ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಮಠಮಾನ್ಯಗಳು, ವಿವಿಧ ಪಕ್ಷಗಳ ಕಚೇರಿಯಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು.
ಡಿಸಿ ಕಚೇರಿ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಿಸಿ ಟಿ.ವೆಂಕಟೇಶ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ವೆಂಕಟೇಶ್ ನಾಯ್ಕ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್ ಇತರರಿದ್ದರು.
ಎಸ್‌ಜೆಎಂ ಕ್ಯಾಂಪಸ್: ನಗರದ ಎಸ್‌ಜೆಎಂ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ನೆರವೇರಿಸಿದರು. ಸದಸ್ಯ ಡಾ. ಬಸವಕುಮಾರ ಶ್ರೀ, ಎಸ್.ಎನ್. ಚಂದ್ರಶೇಖರ್ ಇತರರಿದ್ದರು. ಇದೇ ವೇಳೆ ನಿವೃತ್ತ ನೌಕರರಿಗೆ, ಪಿಎಚ್‌ಡಿ ಪದವಿ ಪಡೆದವರಿಗೆ, ರ‌್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ, ಕ್ರೀಡಾ ಸಾಧಕರಿಗೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಕಚೇರಿ: ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಂಸದ ಗೋವಿಂದ ಎಂ. ಕಾರಜೋಳ ರಾಷ್ಟ್ರ ಧ್ವಜಾರೋಹಣ ನೇರವೇರಿಸಿದರು. ಮುಖಂಡರಾದ ಮಾಧುರಿ ಗಿರೀಶ್, ಮಲ್ಲಿಕಾರ್ಜುನ, ನಾಗರಾಜ್ ಬೇದ್ರೆ, ವೆಂಕಟೇಶ್ ಯಾದವ್, ಬಸಮ್ಮ, ರೇಖಾ, ರೇವತಿ, ಲೋಕೇಶ್ ಇತರರಿದ್ದರು.
ವಾರ್ತಾ ಇಲಾಖೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಪಿ.ಎಂ.ವೇಣುಗೋಪಾಲ, ಜಿ.ವೆಂಕಟೇಶ್, ಎಸ್. ಚಂದ್ರಶೇಖರ್, ಎಂ.ಜೆ.ಬೋರೇಶ, ಆರ್.ತಿಮ್ಮಶೆಟ್ಟಿ ಇದ್ದರು.
ಜೆ.ಎನ್.ಕೋಟೆ: ಚಿತ್ರದುರ್ಗ ತಾಲೂಕಿನ ಜೆ.ಎನ್.ಕೋಟೆ ಗ್ರಾಮದ ಆಯುಷ್ ಇಲಾಖೆಯ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಆಡಳಿತ ವೈದ್ಯಾಧಿಕಾರಿ ಪಿ.ವಿಜಯಲಕ್ಷ್ಮೀ ಧ್ವಜಾರೋಹಣ ನೆರವೇರಿಸಿದರು. ಯೋಗ ತರಬೇತುದಾರ ರವಿ ಕೆ.ಅಂಬೇಕರ್, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶುವೈದ್ಯ ಪರೀಕ್ಷಕಿ ಅನ್ನಪೂರ್ಣ, ಗ್ರಾಪಂ ಅಧ್ಯಕ್ಷ ಮಲ್ಲಣ್ಣ, ಸದಸ್ಯರಾದ ನೇತ್ರಾವತಿ, ಈರಮ್ಮ, ಶಿವಮೂರ್ತಿ, ಸಿಬ್ಬಂದಿ ಶಾರದಮ್ಮ, ರಘು, ಗ್ರಾಮದ ಮುಖಂಡರಾದ ಪ್ರಸನ್ನಕುಮಾರ್, ಅರುಣ್‌ಕುಮಾರ್, ಪಾಲಣ್ಣ, ಇತರರಿದ್ದರು.
ಮಾನವ ಬಂಧುತ್ವ ವೇದಿಕೆ: ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕದಿಂದ ವಿವಿಧೆಡೆ 76ನೇ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ಸಂಕಲ್ಪ ದಿನ ಆಚರಿಸಲಾಯಿತು. ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿ, ಮದಕರಿಪುರ, ಗೋನೂರು, ಬಚ್ಚಬೋರನಹಟ್ಟಿ, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ, ಹಿರಿಯೂರು ಸೇರಿ ಗ್ರಾಮ ಘಟಕಗಳಲ್ಲಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿ ಎಚ್.ಒ.ತಿಪ್ಪೇಸ್ವಾಮಿ, ವೇದಿಕೆ ಜಿಲ್ಲಾ ಸಂಚಾಲಕ ಪಿ.ಬಸವರಾಜ, ಪದಾಧಿಕಾರಿಗಳಾದ ಬೈಲಮ್ಮ, ಡಿ.ರಂಗಸ್ವಾಮಿ, ಹನುಮಂತಪ್ಪ, ಪ್ರಭಾವತಿ ಇತರರಿದ್ದರು.
ಕೆಎಂಎಫ್ ಸಂಸ್ಥೆ: ಗಣರಾಜ್ಯೋತ್ಸವ ಅಂಗವಾಗಿ ನಗರದ ವಿ.ಪಿ.ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕರ್ನಾಟಕ ಹಾಲು ಮಹಾಮಂಡಳಿಯಿಂದ ನಂದಿನಿ ಕುಕ್ಕೀಸ್, ಧಾರವಾಡ ಪೇಡ ಹಾಗೂ ಬಾದಾಮಿ ಹಾಲು ವಿತರಿಸಲಾಯಿತು. ಕೆಎಂಎಫ್ ದಾವಣಗೆರೆ ಮಾರಾಟ ಮಳಿಗೆ ಮುಖ್ಯಸ್ಥ ಜಿ.ಬಿ.ಮಂಜುನಾಥ್, ಶಾಲೆಯ ಮುಖ್ಯಶಿಕ್ಷಕ ಎನ್.ಎನ್.ಸುರೇಶ್, ಶಿಕ್ಷಕರಾದ ಎಂ.ಜೆ.ಸುಕನ್ಯಾ, ಸರಸ್ಪತಿ, ಅಪ್ಸರ್ ಭಾನು, ಎಸ್.ಮಂಜಪ್ಪ, ಅಶ್ರಫ್ ಉಲ್ಲಾ ಇತರರಿದ್ದರು.
ಬಾಪೂಜಿ ಸಮೂಹ ಸಂಸ್ಥೆ: ಪಿಳ್ಳೆಕೆರೆನಹಳ್ಳಿಯ ಬಾಪೂಜಿ ಸಮೂಹ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಇತರರಿದ್ದರು.
ವಿದ್ಯಾರ್ಥಿ ನಿಲಯ: ತುರುವನೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಗ್ರಾಪಂ ಸದಸ್ಯ ಡಿ.ಆರ್.ಮಂಜುನಾಥ್, ವಾರ್ಡನ್ ವಸಂತಕುಮಾರ್, ಸಿಬ್ಬಂದಿ ಲಲಿತಮ್ಮ, ಮನೋಹರ ಇತರರಿದ್ದರು.
ತುರುವನೂರು ಗ್ರಾಮದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಗ್ರಾಪಂ ಅಧ್ಯಕ್ಷೆ ನಾಗರತ್ನ ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ಡಿ.ಆರ್.ಮಂಜುನಾಥ್, ಹಳೇಮನೆ ನಾಗರಾಜ್, ಪಿಡಿಒ ಖಲೀಂ, ಮಾರ್ಕಾಂಡ, ಸಂತೋಷ್ ಇತರರಿದ್ದರು.