More

  ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಮೆರಗು

  ಗೋಕರ್ಣ: ಹೊಸ ಹೊಸ ಪ್ರಯತ್ನ ಮತ್ತು ಹೊಸ ಆಕರ್ಷಣೆಯಿಂದ ಮಾತ್ರ ಪ್ರವಾಸೋದ್ಯಮ ಬೆಳೆಯುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ನುಡಿದರು.

  ಇಲ್ಲಿನ ತದಡಿ ಬಂದರಿನಲ್ಲಿ ಕೋಸ್ಟ್​ಲೈನ್ ವೆಂಚರ್​ನಿಂದ ಪ್ರಾರಂಭಿಸಲಾದ ವೈಟ್​ಪರ್ಲ್ ಕ್ರೂಸ್​ಬೋಟ್ ಉದ್ಘಾಟಿಸಿ ಅವರು ಮಾತನಾಡಿದರು.

  ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಇತಿಹಾಸದಲ್ಲಿ ಇದೊಂದು ದೊಡ್ಡ ಸವಾಲಾಗಿದೆ. ಬೋಟ್ ನಿರ್ವಣದ ಹಿಂದಿರುವ ಎಲ್ಲರೂ ಜಿಲ್ಲೆಗೆ ಅನನ್ಯವಾದ ಉಡುಗೊರೆ ನೀಡಿದ್ದಾರೆ ಎಂದು ಹೇಳಿದರು.

  ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಸ್.ಪುರುಷೋತ್ತಮ, ಶಿರಸಿ ಅರ್ಬನ್ ಬ್ಯಾಂಕ್ ಜನರಲ್ ಮೇನೇಜರ್ ಆರತಿ ಶೆಟ್ಟರ್, ನಿವೃತ್ತ ಪೊಲೀಸ್ ಅಧಿಕಾರಿ ಎನ್.ಟಿ.ಪ್ರಮೋದ ರಾವ್, ಉದ್ಯಮಿ ಸಾಯಿ ಗಾಂವಕರ, ಹಿರಿಯ ಸಹಕಾರಿ ಕೆ.ವಿ. ನಾಯಕ, ಸ್ಥಳೀಯ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ರಾಮು ಕೆಂಚನ್ ಇತರರು ಇದ್ದರು. ಕಾರ್ಯಕ್ರಮವನ್ನು ಶ್ರೀನಿಕೇತನ್ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts