ಜೀವ ಕಳೆದುಕೊಂಡ ಐತಿಹಾಸಿಕ ಕೆರೆ

blank

ಭಾರತಿ ಓ.ಚಿತ್ತಯ್ಯ ಪರಶುರಾಮಪುರ
ಒಂದು ಕಾಲದಲ್ಲಿ ಸದಾ ನೀರಿನಿಂದ ತುಂಬಿ ತುಳುಕುತ್ತಿದ್ದ ಐತಿಹಾಸಿಕ ಕೆರೆ ಒಡಲೊಳಗೆ ಇದೀಗ ಬಳ್ಳಾರಿ ಜಾಲಿ ಕಾನನ. ಪರಿಣಾಮ ಅವಸಾನದ ಅಂಚಿನಲ್ಲಿದ್ದು, ಕೆಲ ವರ್ಷ ಹೀಗೆ ಕಳೆದರೆ ಕೆರೆಯನ್ನು ಆ ಸ್ಥಳದಲ್ಲಿ ಹುಡುಕಬೇಕಾದ ದುಸ್ಥಿತಿ ಬಂದರೂ ಆಶ್ಚರ್ಯವೇನಲ್ಲ…!
ಹೌದು, ಗ್ರಾಮದ ಪಾವಗಡ ರಸ್ತೆಯ ಚನ್ನಕೇಶವ ದೇವಸ್ಥಾನದ ಹತ್ತಿರ ಚೋಳರ ಕಾಲದಲ್ಲಿ ಕ್ರಿ.ಶ.1123ರಲ್ಲಿ ನಿರ್ಮಾಣಗೊಂಡ ಹಳೇ ಕೆರೆಯ ದುಸ್ಥಿತಿ ಇದು.
ಅಂದಾಜು 100 ಹೆಕ್ಟೇರ್‌ಗೂ ಹೆಚ್ಚು ವಿಸ್ತೀರ್ಣವುಳ್ಳ ಕೆರೆ ಇದಾಗಿದ್ದು, ಸರ್ಕಾರ 2007-08ರಿಂದಲೂ ಕೆರೆಯ ಕಟ್ಟೆ ಹಾಗೂ ಕಾಲುವೆಗಳ ನಿರ್ಮಾಣ ಕಾರ್ಯ ಮಾಡಿತೇ ಹೊರತು. ಕೆರೆಯಲ್ಲಿ ದಟ್ಟವಾಗಿ ಬೆಳೆದಿರುವ ಜಾಲಿ ಹಾಗೂ ಇನ್ನಿತರ ಗಿಡ ಮರ ತೆರವುಗೊಳಿಸಿ ಹೂಳೆತ್ತುವ ಕಾಮಗಾರಿ ಮಾಡಲೇ ಇಲ್ಲ. ಅಂದಾಜು ಈ ಹಿಂದೆ ಸದಾ ಜೀವಜಲದಿಂದ ತುಂಬಿರುತ್ತಿದ್ದ ಈ ಕೆರೆ ಇಂದು ಬರಡಾಗಿ ತನ್ನ ಒಡಲಲ್ಲಿ ಬರೀ ಜಾಲಿಯನ್ನೇ ತುಂಬಿಕೊಂಡಿದೆ.
ಇಷ್ಟಕ್ಕೆಲ್ಲ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ. ಕೆರೆ ಇದೀಗ ಸಂಪರ್ಣ ಅಪಾಯ ಮಟ್ಟದಲ್ಲಿದ್ದು, ಕೂಡಲೇ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯಲ್ಲಿನ ಜಾಲಿ ತೆರವುಗೊಳಿಸಿ, ಹೂಳು ತೆಗೆಸಿ ಮಳೆಗಾಲದಲ್ಲಿ ನೀರು ಸಂಗ್ರಹವಾಗಲು ಅನುವು ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
ಈ ಕೆರೆಗಾಗಿಯೇ ಈ ಭಾಗದ ಅಂದಿನ ರಾಜಕಾರಣಿ ಬಿ.ಎಲ್.ಗೌಡರ ಅಧಿಕಾರ ಅವಧಿಯಲ್ಲಿ ವೇದಾವತಿ ನದಿಗೆ ಶಿಡ್ಲಯ್ಯನಕೋಟೆ ಹತ್ತಿರ ಬೃಹತ್ ಬಲನಾಲೆ ನಿರ್ಮಿಸಿದ್ದರು. ಅದರಿಂದ ಬರುವ ನೀರನ್ನು ಬುರುಡುಕುಂಟೆ, ಟಿ.ಎನ್.ಕೋಟೆ ಮತ್ತಿತರೆ ಗ್ರಾಮಗಳ ಜನರು ಅಲ್ಲಿಯೇ ಬಲ ನಾಲೆಯ ಕಟ್ಟೆ ಒಡೆದು ತಮ್ಮ ತಮ್ಮ ಕೆರೆಗಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಹಳೆಯ ಕೆರೆಗೆ ನೀರು ಮರೀಚಿಕೆಯಾಗಿದೆ.
ಈಚೆಗೆ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಭಾಗದ ಕೆರೆಗಳಿಗೆ ನೀರುಣಿಸಲು ಪೈಪ್‌ಲೈನ್ ಕಾಮಗಾರಿ ಆರಂಭಿಸಿದೆ. ಇನ್ನು ಕೆಲವೇ ವರ್ಷಗಳೊಳಗೆ ಈ ಕೆರೆಗಳಿಗೆ ಭದ್ರಾ ನೀರು ಬರಲಿದೆ. ಈ ಯೋಜನೆಯಡಿ ಕೆರೆಗೆ ನೀರು ತುಂಬಿಸುವ ಇಚ್ಛಾಶಕ್ತಿ ಅಧಿಕಾರಿಗಳು ಪ್ರದರ್ಶಿಬೇಕಿದೆ.

ಚನ್ನಕೇಶವಪುರದ ಬಳಿ ಲಕ್ಷ್ಮೀಚನ್ನಕೇಶವ ದೇವಸ್ಥಾನವನ್ನು ಚೋಳರ ಕಾಲದಲ್ಲಿ ನಿರ್ಮಿಸಿ ಅಂದೇ ಇಲ್ಲಿ ಬೃಹತ್ ಕೆರೆಯೊಂದನ್ನು ನಿರ್ಮಿಸಿದ್ದಾರೆ. ಕೆರೆಯ ಏರಿ ದುರಸ್ತಿ, ಕೆರೆ ಕಟ್ಟೆಗಳ ಮೇಲೆ ಬೆಳೆದ ಗಿಡ-ಗಂಟೆ ತೆರವುಗೊಳಸಿ ಹೂಳೆತ್ತಲು ಗ್ರಾಪಂ ನರೇಗಾ ಯೋಜನೆಯಡಿ ನೀಲನಕ್ಷೆಯೊಂದನ್ನು ಸಿದ್ಧಪಡಿಸಿ ತಾಪಂಗೆ ಅನುಮೋದನೆಗೆ ಕಳುಹಿಸಿಕೊಡಲಾಗುವುದು. ಮಂಜೂರಾಗಿ ಬಂದ ಕೂಡಲೇ ಹಳೇ-ಹೊಸ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುವುದು.
ಅನಿತಾ ವೆಂಕಟೇಶ, ಅಧ್ಯಕ್ಷೆ, ಗ್ರಾಪಂ, ಪರಶುರಾಮಪುರ

ವಿಶೇಷ ಯೋಜನೆ ಅಗತ್ಯ
ಕೆರೆ ನಿರ್ಮಾಣವಾದಂದಿನಿಂದ 1990ರವರೆಗೂ ಸದಾ ನೀರಿನಿಂದ ತುಂಬಿರುತ್ತಿದ್ದ ಈ ಕೆರೆ 1991ರಿಂದ ಇಲ್ಲಿಯವರೆಗೂ ಒಂದು ಹನಿ ನೀರನ್ನೂ ಕಂಡಿಲ್ಲ. ಈಗಾಲಾದರೂ ಕೆರೆ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ, ಅಂತರ್ಜಲ ವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂಬುದು ಗ್ರಾಮದ ಹಿರಿಯ, ನಿವೃತ್ತ ಇಂಜಿನಿಯರ್ ತಿಪ್ಪೇಸ್ವಾಮಿ, ಚಿತ್ರಲಿಂಗಪ್ಪ, ಕಾಟಪ್ಪ ಇತರರ ಒತ್ತಾಯ.

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…