Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಜಿಗಣಿ ಕೆರೆ ಅಸ್ತಿತ್ವಕ್ಕೆ ತ್ಯಾಜ್ಯವೇ ಕುತ್ತು

Thursday, 12.07.2018, 3:43 AM       No Comments

ಆನೇಕಲ್: ಜಿಗಣಿ ಪುರಸಭಾ ಜನಪ್ರತಿನಿಧಿಗಳು ಹಾಗೂ ಆಡಳಿತಾಧಿಕಾರಿಗಳ ನಿರ್ಲಕ್ಷ್ಯದಿಂದ ಜಿಗಣಿ ಕೆರೆಗೆ ಕೊಳಚೆ ನೀರು ಸೇರುತ್ತಿದೆ. ಇದರಿಂದಾಗಿ ನೀರು ಜಾನುವಾರುಗಳ ಉಪಯೋಗಕ್ಕೂ ಬಾರದಂತಾಗಿದೆ.

100 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆಯಾದರೂ ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸನಿಹಕ್ಕೆ ಬಂದಿದೆ.

ಏಳು ವರ್ಷದಿಂದ ಕೆರೆಯಲ್ಲಿ ನೀರಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿತ್ತು. ಇದರಿಂದಲೇ ತ್ಯಾಜ್ಯ ಪ್ರಮಾಣ ಸೇರಿಸಲು ಕಾರಣವಾಗಿದೆ. ಕಳೆದ ವರ್ಷ ಸುರಿದ ಮಳೆಗೆ ಕೆರೆ ತುಂಬಿ ಕೋಡಿ ಹೋಗಿತ್ತು. ಪ್ರಸ್ತುತ ಕೆರೆಯಲ್ಲಿ ನೀರಿದ್ದರೂ ತ್ಯಾಜ್ಯ ಪ್ರಮಾಣ ಹೆಚ್ಚಿರುವ ಕಾರಣ ಜೀವ ಜಲ ಬಳಕೆಗೆ ಬಾರದಂತಾಗಿದೆ.

ಪಿಟ್​ಗುಂಡಿ ನೀರು ಕೆರೆಗೆ!: ಜಿಗಣಿ ಪುರಸಭಾ ವ್ಯಾಪ್ತಿಯ ಎಲ್ಲ ವಾರ್ಡ್​ಗಳ ಒಳ ಚರಂಡಿ ನೀರನ್ನು ಕೆರೆಗೆ ಬಿಡಲಾಗಿದೆ. ಇದರಲ್ಲಿ ಕೆಲ ಮನೆಗಳ ಪಿಟ್ ಗುಂಡಿ ನೀರು ಚರಂಡಿ ಮೂಲಕ ಕೆರೆಗೆ ಹರಿಯುತ್ತಿದೆ. ಈ ಭಾಗದಲ್ಲಿನ ಕಾರ್ಖಾನೆಗಳ ಕೆಮಿಕಲ್ ಕೂಡ ಕೆರೆ ಒಡಲು ಸೇರುತ್ತಿದೆ. ಪುರಸಭಾ ವ್ಯಾಪ್ತಿಯ ಬಹುತೇಕ ವಾರ್ಡ್​ಗಳ ಕಸವನ್ನು ಕೆರೆಗೆ ಸುರಿಯಲಾಗುತ್ತಿದೆ.

ಪ್ರತಿಭಟನೆಗಿಲ್ಲ ಕಿಮ್ಮತ್ತು: ಗ್ರಾಮಸ್ಥರು ಕೆರೆ ಉಳಿಸಿ ಎಂದು ಪುರಸಭೆ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಿದ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮನವಿ ಸ್ವೀಕರಿಸಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಇಂದಿಗೂ ಕೆರೆ ತ್ಯಾಜ್ಯದಿಂದ ಮುಕ್ತವಾಗಿಲ್ಲ.

 

ಕೆರೆಯಲ್ಲಿ ಒಳ ಚರಂಡಿ ನೀರು ಹಾಗೂ ಕಸ ತುಂಬಿದೆ. ಇದರಿಂದ ನೀರು ದನ-ಕರು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಕಸವನ್ನು ಕೆರೆಗೆ ಹಾಕಬಾರದು ಹಾಗೂ ಒಳಚರಂಡಿ ನೀರು ಬಿಡಬಾರದು ಎಂದು ಕಾನೂನು ಇದ್ದರೂ ಮುಖ್ಯಾಧಿಕಾರಿ ಬೇಜವಾಬ್ದ್ದಾರಿಯಿಂದ ಕೆರೆ ಅವನತಿಯತ್ತ ಸಾಗಿದೆ.

| ಜಿಗಣಿ ಎಸ್.ಮುನಿಯಪ್ಪ, ಸ್ಥಳೀಯ ನಿವಾಸಿ

 

ಜಿಗಣಿ ಹೋಬಳಿಯಲ್ಲೇ ಇದು ದೊಡ್ಡ ಕೆರೆ. ಆದರೆ ಇಲ್ಲಿ ಒಳಚರಂಡಿ ನೀರು, ಖಾಸಗಿ ಕಂಪನಿಗಳ ರಾಸಾಯನಿಕ ಮಿಶ್ರಿತ ನೀರು ಕೆರೆಗೆ ಹರಿಯುತ್ತಿದೆ. ಪರಿಸರ ಮಾಲಿನ್ಯ ಅಧಿಕಾರಿಗಳು ಕೂಡಲೇ ಗಮನಹರಿಸಿ ಜಲಮೂಲ ರಕ್ಷಿಸಬೇಕು.

| ರಮೇಶ್, ಅಖಿಲ ಭಾರತ ದೇಶಾಭಿಮಾನಿಗಳ ಸಂಘದ ಸಂಸ್ಥಾಪಕ

 

ಪುರಸಭಾ ವ್ಯಾಪ್ತಿಯಲ್ಲಿ ಕಸ ವಿಲೇಗೆ ಜಾಗವಿಲ್ಲ. ಅನೇಕ ಬಾರಿ ಮೇಲಧಿಕಾರಿಗಳಿಗೆ ಜಮೀನು ನೀಡುವಂತೆ ಮನವಿ ಮಾಡಲಾಗಿದೆ. ಹಾಗೆಯೇ ಒಳಚರಂಡಿ ನೀರು ಕೆರೆಗೆ ಹರಿಯುವುದನ್ನು ತಡೆಯಲು ಎಸ್​ಟಿಪಿ ಘಟಕ ಸ್ಥಾಪನೆಗೂ ಕೋರಿಕೆ ಅರ್ಜಿ ಸಲ್ಲಿಸಲಾಗಿದೆ.

| ಚೇತನ್ ಕೊಳವಿ, ಪುರಸಭಾ ಮುಖ್ಯಾಧಿಕಾರಿ, ಜಿಗಣಿ

Leave a Reply

Your email address will not be published. Required fields are marked *

Back To Top