ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಹಿನ್ನಡೆ

ಜಿಲ್ಲೆಯಲ್ಲಿ, ಜೆಡಿಎಸ್, ಸಂಘಟನೆಗೆ, ಹಿನ್ನಡೆ, Back, To JDS, Organization, In, District,

ಶಿರಸಿ: ಉತ್ತನ ಕನ್ನಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಹಿನ್ನಡೆ ಆಗಿದ್ದು ಸತ್ಯ. ಆದರೆ, ಬಿಜೆಪಿ ವರ್ತನೆಯಿಂದ ಸಾರ್ವಜನಿಕರಿಗೆ ಬೇಸರ ಮೂಡಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಎಚ್. ಕೋನರಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ದೇವೇಗೌಡರ ಕುಟುಂಬದವರು ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯಕ್ಕೆ ಬರಲಿಲ್ಲ. ಜನತೆಯಿಂದ ಆರಿಸಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಜೆಡಿಎಸ್​ನಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂಬ ವಿರೋಧಿಗಳ ಹೇಳಿಕೆ ಅರ್ಥವಿಲ್ಲದ್ದು. ಜೆಡಿಎಸ್ ಪಕ್ಷವೇ ಒಂದು ಕುಟುಂಬದಂತಿದೆ. ಪಕ್ಷದ ಪ್ರತಿ ಕಾರ್ಯಕರ್ತರೂ ಈ ಕುಟುಂಬಕ್ಕೆ ಸೇರಿದ್ದಾರೆ ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುಗೆ ನೀಡುವಲ್ಲಿ ತಾರತಮ್ಯ ಧೋರಣೆ ಮಾಡಿದೆ. ಕೇಂದ್ರ ಸರ್ಕಾರಕ್ಕೆ 2635 ಕೋಟಿ ರೂ. ಅನುದಾನ ನಾವು ಕೇಳಿದ್ದರೆ, ನೀಡಿದ್ದು 950 ಕೋಟಿ ರೂ. ಮಾತ್ರ. ಬಿಜೆಪಿಯ 17 ಸಂಸದರಿದ್ದರೂ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಚಕಾರವೆತ್ತಲಿಲ್ಲ’ ಎಂದರು. ಜಿಲ್ಲೆಯ ಆಸಾಮಿ ಖಾತೆ ಸಾಲ ಮನ್ನಾ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಸ್ಥಳೀಯ ಶಾಸಕರು ಸದನದಲ್ಲಿ ಈ ಬಗ್ಗೆ ರ್ಚಚಿಸಬೇಕಿತ್ತು’ ಎಂದರು. ಪ್ರಮುಖರಾದ ಡಾ. ಶಶಿಭೂಷಣ ಹೆಗಡೆ, ಬಿ. ಆರ್. ನಾಯ್ಕ, ಸುಭಾಸ ಮುಂಡೂರ ಇತರರಿದ್ದರು.
ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸೋಣ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಅವಕಾಶ ಸಿಕ್ಕರೆ ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂಬ ಅಭಿಪ್ರಾಯ ಕಾರ್ಯಕರ್ತರ ಸಭೆಯಲ್ಲಿ ವ್ಯಕ್ತಗೊಂಡಿತು. ಪಕ್ಷದ ಪ್ರಮುಖ ಡಾ. ಶಶಿಭೂಷಣ ಹೆಗಡೆ ಮಾತನಾಡಿ,‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಾವು ಮತ ಕೇಳುವುದಕ್ಕೂ ಸಿದ್ಧರಾಗಿರಬೇಕು. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮುಖ್ಯ ಗುರಿಯಾಗಬೇಕು. ಎಂದರು.
ಖಾಸಗಿ ಕಾರಿನಲ್ಲಿ ವಾಪಸು:ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಅವರು ನಗರಕ್ಕೆ ಸರ್ಕಾರಿ ಕಾರಿನಲ್ಲಿ ಆಗಮಿಸಿದ್ದರು. ಕಾರ್ಯಕರ್ತರ ಸಭೆ ನಡೆಸುವ ವೇಳೆ ಲೋಕಸಭೆ ಚುನಾವಣೆ ಘೊಷಣೆ ಯಾಗಿದೆ. ಹೀಗಾಗಿ, ಕಾರ್ಯಕರ್ತರ ಸಭೆಯ ಬಳಿಕ ಅವರು ಖಾಸಗಿ ಕಾರಿನಲ್ಲಿ ಬೆಂಗಳೂರಿಗೆ ವಾಪಸಾದರು.