ಜಿಲ್ಲೆಯಲ್ಲಿ 36 ಕರೊನಾ ಪಾಸಿಟಿವ್

ಹಾವೇರಿ: ಕೆವಿಜಿ ಬ್ಯಾಂಕ್ ಮ್ಯಾನೇಜರ್, ಕೆಎಸ್​ಆರ್​ಪಿ ಪೊಲೀಸ್, ಬಿಸಿಎಂ ಇಲಾಖೆ ವಾಹನ ಚಾಲಕ, ವಿದ್ಯುತ್ ಪ್ರತಿನಿಧಿ ಸೇರಿ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 36 ಜನರಿಗೆ ಕರೊನಾ ದೃಢಪಟ್ಟಿದೆ. 139 ಜನರು ಗುಣವಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1,920 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ 1,232 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 42 ಜನರು ಮೃತಪಟ್ಟಿದ್ದಾರೆ. ಒಟ್ಟು 646 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 163 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ, 483 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್ ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ರಾಣೆಬೆನ್ನೂರ ತಾಲೂಕಿನ 76, ಹಿರೇಕೆರೂರ ತಾಲೂಕಿನ 27, ಹಾವೇರಿ ತಾಲೂಕಿನ 19, ಬ್ಯಾಡಗಿ ತಾಲೂಕಿನ 14, ಹಾನಗಲ್ಲ ತಾಲೂಕಿನ ಮೂವರು ಸೇರಿ ಒಟ್ಟು 139 ಜನರು ಮಂಗಳವಾರ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಹಾವೇರಿ ತಾಲೂಕಿನಲ್ಲಿ 10, ರಾಣೆಬೆನ್ನೂರ 7, ಶಿಗ್ಗಾಂವಿ, ಹಾನಗಲ್ಲ ಹಾಗೂ ಹಿರೇಕೆರೂರ ತಾಲೂಕಿನಲ್ಲಿ ತಲಾ 5, ಸವಣೂರ ತಾಲೂಕಿನಲ್ಲಿ 4 ಜನರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.

ಸೋಂಕಿತರ ವಿವರ: ಹಾವೇರಿ ನಗರದಲ್ಲಿ 6, ಬೆಳವಗಿ, ಕನವಳ್ಳಿ, ಕೊಳೂರು, ನಾಗನೂರ ಗ್ರಾಮದಲ್ಲಿ ತಲಾ ಒಬ್ಬರಿಗೆ, ರಾಣೆಬೆನ್ನೂರ ನಗರದಲ್ಲಿ 6 ಹಾಗೂ ಅರೇಮಲ್ಲಾಪುರದಲ್ಲಿ 1, ಹಾನಗಲ್ಲ ತಾಲೂಕಿನ ಅಕ್ಕಿಆಲೂರ 2, ಹಾನಗಲ್ಲ ಪಟ್ಟಣ, ಶಂಕ್ರಿಕೊಪ್ಪ, ಡೊಳ್ಳೇಶ್ವರದಲ್ಲಿ ತಲಾ ಒಬ್ಬರಿಗೆ, ಶಿಗ್ಗಾಂವಿ 4, ಗಂಗೀಬಾವಿ ಗ್ರಾಮದಲ್ಲಿ ಒಬ್ಬರಿಗೆ, ಸವಣೂರ ತವರಮೆಳ್ಳಿಹಳ್ಳಿ 2, ಚಿಲ್ಲೂರಬಡ್ನಿ, ಹಿರೇಮೆಳ್ಳಿಹಳ್ಳಿಯಲ್ಲಿ ತಲಾ ಒಬ್ಬರಿಗೆ, ರಟ್ಟಿಹಳ್ಳಿಯಲ್ಲಿ 3, ಹಿರೇಕೆರೂರ, ಹಿರೇಮೊರಬದಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಮೂವರ ಸಾವು: ಹಾವೇರಿ ತಾಲೂಕು ಕನವಳ್ಳಿ ಗ್ರಾಮದ 42 ವರ್ಷದ ಪುರುಷ ತೀವ್ರ ಉಸಿರಾಟ ತೊಂದರೆಯಿಂದ ಆ. 7ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆಂಟಿಜನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಅಂದೇ ಮೃತಪಟ್ಟಿದ್ದಾರೆ. ಹಾವೇರಿ ನಗರದ ಪುರದ ಓಣಿಯ 70 ವರ್ಷದ ಮಹಿಳೆ ತೀವ್ರ ಉಸಿರಾಟ ತೊಂದರೆಯಿಂದ ಆ. 9ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆಂಟಿಜನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ. ರಾಣೆಬೆನ್ನೂರ ತಾಲೂಕು ಉಮಾಶಂಕರ ನಗರದ 62 ವರ್ಷದ ಮಹಿಳೆ ತೀವ್ರ ಉಸಿರಾಟ ತೊಂದರೆಯಿಂದ ಜುಲೈ 24ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆಂಟಿಜನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಜುಲೈ 26ರಂದು ಮೃತಪಟ್ಟಿದ್ದಾರೆ.

ಸೋಂಕಿನಿಂದ ಮೃತಪಟ್ಟವನ ಅಂತ್ಯಕ್ರಿಯೆಗೆ ವಿರೋಧ

ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದ ಬಳಿ ಗುರುತಿಸಿದ್ದ ಕೋವಿಡ್ ಸ್ಮಶಾನದಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮೃತನ ಹುಟ್ಟೂರಿನಲ್ಲಿ ಮಣ್ಣು ಮಾಡಿದ ಘಟನೆ ಮಂಗಳವಾರ ನಡೆದಿದೆ.

ಅರಬಗೊಂಡ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದಂತೆ ತಾಲೂಕಾಡಳಿತ ಕರೊನಾದಿಂದ ಮೃತಪಟ್ಟವರನ್ನು ಸರ್ಕಾರದ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿತ್ತು. ಕಳೆದ ವಾರದಿಂದ ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಬಿಸಲಹಳ್ಳಿ ಗ್ರಾಮದ 38 ವರ್ಷದ ಪುರುಷ ಮಂಗಳವಾರ ಮೃತಪಟ್ಟಿದ್ದು, ಈತನ ಶವವನ್ನು ಅರಬಗೊಂಡ ಗ್ರಾಮಕ್ಕೆ ತರುವ ಸುದ್ದಿ ಹರಡುತ್ತಿದ್ದಂತೆ, ಗುಂಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೇನಹಳ್ಳಿ, ಶಿವಪುರ, ಅರಬಗೊಂಡ ಗ್ರಾಮಸ್ಥರು ನಮ್ಮ ಗ್ರಾಮದ ಬಳಿ ಶವಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ನೇತೃತ್ವದಲ್ಲಿ ಮೃತನ ಹುಟ್ಟೂರಿನಲ್ಲಿ ಶವಸಂಸ್ಕಾರ ಮಾಡಿರುವುದಾಗಿ ತಿಳಿದುಬಂದಿದೆ.

Share This Article

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…