ಜಿಲ್ಲೆಯಲ್ಲಿ ಶೇ. 70.53ರಷ್ಟು ಮತದಾನ

ಗದಗ:ಲೋಕಸಭೆ ಚುನಾವಣೆ ಅಂಗವಾಗಿ ಮಂಗಳವಾರ ಹಾವೇರಿ ಮತ್ತು ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ. 70.53ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ 4,30,194 ಪುರುಷರು, 4,23,837 ಮಹಿಳೆಯರು ಹಾಗೂ 53 ಇತರೆ ಸೇರಿ ಒಟ್ಟು 8,54,084 ಮತದಾರರ ಪೈಕಿ 3,11,998(ಶೇ. 72.51) ಪುರುಷರು, 2,90,361(ಶೇ. 68.51) ಮಹಿಳೆಯರು ಸೇರಿ ಒಟ್ಟಾರೆ 6,02,360 (ಶೇ. 70.53)ಮತದಾರರು ಹಕ್ಕು ಚಲಾಯಿಸಿದ್ದಾರೆ.

ಹಾವೇರಿ ಲೋಕಸಭೆ ಮತಕ್ಷೇತ್ರ ವ್ಯಾಪ್ತಿಯ ಗದಗದಲ್ಲಿ ಶೇ. 72.41, ರೋಣದಲ್ಲಿ ಶೇ. 69.49, ಶಿರಹಟ್ಟಿಯಲ್ಲಿ ಶೇ. 69.87 ಸೇರಿ ಒಟ್ಟು 70.58ರಷ್ಟು ಮತದಾನವಾಗಿದೆ. ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ನರಗುಂದಲ್ಲಿ ಶೇ. 70.33ರಷ್ಟು ಮತದಾನವಾಗಿದೆ.

ವಿಧಾನಸಭಾ ಕ್ಷೇತ್ರವಾರು: ಶಿರಹಟ್ಟಿ-65ರಲ್ಲಿ 1,09,377 ಪುರುಷರು, 1,07,082 ಮಹಿಳೆಯರು ಹಾಗೂ 8 ಇತರೆ ಸೇರಿ ಒಟ್ಟು 2,16,467 ಮತದಾರರಿದ್ದು, ಆ ಪೈಕಿ 78,694(ಶೇ. 71.95) ಪುರುಷರು, 72,556(ಶೇ. 67.76) ಮಹಿಳೆಯರು ಸೇರಿ ಒಟ್ಟಾರೆ 1,51,250 (ಶೇ. 69.87)ಮತದಾರರು ಹಕ್ಕನ್ನು ಚಲಾಯಿಸಿದ್ದಾರೆ. ಗದಗ-66ರಲ್ಲಿ 1,10,274 ಪುರುಷರು, 1,10,384 ಮಹಿಳೆಯರು ಮತ್ತು 21 ಇತರೆ ಸೇರಿ ಒಟ್ಟು 2,20,658 ಮತದಾರರಿದ್ದು, ಆ ಪೈಕಿ 81,858(ಶೇ. 74.23) ಪುರುಷರು, 77,925 (ಶೇ. 70.61) ಮಹಿಳೆಯರು ಸೇರಿ ಒಟ್ಟಾರೆ 1,59,783(ಶೇ. 72.41)ಮತದಾನವಾಗಿದೆ. ರೋಣ-67ರಲ್ಲಿ 1,14,518 ಪುರುಷರು, 1,13,339 ಮಹಿಳೆಯರು ಮತ್ತು 18 ಇತರೆ ಸೇರಿ ಒಟ್ಟು 2,27,875 ಮತದಾರರಿದ್ದು, ಆ ಪೈಕಿ 81,266(ಶೇ. 70.96) ಪುರುಷರು, 77,080(ಶೇ. 68.01) ಮಹಿಳೆಯರು ಸೇರಿ ಒಟ್ಟಾರೆ 1,58,346 (ಶೇ. 69.49)ಮತದಾನವಾಗಿದೆ. ನರಗುಂದ-68 96,025 ಪುರುಷರು, 93,053 ಮಹಿಳೆಯರು ಮತ್ತು 6 ಇತರೆ ಸೇರಿ ಒಟ್ಟು 1,89,084 ಮತದಾರರಿದ್ದು, ಆ ಪೈಕಿ 70,180(ಶೇ. 73.09) ಪುರುಷರು, 62,800(ಶೇ. 67.49) ಮಹಿಳೆಯರು ಹಾಗೂ ಇತರೆ ಒಬ್ಬ ಸೇರಿ ಒಟ್ಟಾರೆ 1,32,981(ಶೇ. 70.33)ಮತದಾನವಾಗಿದೆ.

ಶೇ. 2.44 ರಷ್ಟು ಮತದಾನ ಹೆಚ್ಚಳ

ಜಿಲ್ಲೆಯಲ್ಲಿ 2009ರ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭೆ ಮತಕ್ಷೇತ್ರ ವ್ಯಾಪ್ತಿಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 59.51, ಗದಗ ಶೇ. 57.26, ರೋಣ ಶೇ. 58.99 ಹಾಗೂ ಬಾಗಲಕೋಟೆ ಲೋಕಸಭೆ ಮತಕ್ಷೇತ್ರ ವ್ಯಾಪ್ತಿಯ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶೇ. 61.71 ಸೇರಿ ಒಟ್ಟು ಶೇ. 59.29ರಷ್ಟು ಮತದಾನವಾಗಿತ್ತು. 2014ರ ಲೋಕಸಭಾ ಚುನಾವಣೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 69, ಗದಗ ಶೇ. 66.96, ರೋಣ ಶೇ. 67.60 ಹಾಗೂ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶೇ. 68.95 ಸೇರಿ ಒಟ್ಟು ಶೇ. 68.09ರಷ್ಟು ಮತದಾನವಾಗಿತ್ತು. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಶೇ. 70.53 ಮತದಾನವಾಗಿದ್ದು, ಕಳೆದ ಲೋಕಸಭೆ ಚುನಾವಣೆಗಿಂತ ಶೇ. 2.44ರಷ್ಟು ಮತದಾನ ಹೆಚ್ಚಿಗೆಯಾಗಿದೆ.

Leave a Reply

Your email address will not be published. Required fields are marked *