More

    ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಫೆ. 1ರಿಂದ

    ನರಗುಂದ: ತಾಲೂಕಿನ ವಾಸನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಫೆ. 1 ಮತ್ತು 2ರಂದು ಜಿಲ್ಲಾ ಮಟ್ಟದ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಬಡ್ಡಿ ಅಸೋಸಿಯೇಷನ್ ಗದಗ ಜಿಲ್ಲಾ ಸಂಯೋಜಕ ಎಂ.ಜಿ. ಸನ್ನಿ ತಿಳಿಸಿದರು.

    ರಾಜ್ಯ ಕಬಡ್ಡಿ ಅಸೋಸಿಯೇಷನ್ ಸಂಘಟಕ, ಸಂಚಾಲಕರಿಗಾಗಿ ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ, ತುಳಸಿಗೆರೇಶ್ವರ ಯುವಕ ಮಂಡಳದ ಆಶ್ರಯದಲ್ಲಿ 2019-20ನೇ ಸಾಲಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, 6ನೇ ತರಗತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಳ್ಳಬಹುದು. ಅರ್ಹ ಕ್ರೀಡಾಪಟುಗಳು ಜ.31ರೊಳಗಾಗಿ ಹೆಸರನ್ನು www.schoolkabaddileague.comಇಲ್ಲವೇ ಈ ಮೇಲ್: schoolkabaddileague@ gmail.com ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಒಂದು ವೇಳೆ ವೆಬ್​ಸೈಟ್​ನಲ್ಲಿ ತಾಂತ್ರಿಕ ದೋಷ ಕಂಡು ಬಂದಲ್ಲಿ ಶಾಲಾ ದೃಢೀಕರಣ ಪತ್ರ, ಆಧಾರ್ ಕಾರ್ಡ್ ನಕಲು, ಇತ್ತೀಚಿನ 3 ಭಾವಚಿತ್ರಗಳೊಂದಿಗೆ ನೇರವಾಗಿ ಆಗಮಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಪಂದ್ಯಾವಳಿಯಲ್ಲಿ ಕನಿಷ್ಠ 16 ತಂಡಗಳು ಭಾಗವಹಿಸಲಿದ್ದು, ವಿಜೇತ ನಾಲ್ಕು ತಂಡಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದರು.

    ಹೆಚ್ಚಿನ ಮಾಹಿತಿಗೆ ಎಂ.ಜಿ. ಸನ್ನಿ (ಮೊನಂ: 87469 43581), ಸಹ ಸಂಚಾಲಕ ಮಂಜುನಾಥ ಗಡ್ಡೆನ್ನವರ (94807 87622), ನೀಲಪ್ಪ ತಲಬಟ್ಟಿ (96636 88935), ದೈಹಿಕ ಶಿಕ್ಷಕ ಡಾ. ಬಸವರಾಜ ಅಂಬಿಗೇರ (72044 70877) ಅವರನ್ನು ಸಂರ್ಪಕಿಸಬಹುದು ಎಂದರು.

    ಸಭೆಯಲ್ಲಿ ತಾಪಂ ಅಧ್ಯಕ್ಷ ವಿಠಲ ತಿಮ್ಮರಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಬಿ. ಸಿರಿಯಪ್ಪಗೌಡ್ರ, ಸದಸ್ಯ ಗಿರೀಶ ನೀಲರಡ್ಡಿ, ಬಿ.ಬಿ. ಪಾಟೀಲ, ಟಿ.ಬಿ. ಸಕ್ರಪ್ಪನವರ, ಟಿ.ಆರ್. ತಾಯಣ್ಣವರ, ಎಂ.ಡಿ. ಗಡ್ಡೆಣ್ಣವರ, ಶಿವಾನಂದ ತೆಗ್ಗಿನಮನಿ, ಮಹಾಂತೇಶ ತಳವಾರ, ದೇವರಾಜ ನಾಗನೂರ, ರುದ್ರಪ್ಪ ಧಾರವಾಡ, ಬಿ.ಕೆ. ಹಡಗಲಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts