮಾಡುವ ಅಥವಾ ಉಯಿಲು ಕೊಡುವ ಹಕ್ಕು ಪಾಲಿಸಿದಾರರಿಗಿರುತ್ತದೆ. ಹಕ್ಕನ್ನು ಬದಲಾಯಿಸುವ ಪದ್ಧತಿಗೆ ಅಸೈನ್​ವೆುಂಟ್(ಪರಭಾರೆ) ಎಂದು ಕರೆಯಲಾಗುತ್ತದೆ.

ವಿಮಾ ಕಾಯ್ದೆ 1938ರ 38ನೇ ಕಲಂ ಪ್ರಕಾರ ಪಾಲಿಸಿಯ ಪರಭಾರೆಗೆ (ಬೇರೆಯವರಿಗೆ ವಹಿಸಿಕೊಡುವುದು) ಅವಕಾಶವಿದೆ. ಅಂದರೆ ಜೀವ ವಿಮಾ ಪಾಲಿಸಿ ಬಾಂಡನ್ನು ಪರಭಾರೆ ಮಾಡಿ ಹಣಕಾಸು ನೆರವನ್ನು ಪಡೆಯಬಹುದು. ಇಲ್ಲಿ ಪಾಲಿಸಿದಾರನ ಹಕ್ಕು ಅಧಿಕಾರ ಹಾಗೂ ಆಸಕ್ತಿಯನ್ನು ಅಸೈನಿಗೆ ವಹಿಸಿಕೊಡಲಾಗುತ್ತದೆ. ಒಂದು ಸಲ ಅಸೈನ್​ವೆುಂಟ್ ಮಾಡಿದ ನಂತರ ಅದನ್ನು ಬದಲಿಸಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ. ಅಸೈನಿ(ಅಸೈನ್​ವೆುಂಟ್ ಮಾಡಿಸಿಕೊಂಡ ವ್ಯಕ್ತಿ ಅಥವಾ ಸಂಸ್ಥೆ) ಅದನ್ನು ಮರು ಅಸೈನ್​ವೆುಂಟ್ ಮಾಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಮುಂಚಿತ ಮುಕ್ತಾಯ(ಫೋರ್​ಕ್ಲೋಜರ್) ಎಂದರೆ ಅವಧಿಗಿಂತ ಮೊದಲೇ ಪಾಲಿಸಿಯನ್ನು ಮುಕ್ತಾಯಗೊಳಿಸುವುದು. ಪಾಲಿಸಿಯ ಮೇಲೆ ಸಾಲ ಪಡೆದ ನಂತರ, ಬಡ್ಡಿ ಅಥವಾ ಅಸಲು ಕಟ್ಟದಿದ್ದರೂ ಪಾಲಿಸಿಯ ಪ್ರೀಮಿಯಂ ಸರಿಯಾಗಿ ಪಾವತಿಸುತ್ತಿದ್ದರೆ ತೊಂದರೆ ಇಲ್ಲ. ಆದರೆ ಪ್ರೀಮಿಯಂ ಪಾವತಿಸುವುದನ್ನು ನಿಲ್ಲಿಸಿದರೆ, ಅದು ಪೇಡ್-ಅಪ್ ಪಾಲಿಸಿಯಾಗುವ ಕಾರಣ, ಬಡ್ಡಿ ಏರಿದಂತೆ ಸರೆಂಡರ್ ವ್ಯಾಲ್ಯೂ (ಎಸ್.ವಿ) ಹೆಚ್ಚಾಗುವುದಿಲ್ಲ. ಒಂದು ಹಂತದಲ್ಲಿ ಸಾಲ ಹಾಗೂ ಬಡ್ಡಿಯ ಮೊತ್ತ ಸರೆಂಡರ್ ವ್ಯಾಲ್ಯೂ ಮೊತ್ತವನ್ನೂ ಮೀರಿ ಹೋಗಬಹುದು. ಅಂತಹ ಸಂದರ್ಭಗಳಲ್ಲಿ ಮುಂಚಿತ ಮುಕ್ತಾಯ(ಫೋರ್​ಕ್ಲೋಜರ್)ಗೊಳಿಸುವುದು ಅನಿವಾರ್ಯವಾಗುತ್ತದೆ. ಈ ರೀತಿ ಮುಂಚಿತ ಮುಕ್ತಾಯಕ್ಕೆ ವಿಮಾ ಕಂಪನಿ ನಿರ್ಧರಿಸಿದರೆ, ಪಾಲಿಸಿದಾರರಿಗೆ ಬಾಕಿಯಿರುವ ಬಡ್ಡಿಯ ಹಣ ಪಾವತಿಸಬೇಕೆಂದು ತಿಳಿಸಲಾಗುತ್ತದೆ. ಇಷ್ಟಾದರೂ ಬಡ್ಡಿಯ ಹಣ ಕಟ್ಟದಿದ್ದರೆ ಪಾಲಿಸಿಯನ್ನು ಫೋರ್​ಕ್ಲೋಜರ್ ಮಾಡಲಾಗುತ್ತದೆ. ಅಂದರೆ ಸಾಲದ ಮೊತ್ತಕ್ಕೆ ಸರೆಂಡರ್ ಮಾಡಲಾಗುತ್ತದೆ. ಎಲ್​ಐಸಿಯು 5 ವಿಧದ ಸೌಲಭ್ಯ ನೀಡುವ ಮೂಲಕ ಪಾಲಿಸಿಯ ಮರುಚಾಲನೆಗೆ ಅವಕಾಶ ನೀಡುತ್ತದೆ. ಹಾಗಾಗಿ ಪಾಲಿಸಿಯ ಮೇಲೆ ಸಾಲ ಪಡೆದು ಹಾಗೇ ಬಿಡುವ ಬದಲು, ಕನಿಷ್ಠ ಪ್ರೀಮಿಯಂ ಪಾವತಿಸಿ ವಿಮಾರಕ್ಷಣೆಯನ್ನು ನಿರಂತರವಾಗಿ ಪಡೆದುಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *

Back To Top