ಜೀರೋ ಶಾರುಖ್ ಜತೆ ಶ್ರೀದೇವಿ ಮಿಂಚು

ಟಿ ಶ್ರೀದೇವಿ ಅಭಿನಯದ ಕೊನೇ ಸಿನಿಮಾ ಯಾವುದು ಎಂದರೆ, ಥಟ್ಟನೇ ಕೇಳಿಬರುವ ಉತ್ತರ ‘ಮಾಮ್. ಆದರೆ, ಆ ಉತ್ತರ ತಪು್ಪ. ಡಿ.21ರಂದು ತೆರೆಕಾಣಲಿರುವ ‘ಜೀರೋ’ ಚಿತ್ರದಲ್ಲಿ ಶ್ರೀದೇವಿ ಕಾಣಿಸಿಕೊಂಡಿದ್ದಾರೆ. ಅಧಿಕೃತವಾಗಿ ಈ ಸಿನಿಮಾ ಶ್ರೀದೇವಿಯ ಕೊನೇ ಸಿನಿಮಾವಾಗಲಿದೆ. ‘ಜೀರೋ’ದಲ್ಲಿ ಸಲ್ಮಾನ್ ಖಾನ್, ಕರಿಷ್ಮಾ ಕಪೂರ್, ಜೂಹಿ ಚಾವ್ಲಾ, ದೀಪಿಕಾ ಪಡುಕೋಣೆ, ಅಲಿಯಾ ಭಟ್ ಸೇರಿ ಸಾಕಷ್ಟು ಜನ ಬಾಲಿವುಡ್ ಸ್ಟಾರ್​ಗಳು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಲಿಸ್ಟ್​ಗೆ

ಶ್ರೀದೇವಿ ಕೂಡ ಸೇರ್ಪಡೆಯಾಗಿದ್ದಾರೆ. ಅಂದಹಾಗೆ, ಈ ಬಗ್ಗೆ ಶಾರುಖ್ ಸಾಕಷ್ಟು ಗೌಪ್ಯತೆ ಕಾಯ್ದುಕೊಳ್ಳುವಂತೆ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಶ್ರೀದೇವಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿರುವ ಕೊನೇ ಸಿನಿಮಾ ಇದಾಗಿರುವುದರಿಂದ ಅವರು ನಟಿಸಿರುವ ಯಾವುದೇ ದೃಶ್ಯಗಳು ಸೋರಿಕೆಯಾಗಬಾರದು. ಅಭಿಮಾನಿಗಳು ಚಿತ್ರಮಂದಿರದಲ್ಲೇ ನೋಡಿ ಎಂಜಾಯ್ ಮಾಡಬೇಕು ಎಂಬುದು ಶಾರುಖ್ ಪ್ಲಾ್ಯನ್. ಸತತ ಸೋಲಿನಿಂದ ಕಂಗೆಟ್ಟಿರುವ ಶಾರುಖ್ ಈ ಬಾರಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ.

ಮೊದಲ ಬಾರಿಗೆ ಕುಬ್ಜನಾಗಿ ಕಾಣಿಸಿಕೊಂಡಿರುವುದರಿಂದ ಈಗಾಗಲೇ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಹೆಚ್ಚಾಗಿದೆ. ಇನ್ನು, ಶಾರುಖ್ ಸಿನಿಮಾಗಳಲ್ಲಿ ಬಾಲಿವುಡ್ ಕಲಾವಿದರು ಈ ರೀತಿ ಗೆಸ್ಟ್ ಅಪಿಯರನ್ಸ್ ಮಾಡುವುದು ಇದೇ ಮೊದಲೇನಲ್ಲ. ‘ಓಂ ಶಾಂತಿ ಓಂ’ ಚಿತ್ರದಲ್ಲಿ ಹಿಂದಿ ಚಿತ್ರರಂಗದ ಬಹುತೇಕ ಎಲ್ಲ ಕಲಾವಿದರು ಕಾಣಿಸಿಕೊಂಡಿದ್ದರು. ಆನಂದ್ ಎಲ್. ರೈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಶಾರುಖ್​ಗೆ ನಾಯಕಿಯರಾಗಿ ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದಾರೆ. ಅಜಯ್-ಅತುಲ್ ಸಂಗೀತ ಸಂಯೋಜನೆ ಮಾಡಿದ್ದು, ಶಾರುಖ್ ಪತ್ನಿ ಗೌರಿ ಖಾನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Leave a Reply

Your email address will not be published. Required fields are marked *