ಸಿನಿಮಾ

ಜಿಲ್ಲೆಯ 15 ಕೇಂದ್ರಗಳಲ್ಲಿ ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆ

ಹಾಸನ: ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ 2023 ರ ಸಿಇಟಿ ಪರೀಕ್ಷೆಯನ್ನ ಮೇ 20 ಮತ್ತು 21 ರಂದು ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಫಾರ್ಮಸಿ, ಬಿ.ಎಸ್.ಸಿ ನರ್ಸಿಂಗ್ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಹಾಸನ ನಗರದ 15 ಪರೀಕ್ಷಾ ಕೇಂದ್ರದಗಳಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ಅವರು ತಿಳಿಸಿದರು.
15 ಪರೀಕ್ಷಾ ಕೇಂದ್ರಗಳಿಂದ ಒಟ್ಟು 6083 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳನ್ನು ಸಮಗ್ರತೆ, ಪಾವಿತ್ರತೆ ಮತ್ತು ಗೌಪ್ಯತೆಯಿಂದ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.ಪಾರದರ್ಶಕವಾಗಿ ನಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮರ ಕಣ್ಗಾವಲು ವ್ಯವಸ್ಥೆಯನ್ನು ಹಾಗೂ ಪರೀಕ್ಷಾ ಕೇಂದ್ರದ ಹೊರಗೆ ಅನುಮಾನಸ್ಪದ ವ್ಯಕ್ತಿಗಳ ಚಲನವಲನ ವೀಕ್ಷಣೆಗಾಗಿ ವಿಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದೆ. ಎಂದರು.
ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ವೀಕ್ಷಕರನ್ನು ನೇಮಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರಗಳಿಗೆ ಒಬ್ಬರು ಕಸ್ಟೋಡಿನ್ ಹಾಗೂ ಇಬ್ಬರು ಜಾಗೃತದಳದ ಸದಸ್ಯರನ್ನು ನಿಯೋಜಿಸಲಾಗಿದೆ. ಕಾರ್ಯನಿರ್ವಾಹಕ ನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು ಇವರ ಸೂಚನೆಯನ್ವಯ ವಿದ್ಯಾರ್ಥಿಗಳು ಸರ್ಜಿಕಲ್ ಮಾಸ್ಕ್ ಮಾತ್ರ ಧರಿಸಲು ಅವಕಾಶ ನೀಡಲಾಗಿದೆ. ಬಟ್ಟೆ ಮಾಸ್ಕ್, ಎನ್ 95 ಮಾಸ್ಕ್, ಮುಖ ವಸ್ತ್ರ, ಇವುಗಳನ್ನು ಧರಿಸುವಂತಿಲ್ಲ.
ವಿದ್ಯಾರ್ಥಿಗಳು ಕೈಗಡಿಯಾರ , ರಿಸ್ಟ್ ವಾಚ್, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಕ್ಯಾಲಿಕ್ಲೇಟರ್ಸ್‌, ಮೊಬೈಲ್, ಗ್ಯಾಜೆಟ್, ಹಿಯರ್ ಫೋನ್, ಬ್ಲೂಟೂತ್ ಮೈಕ್ರೋ ಫೋನ್ ಆಭರಣಗಳು, ಮುಖಗವುಸು, ಧರಿಸುವುದನ್ನ ಹಾಗೂ ಪೂರ್ಣತೋಳಿನ ಅಂಗಿಗಳನ್ನು ನಿಷೇಧಿಸಲಾಗಿದೆ. ಪರೀಕ್ಷೆ ಕೇಂದ್ರ ಸುತ್ತ ಸಿ.ಆರ್.ಪಿ.ಸಿ ಸೆಕ್ಷನ್ 144 ರಡಿ ನಿಷೇಧಾಜ್ನೆಯನ್ನು ಜಾರಿಗೊಳಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿಯೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್