ಚಾಮರಾಜನಗರ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯು ಜಿಲ್ಲೆಯಾದ್ಯಂತ ಡಿ. 4 ರಿಂದ 6 ವರೆಗೆ ಸಂಚರಿಸಿ ಕನ್ನಡ ನಾಡು, ನುಡಿ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸಲಿದೆ.
ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯು ಡಿ.4ರಂದು ಹನೂರು ಹಾಗೂ ಕೊಳ್ಳೇಗಾಲ ಭಾಗದಲ್ಲಿ ಸಂಚರಿಸಲಿದೆ. ಬಳಿಕ ಡಿ.5 ರಂದು ಯಳಂದೂರು ಹಾಗೂ ಚಾಮರಾಜನಗರದಲ್ಲಿ ಸಂಚರಿಸಲಿದೆ. ಡಿ.6ರಂದು ಗುಂಡ್ಲುಪೇಟೆ ಭಾಗದಲ್ಲಿ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
TAGGED:cha chamarajanagara news