More

  ಜಿಲ್ಲೆಯಲ್ಲಿ ಮೇ 7 ರಂದು ಮತದಾನ

  ಬಾಗಲಕೋಟೆ: ಭಾರತ ಚುನಾವಣಾ ಆಯೋಗವು ಲೋಕಸಭಾ ಚುನಾವಣೆ-2024 ಘೋಷಿಸಿದ್ದು, ಜಿಲ್ಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಚುನಾವಣೆಗೆ ಜಿಲ್ಲಾಡಳಿತ ಸಕಲ ಸನ್ನದ್ದವಾಗಿದೆ ಎಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿಗಳಾದ ಜಾನಕಿ ಕೆ.ಎಂ ತಿಳಿಸಿದರು.

  ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಈ ಕುರಿತು ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಎಪ್ರೀಲ್ 12 ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಮಾನಪತ್ರ ಸಲ್ಲಿಸಲು ಕೊನೆಯ ದಿನ ಎಪ್ರೀಲ್ 19 ಆದರೆ ನಾಮಪತ್ರ ಪರಿಶೀಲನೆ ಏಪ್ರೀಲ್ 20 ಆಗಿರುತ್ತದೆ. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ ಏಪ್ರೀಲ್ 22 ಆಗಿದ್ದು, ಮತದಾನ ಮತದಾನ ಮೇ 7 ರಂದು ನಡೆಯಲಿದೆ. ಮತ ಎಣಿಕೆ ಜೂನ್ 4 ರಂದು ನಡೆಯಲಿದೆ. ಚುನಾವಣಾ ಆಯೋಗ ಈ ಬಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳಿಗೆ ಒಟ್ಟು ರೂ.95 ಲಕ್ಷ ವರೆಗೆ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

  ಜಿಲ್ಲೆಯಲ್ಲಿ ಘೋಷಣೆ ಆದಾಗಿನಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಬರುವದರಿಂದ ಜಿಲ್ಲೆಯಲ್ಲಿನ ಎಲ್ಲ ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಪೋಸ್ಟರ್, ಬ್ಯಾನರ್ ತೆಗೆಯಲು ಈಗಾಗಲೇ ಕ್ರಮ ಜರುಗಿಸಲಾಗಿದೆ. ಸರಕಾರಿ ವಸತಿ ಗೃಹ ಹಾಗೂ ವಾಹನಗಳನ್ನು ಅಧಿಗೃಹಿಸಲಾಗಿದೆ. ಮಾದರಿ ನೀತಿ ಸಂಹಿತೆ ಪಾಲನೆಗೆ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಚೆಕ್‍ಪೋಸ್ಟಗಳನ್ನು ಕೂಡಲೇ ಕಾರ್ಯಗತಗೊಳಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ 26 ಚೆಕ್‍ಪೋಸ್ಟ್. 158 ಸೆಕ್ಟರ ಅಧಿಕಾರಿಗಳು, 66 ಪ್ಲೈಯಿಂಗ್ ಸ್ಕ್ವಾಡ್, 78 ಸ್ಟ್ಯಾಟಿಕ್ ಸರ್ವೇಲನ್ಸ ತಂಡ, 25 ವಿಡಿಯೋ ಸರ್ವೇಲನ್ಸ್ ಹಾಗೂ 8 ವಿಡಿಯೋ ವೀವಿಂಗ್ ತಂಡಗಳನ್ನು ರಚಿಸಲಾಗಿದೆ ಎಂದರು.

  ಜಿಲ್ಲೆಯಲ್ಲಿರುವ 7 ಮತಕ್ಷೇತ್ರ ಹಾಗೂ ಗದಗ ಜಿಲ್ಲೆಯ ನರಗುಂದ ಮತಕ್ಷೇತ್ರ ಸೇರಿ ಒಟ್ಟು 1781395 ಮತದಾರರಿದ್ದು, ಅದರಲ್ಲಿ 883993 ಪುರುಷರು, 897402 ಮಹಿಳಾ ಮತದಾರರು ಇದ್ದಾರೆ. ಯುವ ಮತದಾರರು 44707 ಇದ್ದರೆ. ಅಂಗವೈಫಲ್ಯ ಮತದಾರರು 24516 ಇದ್ದಾರೆ. ಸೇವಾ ಮತದಾರರು 3859 ಇದ್ದಾರೆ. ಮತದಾರರ ಪರಿಷ್ಕರಣೆ ಕಾರ್ಯ ಚಾಲ್ತಿಯಲ್ಲಿದ್ದು, ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅರ್ಹ ಮತದಾರರು ಅರ್ಜಿ ಸಲ್ಲಿಸಬಹುದಾಗಿದೆ. ಬಾಗಲಕೋಟೆ ಒಟ್ಟು 1946 ಮತಗಟ್ಟೆಗಳಿವೆ ಎಂದರು.

  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಇಂದಿನಿಂದಲೇ ವಿವಿಧ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 13 ಜನ ರೌಡಿ ಸೀಟರ್‍ಗಳನ್ನು ಗಡಿಪಾರು ಮಾಡಲಾಗಿದೆ. ಅನಧಿಕೃತವಾಗಿ ಹಣ, ಸಾಮಗ್ರಿ ಹಾಗೂ ಇತರೆ ಸಾಮಗ್ರಿಗಳ ಸಾಗಿಸುತ್ತಿರುವ ಬಗ್ಗೆ ಕಣ್ಗಾವಲು ಇಡುವ ಉದ್ದೇಶದಿಂದ 24 ಕಡೆ ಚೆಕ್‍ಪೋಸ್ಟ ಸ್ಥಾಪಿಸಲಾಗಿದೆ ಎಂದರು.

  ಜಿಲ್ಲಾ ಪಂಚಾಯತ ಸಿಇಓ ಹಾಗೂ ಸ್ವೀಪ್, ಎಂಸಿಸಿ ನೋಡಲ್ ಅಧಿಕಾರಿ ಶಶಿಧರ ಕುರೇರ ಮಾತನಾಡಿ 1 ಲಕ್ಷ ಮೇಲ್ಪಟ್ಟು ಬ್ಯಾಂಕ್‍ನಲ್ಲಿ ನಡೆಯುವ ಹಣದ ವ್ಯವಹಾರದ ಮೇಲೆ ನಿಗಾ ಇಡಲಾಗುತ್ತಿದೆ. ಅಲ್ಲದೇ 50 ಸಾವಿರ ರೂ.ಗಳ ಮೆಲ್ಪಟ್ಟ ಹಣವನ್ನು ದಾಖಲೆ ಇದ್ದಲೆ ದೊರೆತಲ್ಲಿ ಹಣವನ್ನು ಜಪ್ತ ಮಾಡಲಾಗುತ್ತದೆ. ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮತದಾನ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಮತಕ್ಷೇತ್ರಕ್ಕೆ 9 ವಿಶೇಷ ಮತಗಟ್ಟೆ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

  ಪತ್ರಿಕಾಗೋಷ್ಠಿಯಲ್ಲಿ ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಶಶೀಧರ ಕುರೇರ, ಚುನಾವಣಾ ತಹಶೀಲ್ದಾರ ಪಂಪಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts