More

  ಜಿಲ್ಲೆಯಲ್ಲಿ ವಿವಿಧೆಡೆ ಉತ್ತಮ ಮಳೆ:ಜನಜೀವನ ಅಸ್ತವ್ಯಸ್ತ

  ಹಾಸನ: ಜಿಲ್ಲೆಯ ವಿವಿಧೆಡೆ ವರುಣಾರ್ಭಟ ಮುಂದುವರಿದಿದೆ. ಹಾಸನ ನಗರ, ಅರಸೀಕೆರೆ, ಚನ್ನರಾಯಪಟ್ಟಣ, ಸಕಲೇಶಪುರ ಮೊದಲಾದ ಕಡೆಗಳಲ್ಲಿ ಕಳದ ನಾಲ್ಕು ಜೋರು ಮಳೆಯಾಗುತ್ತಿದೆ.
  ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೆಲವು ಕಡೆ ರಸ್ತೆಗಳು ಕೆರೆಯಂತಾಗಿದ್ದರಿಂದ ವಾಹನ ಸವಾರರು ಪರದಾಡಿದರು.ಕೆಲವು ಕಡೆ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ವೀಕೆಂಡ್ ರಜೆಗೆ ಇರುಸು ಮುರುಸು ಉಂಟಾಗಿದೆ.
  ಮತ್ತೊಂದೆಡೆ ಉತ್ತಮ ಮಳೆಯಿಂದಾಗಿ ಕಳೆದ ವರ್ಷ ಬರದಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಹೊಸ ಮಂದಹಾಸ ಮೂಡಿದೆ. ಮಳೆ ಬಿದ್ದ ಪರಿಣಾಮ ಹಲವು ರೈತರು ಈಗಾಗಲೇ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
  ಗುರುವಾರದಿಂದ ಆರಂಭವಾಗಿ ಶುಕ್ರವಾರ ರಾತ್ರಿಯೂ ಸುರಿದ ಮಳೆ ಮಧ್ಯಾಹ್ನ ನಂತರವೂ ಬಿಟ್ಟು ಬಿಟ್ಟು ಜಿನುಗುತ್ತಿದೆ.ಎರಡು-ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ನೀರಿಲ್ಲದೆ ಒಡಲು ಬರಿದಾಗಿದ್ದ ಕೆರೆಗಳಲ್ಲಿ ಜೀವ ಕಳೆ ಬಂದಿದೆ.
  ಶನಿವಾರ ಕೂಡ ಹಾಸನ ನಗರ ಸೇರಿ ಸಕಲೇಶಪುರ ತಾಲ್ಲೂಕಿ ಕೆಲ ಭಾಗ, ಬೇಲೂರು ಸೇರಿ ವಿವಿಧೆಡೆ ಮಳೆ ಸುರಿದಿದೆ. ಇದರಿಂದ ಶುಂಠಿ, ಕಾಫಿ ತೋಟ, ಮೆಣಸಿನಕಾಯಿ, ತರಕಾರಿ ಬೆಳೆಗಳಿಗೆ ಅನುಕೂಲವಾಗಿದೆ. ಹಿಂಗಾರು ಮಳೆ ಕೈಕೊಟ್ಟರೂ, ಮುಂಗಾರು ಪೂರ್ವ ಮಳೆ ಕೈಹಿಡಿಯುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಹವಮಾನ ಇಲಾಖೆ ಕೂಡ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ.
  ಶುಕ್ರವಾರ ಜಿಲ್ಲೆಯ ವಿವಿಧೆಡೆ ಧಾರಕಾರ ಮಳೆಯಾಗಿದ್ದು, ಕೆಲವೆಡೆಗಳಲ್ಲಿ ಉತ್ತಮ ಮಳೆ ಸುರಿದಿರುವ ಬಗ್ಗೆ ವರದಿ ದಾಖಲಾಗಿದೆ.
  ಚನ್ನರಾಯಪಟ್ಟ 60.ಮಿಲಿ ಮೀಟರ್, ನುಗ್ಗೆಹಳ್ಳಿ 52.8ಮಿ.ಮೀ, ಹೊಳೆನರಸೀಪುರ 61.2ಮಿ.ಮೀ, ಶ್ರವಣಬೆಳಗೂಳ 50ಮಿ.ಮೀ, ಹಿರಿಸಾವೆ 46.2ಮಿ.ಮೀ, ಹೆತ್ತೂರು 48.2ಮಿ.ಮೀ, ಹಳ್ಳಿಮೈಸೂರು 39.1ಮಿ.ಮೀ, ಯಸಳೂರು 38.3 ಮಿ.ಮೀ ,ಹಾನುಬಾಳ್ 35.5ಮಿ.ಮೀ, ನಷ್ಟು ಮಳೆಯಾಗಿದೆ.

  ಹವಾಮಾನ ಇಲಾಖೆ ಮುನ್ನೆಚ್ಚರಿಕೆ :
  ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದ್ದು, ಜಿಲ್ಲೆಯ ವಿವಿಧಡೆ ಮೇ 23ರ ಬೆಳಗ್ಗೆ 8:30ರವರೆಗೆ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸುವ ಬಿರುಗಾಳಿಯ ಜೊತೆ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ ಎಂದು ವರದಿ ಹೇಳಿದೆ.ಹಾಸನ, ಮೈಸೂರು, ಮಂಡ್ಯ, ಕೋಲಾರ, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ. ಉಳಿದೆಡೆ ಸಾಧಾರಣದಿಂದ ಹಗುರ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts